Pushpa Box Office Collection : ಬಾಕ್ಸಾಫೀಸಿನಲ್ಲಿ ಧೂಳೆಬ್ಬಿಸಿದ ‘ಪುಷ್ಪಾ’ : ಕೆಜಿಎಫ್​ ಕಲೆಕ್ಷನ್​ ಮುರಿದ ಅಲ್ಲು ಅರ್ಜುನ್​

ಅಲ್ಲು ಅರ್ಜುನ್​ ಹಾಗೂ ಸುಕುಮಾರ್​ ಕಾಂಬಿನೇಷನ್​ನಲ್ಲಿ ಬೆಳ್ಳಿತೆರೆಗೆ ಅಪ್ಪಳಿಸಿರುವ ಸಿನಿಮಾ ಪುಷ್ಪಾ(Pushpa Box Office Collection) ಬಾಕ್ಸಾಫೀಸಿನಲ್ಲಿ ಗಲ್ಲಾಪೆಟ್ಟಿಗೆ ಸೌಂಡ್​ ಮಾಡುತ್ತಿದೆ. ನಟಿ ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಸಿನಿಮಾ ರಿಲೀಸ್​ ಆದ ಮೊದಲ ದಿನವೇ ಕೋಟಿಗಟ್ಟಲೇ ಕಲೆಕ್ಷನ್​ ಸಂಪಾದಿಸುವಲ್ಲಿ ಯಶಸ್ವಿಯಾಗಿದೆ ಎನ್ನಲಾಗಿದೆ.

ವಿಶೇಷವಾಗಿ ಮಹಾರಾಷ್ಟ್ರದಲ್ಲಿ ಪುಷ್ಪಾ ಸಿನಿಮಾ ಭರ್ಜರಿ ಹಿಟ್​ ಆದಂತೆ ಕಾಣುತ್ತಿದೆ.ಮೊದಲ ದಿನವೇ ಪುಷ್ಪಾ ಸಿನಿಮಾವು ಇಲ್ಲಿ ಬರೋಬ್ಬರಿ 3 ಕೋಟಿ ರೂಪಾಯಿಯನ್ನು ಸಂಪಾದಿಸಿದೆ. ಅದರಲ್ಲೂ 1.50 ಕೋಟಿ ರೂಪಾಯಿ ಹಣವು ಕೇವಲ ಮುಂಬೈ ನಗರದಲ್ಲೇ ಗಳಿಸಲಾಗಿದೆ.

ಆದರೆ ಉತ್ತರ ಭಾರತದಲ್ಲಿ ಪುಷ್ಪಾ ಸಿನಿಮಾ ಕ್ರೇಜ್​ ಅಷ್ಟೊಂದು ಇದ್ದಂತೆ ಕಾಣುತ್ತಿಲ್ಲ. ದೆಹಲಿ ಹಾಗೂ ಪಂಜಾಬ್​​ ಭಾಗಗಳಲ್ಲಂತೂ ಪುಷ್ಪಾ ಅತ್ಯಂತ ಕಡಿಮೆ ಪ್ರದರ್ಶನ ಕಂಡಿದೆ ಎನ್ನಲಾಗಿದೆ. ಇನ್ನು ಹೋಮ್​ಟೌನ್​ ಬಗ್ಗೆ ಮಾತನಾಡೊದಾದ್ರೆ ಪುಷ್ಪಾ ಸಿನಿಮಾವು 11. 45 ಕೋಟಿ ಸಂಗ್ರಹಿಸುವ ಮೂಲಕ ಬಾಕ್ಸಾಫೀಸಿನಲ್ಲಿ ಹೊಸ ದಾಖಲೆಯನ್ನೇ ನಿರ್ಮಿಸಿದೆ. ತೆಲಂಗಾಣದಲ್ಲೂ ಐದು ಪ್ರದರ್ಶನ ಕಂಡಿರುವ ಈ ಸಿನಿಮಾ ಉತ್ತಮ ಮೊತ್ತದ ಕಲೆಕ್ಷನ್​ ಮಾಡಿದೆ ಎನ್ನಲಾಗಿದೆ.


ಹಿಂದಿ ಟ್ರೇಡ್​ ಸಮೀಕ್ಷೆಯ ಪ್ರಕಾರ ಪುಷ್ಪಾ ಸಿನಿಮಾವು ವೀಕೆಂಡ್​ನಲ್ಲಿ ಉತ್ತಮ ಕಲೆಕ್ಷನ್​ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ. ಅಲ್ಲದೆ ಪುಷ್ಪಾ ಸಿನಿಮಾದ ಹಿಂದಿ ಆವೃತ್ತಿಯು ಕೆಜಿಎಫ್​ನ ಒಂದು ದಿನದ ಸಂಗ್ರಹವನ್ನು ಮೀರಿಸಿದೆ ಎನ್ನಲಾಗಿದೆ. ತಮಿಳುನಾಡಿನಲ್ಲಿ ಪುಷ್ಪಾ ಸಿನಿಮಾವು ಬರೋಬ್ಬರಿ 4 ಕೋಟಿ ರೂಪಾಯಿ ಗಳಿಸಿದೆ ಎನ್ನಲಾಗಿದೆ.ರಾಜ್ಯದಲ್ಲಿ ಈಗಾಗಲೇ 3.60 ಕೋಟಿ ರೂಪಾಯಿಗಳನ್ನು ಬಾಚಿರುವ ಪುಷ್ಪಾ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಮಲಯಾಳಂ ಭಾಷೆಯಲ್ಲಿಯೂ ಈ ಸಿನಿಮಾ ಉತ್ತಮ ಆರಂಭವನ್ನು ಪಡೆದುಕೊಂಡಿದೆ. ‘ಪುಷ್ಪ’ದ ಸಂಪೂರ್ಣ ವಿರಾಮ ಇಲ್ಲಿದೆ – ದೇಶಾದ್ಯಂತ ವಿವಿಧ ಪ್ರದೇಶಗಳಲ್ಲಿನ ಸಂಗ್ರಹಗಳು

  • ಮುಂಬೈ – 1,41,00,000
  • ದೆಹಲಿ / ಯುಪಿ – 62,00,000
  • ಪೂರ್ವ ಪಂಜಾಬ್ – 14,00,000
  • ರಾಜಸ್ಥಾನ – 16,00,000
  • ಸಿಪಿ ಬೇರಾರ್ – 49,00,000
  • ಆಂಧ್ರ ಪ್ರದೇಶ – 30,50,00,000
  • ಮೈಸೂರು / ಕರ್ನಾಟಕ – 5,23,00,000
  • ತಮಿಳುನಾಡು – 3,07,00,000
  • ಕೇರಳ – 1,28,00,000
  • ಪಶ್ಚಿಮ ಬಂಗಾಳ – 24,00,000
  • ಬಿಹಾರ – 20,00,000

ಇದನ್ನು ಓದಿ : Omicron third wave : ‘ಫೆಬ್ರವರಿಯಿಂದ ದೇಶದಲ್ಲಿ ಕೊರೊನಾ ಮೂರನೇ ಅಲೆ’ : ಕೋವಿಡ್​ ಸೂಪರ್​ಮಾಡೆಲ್​ ಸಮಿತಿ

ಇದನ್ನೂ ಓದಿ: Nora Fatehi : ಮಿಂಚಿನಂತೆ ಬಳುಕುವ ತಾರೆ : ಬಾಲಿವುಡ್ ನ ನಂ1. ಐಟಂ ಡ್ಯಾನ್ಸರ್ ನೋರಾ ಪತೇಹಿ

ಇದನ್ನೂ ಓದಿ : ಐಟಂ ಸಾಂಗ್ ಅಂದ್ರೇ ನಂಗೇ ದೇವರ ಹಾಡಿದ್ದಂತೆ : ಪುಷ್ಪ ಮ್ಯೂಸಿಕ್ ಡೈರೈಕ್ಟರ್ ವಿವಾದ

ಇದನ್ನೂ ಓದಿ : ಬಿಗ್ ಸ್ಕ್ರಿನ್ ಗೆ ಮದ್ಯದ ದೊರೆ : ವೆಬ್ ಸೀರಿಸ್ ರೂಪದಲ್ಲಿ ವಿಜಯ್ ಮಲ್ಯ ಸ್ಟೋರಿ

Pushpa Box Office Collection opening day: Beats ‘KGF’ Day 1 collections

Comments are closed.