ಬುಧವಾರ, ಏಪ್ರಿಲ್ 30, 2025
HomekarnatakaCM Basavaraj Bommai Change : ಸಂಕ್ರಾಂತಿಗೂ ಮುನ್ನ ಸಿಎಂ ಬದಲಾವಣೆ : ಮುಖ್ಯಮಂತ್ರಿ ಆಯ್ಕೆಗೆ...

CM Basavaraj Bommai Change : ಸಂಕ್ರಾಂತಿಗೂ ಮುನ್ನ ಸಿಎಂ ಬದಲಾವಣೆ : ಮುಖ್ಯಮಂತ್ರಿ ಆಯ್ಕೆಗೆ ಬರ್ತವ್ರೇ ಅಮಿತ್ ಶಾ

- Advertisement -

ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರ ( Karnataka CM ) ಐದು ವರ್ಷದ ಅವಧಿಯಲ್ಲಿ ಯಶಸ್ವಿ ಮೂರನೇ ಬಾರಿ ಸಿಎಂ ಬದಲಾವಣೆಗೆ (CM Basavaraj Bommai Change ) ಸಜ್ಜಾಗಿದೆ ಎನ್ನಲಾಗುತ್ತಿದ್ದು, ಆಗ ಬಂಡಾಯಕ್ಕೆ ಬದಲಾಗಿದ್ದ ಸಿಎಂ ಈಗ‌ ಮಂಡಿನೋವಿಗೆ ಹುದ್ದೆ ತ್ಯಜಿಸಲಿದ್ದಾರೆ ಎಂಬ ಸುದ್ದಿ ಯೊಂದು ಖಚಿತ ಮೂಲಗಳಿಂದ ಹೊರಬಿದ್ದಿದೆ. ಈ‌ ಮಧ್ಯೆ ಜನವರಿ ಮೊದಲ ವಾರದಲ್ಲಿ ರಾಜ್ಯಕ್ಕೆ ಕೇಂದ್ರ ಸಚಿವ ಹಾಗೂ ಬಿಜೆಪಿ ಹೈಕಮಾಂಡ್ ಅಮಿತ್ ಶಾ ( Amith Sha ) ಭೇಟಿ ಕೂಡ ಸಿಎಂ ಬದಲಾವಣೆ ಸಂಗತಿಯನ್ನು ಧೃಡಪಡಿಸುತ್ತಿದೆ.

ಗೃಹ ಸಚಿವರಾಗಿದ್ದ ಬಸವರಾಜ್ ಬೊಮ್ಮಾಯಿ ಸಿಎಂ ಸ್ಥಾನಕ್ಕೆ ಏರಿ ಬಹುಕಾಲವಾಗಿಲ್ಲ. ಆಗಲೇ ಬಿಜೆಪಿ ವಲಯದಲ್ಲಿ ಬದಲಾವಣೆ ಮಾತು ಹುಟ್ಟಿಕೊಂಡಿದೆ. ಮತ್ತೊಮ್ಮೆ ಸಿಎಂ ಬದಲಾವಣೆ ಪ್ರಹಸನ ಕ್ಕೆ ರಾಜ್ಯ ಸಾಕ್ಷಿಯಾಗಲಿದೆ‌. ಬಸವರಾಜ್ ಬೊಮ್ಮಾಯಿ ತೀವ್ರ ಮಂಡಿನೋವಿನಿಂದ ಬಳಲುತ್ತಿದ್ದು ಮಂಡಿನೋವಿನ ಶಸ್ತ್ರಚಿಕಿತ್ಸೆಗೆ ಒಳಗಾಗುವುದು ಅನಿವಾರ್ಯ ಎನ್ನಲಾಗಿದೆ. ಹೀಗಾಗಿ ಮಂಡಿ ನೋವಿನ ಶಸ್ತ್ರಚಿಕಿತ್ಸೆಗಾಗಿ ಬೊಮ್ಮಾಯಿ ಅಮೇರಿಕಾಕ್ಕೆ ತೆರಳಲಿದ್ದಾರೆ.

ಮಂಡಿ ನೋವಿನ ಶಸ್ತ್ರಚಿಕಿತ್ಸೆ ಬಳಿಕ ಕನಿಷ್ಠ 3 ತಿಂಗಳ ವಿಶ್ರಾಂತಿ ಅವಶ್ಯವಿದ್ದು ಈ ವೇಳೆಯಲ್ಲಿ ಎದ್ದು ಓಡಾಡುವುದಕ್ಕೆ ವೈದ್ಯರ ಅನುಮತಿ ಇಲ್ಲ. ಮೂರು ತಿಂಗಳ ಕಾಲ ಸಿಎಂ ಅನುಪಸ್ಥಿತಿಯಲ್ಲಿ ಸರ್ಕಾರ ನಡೆಸಲು ಸಾಧ್ಯವಿಲ್ಲ . ಇದೇ ಕಾರಣಕ್ಕೆ ಬಿಜೆಪಿ ಮತ್ತೊಮ್ಮೆ ಸಿಎಂ ಬದಲಾವಣೆಗೆ ಸಿದ್ಧವಾಗಿದೆ ಎನ್ನಲಾಗುತ್ತಿದೆ. ಜನವರಿ 8 ಹಾಗೂ 9 ರಂದು ಅಮಿತ್ ಶಾ ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ಬಿಜೆಪಿಯ ಸಚಿವರುಗಳ ಜೊತೆ ಸಭೆ ನಡೆಸಲಿದ್ದಾರೆ. ಮಂತ್ರಿಗಳಿಗೆ ಅಭಿವೃದ್ಧಿ ಪಾಠ ಮಾಡಲಿದ್ದಾರಂತೆ.

ಈ ಸಭೆಗಳ ಬಳಿಕ ಸಿಎಂ ಆಯ್ಕೆ ಕಸರತ್ತು ನಡೆಯಲಿದ್ದು, ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿಯನ್ನು ಚುನಾವಣೆಯಲ್ಲೂ ಮುನ್ನಡೆಸುವ ಸಾಮರ್ಥ್ಯ ಹೊಂದಿದವರಿಗೆ ಪಟ್ಟ ಕಟ್ಟಲು ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸಿದೆ‌. ಹೀಗಾಗಿ ಬಿಜೆಪಿ ಪಾಳಯದಲ್ಲಿ ಈಗ ಮತ್ತೊಮ್ಮೆ ಸಿಎಂ ಸ್ಥಾನಕ್ಕೆ ರೇಸ್ ಆರಂಭವಾಗಿದ್ದು, ನಾ ಮುಂದು ತಾಮುಂದು ಎಂದು ಮುಖ್ಯಮಂತ್ರಿ ಹುದ್ದೆಗೇರಲು ಆಕಾಂಕ್ಷಿಗಳು ಕಸರತ್ತು ಆರಂಭಿಸಿದ್ದಾರೆ.

ಮುರುಗೇಶ್ ನಿರಾಣಿ, ಅರವಿಂದ್ ಬೆಲ್ಲದ್, ಜಗದೀಶ್ ಶೆಟ್ಟರ್, ಡಾ.ಅಶ್ವತ್ಥನಾರಾಯಣ್, ಬಂಡಾಯ ಬಣದ ಡಾ.ಸುಧಾಕರ್ ಹೀಗೆ ಎಲ್ಲರೂ ಆಕಾಂಕ್ಷಿಗಳ ಸಾಲಿನಲ್ಲೇ ಇದ್ದು ಬಿಜೆಪಿ ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳುತ್ತೆ ಎಂಬುದು ಕುತೂಹಲ. ಈ ಮಧ್ಯೆ ಕೊಟ್ಟ ಕುದುರೆ ಏರದ ಸ್ಥಿತಿಯಲ್ಲಿರುವ ಸಿಎಂ ಬಸವರಾಜ್ ಬೊಮ್ಮಾಯಿ ಆಗಾಗ ತಮ್ಮ ಭಾಷಣ ದಲ್ಲಿ ಹುದ್ದೆ,ಹೆಸರು ಶಾಶ್ವತವಲ್ಲ. ಕೆಲಸ ಮಾತ್ರ ಶಾಶ್ವತ ಎಂಬ ವೇದಾಂತದ ಮಾತುಗಳನ್ನಾಡುತ್ತಿದ್ದು ಸಿಎಂ ಸ್ಥಾನ ಬಿಟ್ಟು ಕೊಡಲು ಮಾನಸಿಕವಾಗಿ ಸಿದ್ಧವಾಗುತ್ತಿದ್ದಾರೆ ಎಂದೇ ಅರ್ಥೈಸಲಾಗುತ್ತಿದೆ.

ಇದನ್ನೂ ಓದಿ : ಸ್ವ ಕ್ಷೇತ್ರದಲ್ಲಿ ಸಿಎಂ ಕಣ್ಣೀರು: ವಿದಾಯ ಭಾಷಣ ಮಾಡಿದ್ರಾ ಬೊಮ್ಮಾಯಿ ?!

ಇದನ್ನೂ ಓದಿ : ಸಂಕ್ರಾಂತಿ ಬಳಿಕ ಸಂಪುಟಕ್ಕೆ ಸರ್ಜರಿ : ಯಾರು ಇನ್ ಯಾರು ಔಟ್? ಇಲ್ಲಿದೆ ಡಿಟೇಲ್ಸ್

( Karnataka CM Basavaraj Bommai Change before Sankranthi, New Chief Minister selecting Amith Sha)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular