ಬುಧವಾರ, ಏಪ್ರಿಲ್ 30, 2025
HomeCinemaSanchari Vijay : ಸಂಚಾರಿ ವಿಜಯ್ ಅಭಿಮಾನಿಗಳಿಗೆ ಸಿಹಿಸುದ್ದಿ: ಜನವರಿ 26 ರಂದು ಅಂತ್ಯವಲ್ಲ ಆರಂಭ...

Sanchari Vijay : ಸಂಚಾರಿ ವಿಜಯ್ ಅಭಿಮಾನಿಗಳಿಗೆ ಸಿಹಿಸುದ್ದಿ: ಜನವರಿ 26 ರಂದು ಅಂತ್ಯವಲ್ಲ ಆರಂಭ ತೆರೆಗೆ

- Advertisement -

ಬೆಂಗಳೂರು : ಅಳಿವುದು ಕಾಯ ಉಳಿವುದು ಕೀರ್ತಿ ಎಂಬಂತೆ ವ್ಯಕ್ತಿ ಅಳಿದರೂ, ಮಡಿದರೂ ಆತನ ಕೆಲಸ ಎಲ್ಲರಿಂದಲೂ ಸ್ಮರಿಸಲ್ಪಡುತ್ತದೆ. ಅದರಲ್ಲೂ ಕಲಾವಿದರಿಗಂತೂ ಸಾವೇ ಇಲ್ಲ ಎನ್ನುವ ಮಾತಿದೆ. ಇಂಥ ಸಾಲಿಗೆ ಸೇರುವ ಕಲಾವಿದ ಕನ್ನಡದ ಪ್ರತಿಭಾನ್ವಿತ ಯುವ ನಟ ಸಂಚಾರಿ ವಿಜಯ್ (Sanchari Vijay). ಹಲವು ವಿಭಿನ್ನ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ್ದ ನಾಯಕ ನಟ ಸಂಚಾರಿ ವಿಜಯ್ ತಮ್ಮ ಮೊದಲ ಚಿತ್ರದಲ್ಲೇ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡ ನಟ. ಬಾಳಿ ಬದುಕ ಬೇಕಿದ್ದ ಕಾಲದಲ್ಲೇ, ಒಂದಾದ ಮೇಲೊಂದು ಸಿನಿಮಾ ಶೂಟಿಂಗ್ ಬಾಕಿ ಇರುವಾಗಲೇ ರಸ್ತೆ ಅಪಘಾತ ಸ್ಯಾಂಡಲ್ ವುಡ್ ನ ಭರವಸೆಯ ಯುವ ನಾಯಕನನ್ನು ಬಲಿತೆಗೆದುಕೊಂಡಿತು.

ಸಂಚಾರಿ ವಿಜಯ್ ನಿಧನದ ವೇಳೆಗೆ ಅವರ ಹಲವು ಚಿತ್ರಗಳು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದರೇ ಒನ್ನು ಕೆಲ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿದ್ದವು. ಆದರೆ ಎಲ್ಲವನ್ನು ಅರ್ಧದಲ್ಲಿಯೇ ಬಿಟ್ಟು ನಟ ಸಂಚಾರಿ ವಿಜಯ್ ನಿಶದ್ಧವಾಗಿ ಹೋಗಿದ್ದರು. ಈಗ ಅವರ ನಟನೆಯ ಕೊನೆಯ ಚಿತ್ರ ಅಂತ್ಯವಲ್ಲ ಆರಂಭ ಗಣರಾಜ್ಯೋತ್ಸವ ದಂದು ರಿಲೀಸ್ ಆಗಲಿದೆ. ಈ ವಿಚಾರವನ್ನು ಸಂಚಾರಿ ವಿಜಯ್ ಸ್ನೇಹಿತ ಹಾಗೂ ಸಿನಿಮಾದ ನಿರ್ದೇಶಕ ಡಾ.ಎನ್.ಬಿ.ಜಯಪ್ರಕಾಶ್ ಹೇಳಿದ್ದಾರೆ.

ಮೊದಲ ಬಾರಿಗೆ ಕನ್ನಡ ಸಿನಿಮಾವೊಂದು ಆನ್ ಲೈನ್ ನಲ್ಲೇ ತೆರೆ ಕಾಣಲಿದೆ.ಮನೆಯಲ್ಲೇ ಎಲ್ಲರೂ ಕುಳಿತು ನೋಡಬಹುದಾದ ಈ ಚಿತ್ರ ಸೆಲ್ಪ್ ಕಾನ್ಸಿಡೆನ್ಸ್ ಹೆಚ್ಚಿಸುವ ಕಥಾವಸ್ತು ಒಳಗೊಂಡಿದೆ ಎಂದು ಅವರು ವಿವರಣೆ ನೀಡಿದ್ದಾರೆ‌. ಆನ್ ಲೈನ್ ನಲ್ಲಿ ಸಿನಿಮಾ ವೀಕ್ಷಣೆ ಬುಕ್ ಮಾಡಿಕೊಂಡ್ರೇ ಪಾಸ್ ವರ್ಡ್ ನೀಡಲಾಗುತ್ತದೆ. ಇದನ್ನು ಬಳಸಿ ಎಲ್ಲರೂ ಮನೆಯಲ್ಲೇ ಕುಳಿತು ಸಿನಿಮಾ ನೋಡಲು ಅವಕಾಶ ಸಿಗಲಿದೆ.

ಕ್ಲೌಡ್ ಫಂಡಿಂಗ್ ಮೂಲಕ ನಿರ್ಮಿಸಲಾಗಿರುವ ಈ ಸಿನಿಮಾದ ವೀಕ್ಷಣೆ ಮಾಡುವಂತೆ ನಿರ್ದೇಶಕರು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಈ ಸಿನಿಮಾ ಪ್ರದರ್ಶನ ದಿಂದ ಸಂಗ್ರಹವಾಗುವ ಹಣವನ್ನು ವಿಧವೆಯರ ಪುನಶ್ವೇತನಕ್ಕೆ ಬಳಸಲು ಚಿತ್ರತಂಡ ನಿರ್ಧರಿಸಿದೆ. ಸಂಚಾರಿ ವಿಜಯ್ ಕೊನೆಯಾಸೆ ಅಂತೆಯೇ ವಿಧವೆಯರ ಬದುಕಿಗಾಗಿ ಈ ಹಣವನ್ನು ಬಳಸಲು ಚಿತ್ರತಂಡ ನಿರ್ಧರಿಸಿದೆ ಎಂಬ ಮಾಹಿತಿಯನ್ನು ನಿರ್ದೇಶಕರು ಮಾಧ್ಯಮಗಳ ಜೊತೆ ಶೇರ್ ಮಾಡಿದ್ದಾರೆ.

ಜನವರಿ ೨೬ ರಂದು ತೆರೆಗೆ ಬರಲಿರೋ ಸಿನಿಮಾವನ್ನು ನೋಡಲು ಸಂಚಾರಿ ವಿಜಯ್ ಅಭಿಮಾನಿಗಳು ಕಾತರರಾಗಿ ಕಾಯ್ತಿದ್ದಾರೆ. 1983 ರಲ್ಲಿ ಜನಿಸಿದ್ದ ಸಂಚಾರಿ ವಿಜಯ್ ತಮ್ಮ ಕಲಾಬದುಕಿನಲ್ಲಿ ಯಶಸ್ಸು ಪಡೆಯುತ್ತಿರುವಾಗಲೇ ಜೂನ್ 15, 2021 ರಸ್ತೆ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೇ ನಗರದ ಅಪೋಲೋ ಹಾಸ್ಪಿಟಲ್ ನಲ್ಲಿ ನಿಧನರಾದರು.‌

ಇದನ್ನೂ ಓದಿ :‌ ರಾಗಿಣಿ ಅಭಿಮಾನಿಗಳಿಗೆ ಶಾಕ್: ತುಪ್ಪದ ಬೆಡಗಿ ಕೊಟ್ರು ಸ್ಯಾಡ್ ನ್ಯೂಸ್

ಇದನ್ನೂ ಓದಿ : ಪುಕ್ಸಟ್ಟೆ ಲೈಫು ಸಿನಿಮಾ ನೋಡಿ ನೀನೊಬ್ಬ ಇರಬೇಕಿತ್ತು ಎಂದ ಸ್ಯಾಂಡಲ್ ವುಡ್ ನಿರ್ದೇಶಕರು

( Sanchari Vijay fans Good News, New Movie Anthyavalla Aramba January 26 release)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular