ಶುಕ್ರವಾರ, ಮೇ 9, 2025
HomeNationalNaxal Leader Hosagadde Prabha : ನಕ್ಸಲ್‌ ನಾಯಕಿ ಹೊಸಗದ್ದೆ ಪ್ರಭಾ ಶರಣಾಗತಿ

Naxal Leader Hosagadde Prabha : ನಕ್ಸಲ್‌ ನಾಯಕಿ ಹೊಸಗದ್ದೆ ಪ್ರಭಾ ಶರಣಾಗತಿ

- Advertisement -

ಚಿಕ್ಕಮಗಳೂರು : ಮಲೆನಾಡು ಭಾಗದಲ್ಲಿ ನಡೆಯುತ್ತಿದ್ದ ನಕ್ಸಲ್‌ ಚಟುವಟಿಕೆಯ ನಾಯಕತ್ವವಹಿಸಿದ್ದ ಹೊಸಗದ್ದೆ ಪ್ರಭಾ ಅಲಿಯಾಸ್‌ ಸಂಧ್ಯಾ (Naxal Leader Hosagadde Prabha) ಇದೀಗ ತಮಿಳುನಾಡಿನ ವೆಲ್ಲೂರಿನಲ್ಲಿ ಪೊಲೀಸರ ಮುಂದೆ ಶರಣಾಗತಿಯಾಗಿದ್ದಾಳೆ. ಸರಿ ಸುಮಾರು ಎರಡು ದಶಕಗಳಿಂದಲೂ ಪ್ರಭಾ ( Sandhya Surrender ) ಪೊಲೀಸರಿಗೆ ಚೆಳ್ಳೆಹಣ್ಣು ತಿಳಿಸಿದ್ದಳು. ಚಿಕ್ಕಮಗಳೂರು, ಶಿವಮೊಗ್ಗ ಮಾತ್ರವಲ್ಲದೇ ತಮಿಳುನಾಡುವರೆಗೂ ತನ್ನ ವ್ಯಾಪ್ತಿಯನ್ನು ಪ್ರಭಾ ವಿಸ್ತರಿಸಿಕೊಂಡಿದ್ದಳು. ನಕ್ಸಲ್‌ ನಾಯಕ ಬಿ.ಜಿ.ಕೃಷ್ಣಮೂರ್ತಿ ಶರಣಾಗನಾದ ಬೆನ್ನಲ್ಲೇ ಇದೀಗ ಆತನ ಪತ್ನಿ ಎನಿಸಿಕೊಂಡಿರುವ ಹೊಸಗದ್ದೆ ಪ್ರಭಾ ಶರಣಾಗತಳಾಗಿದ್ದಾಳೆ.

ಶಿವಮೊಗ್ಗದ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿಯೇ ಮಹಿಳಾ ಪರ ಹೋರಾಟಗಳಲ್ಲಿ ತನ್ನನ್ನು ಗುರುತಿಸಿಕೊಂಡಿದ್ದಳು. ಕಾಲೇಜು ಮುಗಿಯುತ್ತಲೇ ಈತ ಸಂಪೂರ್ಣವಾಗಿ ಜನಪರ ಹೋರಾಟದಲ್ಲಿಯೇ ತನ್ನನ್ನು ಗುರುತಿಸಿಕೊಂಡಿದ್ದಳು. ಶೃಂಗೇರಿಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಪ್ರಭಾ ನಂತರದಲ್ಲಿ ನಕ್ಸಲ್‌ ಚಳುವಳಿಯತ್ತ ಪ್ರಭಾವಿತಳಾಗಿ ಭೂಗತಳಾಗಿದ್ದಳು. ಹೊಸಗದ್ದೆ ಪ್ರಭಾ ನೇತ್ರಾ, ಮಧು, ಸಂಧ್ಯಾ ಎಂಬ ಹೆಸರುಗಳಿಂದ ಕರೆಯಿಸಿಕೊಳ್ಳುತ್ತಾ, ಮಲೆನಾಡು, ಕರಾವಳಿ ಭಾಗದಲ್ಲಿನ ನಕ್ಸಲ್‌ ಚಳುವಟುವಟಿಕೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಳು.

2010ರಲ್ಲಿ ಅನಾರೋಗ್ಯದ ಹಿನ್ನೆಲೆಯಲ್ಲಿ ಪ್ರಭಾ ಸಾವನ್ನಪ್ಪಿದ್ದಳು ಅಂತಾ ಸುದ್ದಿಯಾಗಿತ್ತು. ಪೊಲೀಸ್‌ ಇಲಾಖೆ ಕೂಡ ಆಕೆ ಸಾವನ್ನಪ್ಪಿರೋದು ನಿಜವೆಂದೇ ಭಾವಿಸಿಕೊಂಡಿತ್ತು. ಜೊತೆಗೆ ಆಕೆ ಸರಿ ಸುಮಾರು ಒಂದು ದಶಕಗಳಿಂದಲೂ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಯ ಭಾಗಗಳಲ್ಲಿ ನಕ್ಸಲ್‌ ಚಟುವಟಿಕೆ ಕ್ಷೀಣಿಸುತ್ತಿದ್ದಂತೆಯೇ ಈಕೆ ತನ್ನ ವ್ಯಾಪ್ತಿಯನ್ನು ತಮಿಳುನಾಡಿಗೆ ವಿಸ್ತರಿಸಿಕೊಂಡಿದ್ದಳು. ಕರ್ನಾಟಕ ರಾಜ್ಯದಲ್ಲಿ ಈಕೆಯ ಮೇಲೆ ಸುಮಾರು ೪೫ ಕ್ಕೂ ಅಧಿಕ ಪ್ರಕರಣಗಳಿಗೆ ಎನ್ನಲಾಗುತ್ತಿದೆ.

ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಕೇರಳದಲ್ಲಿ ಪ್ರಭಾವಿ ನಕ್ಸಲ್‌ ನಾಯಕ ಬಿ.ಜಿ.ಕೃಷ್ಣಮೂರ್ತಿ ಪೊಲೀಸರ ಮುಂದೆ ಶರಣಾಗತನಾಗಿದ್ದ. ಪ್ರಭಾ ಕೃಷ್ಣಮೂರ್ತಿಯ ಪತ್ನಿ ಎಂದೇ ಹೇಳಲಾಗುತ್ತಿತ್ತು. ಇದೀಗ ಕೃಷ್ಣಮೂರ್ತಿ ಶರಣಾಗತನಾದ ಕೆಲವೇ ದಿನಗಳಲ್ಲಿ ಹೊಸಗದ್ದೆ ಪ್ರಭಾ ಪೊಲೀಸರ ಮುಂದೆ ಬಂದು ಶರಣಾಗತಳಾಗಿದ್ದಾಳೆ.

ಬಿ.ಜಿ.ಕೃಷ್ಣಮೂರ್ತಿ ಹಾಗೂ ಸಾವಿತ್ರಿ ಶರಣಾಗತಿ

ಮಲೆನಾಡು ಹಾಗೂ ಪಶ್ಚಿಮಘಟ್ಟ ಪ್ರದೇಶದಲ್ಲಿ ಮತ್ತೆ ನಕ್ಸಲರು ಸಕ್ರಿಯರಾಗುವ ಮೂಲಕ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದ ನಿದ್ದೆಗೆಡಿಸಿದ್ದರು. ಆದರೆ ಎಎನ್‌ಎಫ್‌ ಪಡೆ ನಕ್ಸರನ್ನು ಹೆಡೆಮುರಿಕಟ್ಟಿದ್ದರು. ಕಳೆದ ಕೆಲವು ವರ್ಷಗಳಿಂದಲೂ ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ನಕ್ಸಲ್‌ ಚಳುವಳಿ ಸ್ವಲ್ಪ ಮಟ್ಟಿಗೆ ತಣ್ಣಗಾಗಿತ್ತು. ಜಿಲ್ಲೆಯಲ್ಲಿ ಗುರುತಿಸಿಕೊಂಡಿದ್ದ ನಕ್ಸಲ್‌ ನಾಯಕರು ಇದೀಗ ಹೊರ ರಾಜ್ಯಕ್ಕೆ ವಲಸೆ ಹೋಗಿದ್ದಾರೆ ಅನ್ನೋದು ಬಿಜಿಕೆ ಹಾಗೂ ಸಾವಿತ್ರಿ ಬಂಧನದಿಂದ ಹುಸಿಯಾಗಿದೆ. ಇತ್ತೀಚಿಗಷ್ಟೇ ಪಕ್ಷದ ಕೇಂದ್ರ ಸಮಿತಿಗೆ ಪದೋನ್ನತಿಗೊಂಡಿದ್ದ ಕೃಷ್ಣಮೂರ್ತಿ ಬಂಧನ ಪೊಲೀಸರ ಪಾಲಿಗೆ ದೊಡ್ಡ ಸಾಧನೆಯಾಗಿದೆ. 2016, ನವಂಬರ್ ನಲ್ಲಿ ಮಲಪ್ಪುರಂ ಜಿಲ್ಲೆಯ ನಿಲಂಬೂರಿನಲ್ಲಿ ನಡೆದಿದ್ದ ಎನ್ಸೆಂಟರ್ನಲ್ಲಿ ಕುಪ್ಪು ದೇವರಾಜ ಕೊಲ್ಲಲ್ಪಟ್ಟ ಬಳಿಕ ಬಿಜಿಕೆಯನ್ನು ಸಿಪಿಐ (ಮಾವೋವಾದಿ)ನ ಹಂಗಾಮಿ ಕಾರ್ಯದರ್ಶಿಯನ್ನಾಗಿ ಖಾಯಂ ಆಗಿ ನೇಮಕಗೊಳಿಸಲಾಗಿತ್ತು ಎಂದು ತಿಳಿದು ಬಂದಿದೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮೂಲದ ಬಿ.ಜಿ.ಕೃಷ್ಣಮೂರ್ತಿ ವಿರುದ್ದ ಸುಮಾರು 53 ಪ್ರಕರಣಗಳಿದ್ದರೆ, 36ವರ್ಷದ ಸಾವಿತ್ರಿ ಮೇಲೆ 22 ಕೇಸ್ ಗಳಿವೆ. 2005 ರಲ್ಲಿ ಸಾಕೇತ್ ರಾಜನ್ ಹತ್ಯೆಯ ಮತ್ತು 2006ರಲ್ಲಿ ನಕ್ಸಲ್ ಆಂದೋಲನದಲ್ಲಿ ವಿಭಜನೆಯ ಬಳಿಕ ಅವರು ಕರ್ನಾಟಕದಲ್ಲಿ ಪಕ್ಷದ ನಾಯಕ ಬಿ.ಜಿ.ಕೃಷ್ಣಮೂರ್ತಿ ಗುರುತಿಸಿಕೊಂಡಿದ್ದ. ಶೃಂಗೇರಿ ಮೂಲದ ಬಿ.ಜಿ.ಕೃಷ್ಣಮೂರ್ತಿ ಶೃಂಗೇರಿಯ ಜೆಸಿಬಿಎಂ ಕಾಲೇಜಿನಲ್ಲಿ ಪದವಿ ಮುಗಿಸಿದ ನಂತರ ಎಲ್‌ಎಲ್‌ಬಿ ಶಿಕ್ಷಣವನ್ನು ಶಿವಮೊಗ್ಗದಲ್ಲಿ ಪಡೆದಿದ್ದರು. ವಿದ್ಯಾರ್ಥಿ ಜೀವನ ದಲ್ಲಿಯೇ ಮಾವೋವಾದಿ ವಿಚಾರಧಾರೆಯಿಂದ ಪ್ರಭಾವಿತರಾಗಿದ್ದರು. 2000ರ ಆಸುಪಾಸಿನಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನ ವಿರೋಧಿ ಹೋರಾಟ ಸಂದರ್ಭ ಚುರುಕುಗೊಂಡ ನಕ್ಸಲ್ ಚಟುವಟಿಕೆಗೆ ಸೇರ್ಪಡೆಗೊಂಡ ಬಿ.ಜಿ.ಕೃಷ್ಣಮೂರ್ತಿ ಮತ್ತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.

ಇದನ್ನೂ ಓದಿ : ಆರತಿ ಡೋಗ್ರಾ ಎಂಬ ಸ್ಪೂರ್ತಿದಾಯಕ ಐಎಎಸ್ ಅಧಿಕಾರಿ ಬಗ್ಗೆ ನೀವು ತಿಳಿದುಕೊಳ್ಳಬೇಕು

ಇದನ್ನೂ ಓದಿ : ನಕ್ಸಲ್‌ ನಾಯಕ ಬಿ.ಜಿ.ಕೃಷ್ಣಮೂರ್ತಿ, ಸಾವಿತ್ರಿ ಅರೆಸ್ಟ್‌

(Naxal Leader Hosagadde Prabha Sandhya Surrender In Vellur Tamilnadu Police)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular