Coffee Powder Facial: ಸೌಂದರ್ಯವನ್ನು ಇಮ್ಮಡಿಗೊಳಿಸುತ್ತೆ ‘ಕಾಫಿಪೌಡರ್ ಫೇಶಿಯಲ್’

0
  • ಅಂಚನ್ ಗೀತಾ

Coffee Powder Facial : ಹಾಯ್, ಮನೆಯಲ್ಲಿದ್ದು ಬೇಜಾರಾಗ್ತಿದೀಯಾ… ಬ್ಯೂಟಿ ಪಾರ್ಲರ್ ಗಳಿಗೆ ಹೋಗೊಣಾ ಅಂದ್ರೆ ಸದ್ಯಕ್ಕಂತೂ ಓಪನ್ ಆಗೋ ಲಕ್ಷಣ ಕಾಣಿಸ್ತಾ ಇಲ್ವಾ. ಹೇಗಪ್ಪಾ ಫೇಶಿಯಲ್ ಮಾಡೋದು ಅನ್ನೋ ಚಿಂತೆಯಲ್ಲಿದ್ದೀರಾ..

Beauty is increasing Coffee Powder Facia 1

ಹಾಗಾದ್ರೆ ಮನೆಲಿದ್ದುಕೊಂಡೇ ಫೇಶಿಯಲ್ ಮಾಡ್ಬಹುದಾ ? ಅನ್ನೋ ಪ್ರಶ್ನೆ ಕಾಡುತ್ತಿದ್ಯಾ, ಹಾಗಾದ್ರೆ ಕೇವಲ ಹತ್ತೇ ಹತ್ತು ನಿಮಿಷದಲ್ಲಿ ಮನೆಯಲ್ಲಿರೋ ವಸ್ತುಗಳನ್ನು ಬಳಸಿ ಸೂಪರ್ ಆಗಿರೋ ಫೇಶಿಯಲ್ ಕಿಟ್ ಮಾಡೋದು ಹೇಗೆ ಅನ್ನೋದನ್ನು ನಾನ್ ರೆಡಿ‌ ಮಾಡ್ತಿನಿ.. ನಿಮ್ಗೂ ಹೆಲ್ಪಾಗುತ್ತೆ ನೋಡಿ…

Beauty is increasing Coffee Powder Facial‌ 2

ಕಾಫೀ ಪೌಡರ್ ಅಂತೂ ಎಲ್ಲರ ಮನೆಯಲ್ಲೂ ಇದ್ದೆ ಇರುತ್ತೆ. ಹಾಗಾದ್ರೆ ಇವತ್ತು ಕಾಫಿ ಪೌಡರ್ ಬಳಸಿ ಫೇಶಿಯಲ್ ಹೇಗೆ ಮಾಡೋದು ನೋಡೋಣ ಬನ್ನಿ.. ನಾನಿಲ್ಲಿ ಬ್ರೂ ಕಾಫಿ ಪ್ಯಾಕೆಟ್ ನ ತಗೋತಿದ್ದಿನಿ. 2 ರೂ ಪ್ಯಾಕೆಟ್ ಇದು. ನೀವೂ ಬೇಕಾದ್ರೆ ಬೇರೆ ಕಾಫಿ ಪೌಡರ್ ಕೂಡ ಬಳಸಬಹುದು.

Beauty is increasing Coffee Powder Facial‌ 3

Cleansing
1/4 ಸ್ಪೂನ್ ಕಾಫಿ ಪೌಡರ್ ಗೆ ಸ್ವಲ್ಪ ಅಲೋವಿರಾ ಜೆಲ್ ಹಾಕಿ ಮಿಕ್ಸ್ ಮಾಡಿ ತದನಂತರ 3 ನಿಮಿಷ ಮಸಾಜ್ ಮಾಡಿ ನೀರಲ್ಲಿ ತೊಳೆಯಿರಿ.

scrubbing
1/4 ಸ್ಪೂನ್ ಕಾಫಿ ಪೌಡರ್ ಗೆ 1 ಸ್ಪೂನ್ ಸಕ್ಕರೆ, 1 ಸ್ಪೂನ್ ತೆಂಗಿನ ಎಣ್ಣೆ ಹಾಕಿ ಮಿಕ್ಸ್ ಮಾಡಿ ಮಸಾಜ್ ಮಾಡಿ. ಸಕ್ಕರೆಯಲ್ಲಿ ಸ್ಕಿನ್ ಸ್ಮೂತ್ ಮಾಡುವ ಅಂಶವಿದ್ದು ಅದು ತ್ವಚೆಯನ್ನು ಬಿಳುಪಾಗಿರುವಂತೆ ಮಾಡುತ್ತೆ. circular motion ಬಳಸಿ scrubbingಮಾಡಿದ್ರೆ ಉತ್ತಮ.

face pack
ಉಳಿದಿರೋ ಕಾಫಿ ಪೌಡರ್ ಗೆ ಕಡಲೆ ಹಿಟ್ಟು 1 ಸ್ಪೂನ್, ಮೊಸರು 1 ಸ್ಪೂನ್, ಜೇನುತುಪ್ಪ ಒಂದು ಸ್ಪೂನ್, ನಿಂಬೆ ರಸ ಸ್ವಲ್ಪ, ಇವೆಲ್ಲವನ್ನು ಮಿಕ್ಸ್ ಮಾಡಿ ಫೇಸ್ ಪ್ಯಾಕ್ ತಯಾರಿಸಿ. ತದನಂತರ ಮುಖಕ್ಕೆ ಹಚ್ಚಿ‌ ಇಪ್ಪತ್ತು ನಿಮಿಷಗಳ ಕಾಲ ಹಾಗೆ ಬಿಡಿ.

ಹೀಗೆ ಮಾಡೋದ್ರಿಂದ ಪಾರ್ಲರ್ ಗೆ ಹೋಗ್ಬೇಕು ಅಂತಾನೇ ಇರೋದಿಲ್ಲ. .ಆರಾಮಾಗಿ ಮನೆಯಲ್ಲಿಯೇ ಕುಳಿತು ಫೇಶಿಯಲ್ ಕಿಟ್ ರೆಡಿ ಮಾಡಿ ನಿಮ್ಮ ತ್ವಚೆಯ ಸೌಂದರ್ಯವನ್ನು ಕಾಪಾಡಬಹುದಾಗಿದೆ…

ಹಾಗಾದ್ರೆ ಕಾಫಿ ಪೌಡರ್ ನಲ್ಲಿ ಅಂತಹದ್ದೆನಿದೆ ಅಂತಾ ನಿಮಗೆ ಅನಿಸದೇ ಇರದು… ಹೌದು, ಕಾಫಿ ಪೌಡರ್ ನಲ್ಲಿ ಆಂಟಿ ಆಕ್ಸಿಡೆಂಟ್, ಆಂಟಿ ಬ್ಯಾಕ್ಟಿರಿಯಲ್ ಅಂಶಗಳಿದೆ. ಇದು ತ್ವಚೆಯನ್ನು ಸುಂದರವಾಗಿರಿಸುತ್ತೆ. ಅಲ್ಲದೆ ಬಿಸಿಲಿನ ಧಗೆಗೆ ಆಗೋ ಸನ್ ಟ್ಯಾನ್ ನಿಂದ ರಕ್ಷಣೆ ನೀಡುತ್ತೆ.

ಇನ್ನು ಪಾರ್ಟಿ, ಮದುವೆ, ಫಂಕ್ಷನ್ ಗಳಿಗೆ ಹೋಗ್ಬೇಕಾದ್ರು ಮುಂಚಿನ ದಿನ ರಾತ್ರಿ ಈ ಫೇಶಿಯಲ್ ಮಾಡಿಕೊಂಡ್ರೆ ಮಾರನೇ ದಿನ ನಿಮ್ಮ‌ ತ್ವಚೆ ಕಂಗೋಳಿಸುತ್ತೆ. ಆದ್ರೆ ಈ ಫೇಶಿಯಲ್ ಮಾಡಿದ ದಿನ ಮುಖಕ್ಕೆ ಯಾವುದೇ ರೀತಿ‌ಯ ಸೋಪ್ ಗಳ ಬಳಕೆ ಮಾಡಬೇಡಿ. ಮನೆಯಲ್ಲಿ ಫ್ರೀ ಇದ್ದಾಗ ಇದನ್ನ ಮಾಡಿ. ತದನಂತರ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ.

ಇದನ್ನೂ ಓದಿ : Benefits Of Saffron : ತ್ವಚೆಯ ಆರೋಗ್ಯ ಕಾಪಾಡಲು ಬಳಸಿ ‘ಕೇಸರಿ’

ಇದನ್ನೂ ಓದಿ : hair masks to stop hair fall in winters :ಚಳಿಗಾಲದಲ್ಲಿ ಕೂದಲಿನ ಆರೈಕೆಗೆ ಟ್ರೈ ಮಾಡಿ ಈ ಹೇರ್​ಮಾಸ್ಕ್​​​

ಇದನ್ನೂ ಓದಿ : ಅಕ್ಕಿ ಹಿಟ್ಟಿನಿಂದಲೂ ನಿಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳ ಬಹುದು

ಇದನ್ನೂ ಓದಿ : ಬೀಟ್​ರೂಟ್​ ಜ್ಯೂಸ್​ ಸೇವನೆಯಿಂದ ವಾಸಿಯಾಗಲಿದೆ ಈ ಎಲ್ಲಾ ಸಮಸ್ಯೆ

( Beauty is increasing Coffee Powder Facial)

Leave A Reply

Your email address will not be published.