Love U Racchu Release : ಲವ್ ಯೂ ರಚ್ಚುಗೆ ನೂರೆಂಟು ವಿಘ್ನ : ಇದೀಗ ಬಂದ್ ಸಂಕಷ್ಟ

ಸಾಕಷ್ಟು ಕುತೂಹಲ ಮೂಡಿಸಿರುವ ಕನ್ನಡದ ಸಿನಿಮಾ ಲವ್ ಯೂ ರಚ್ಚುಗೆ (Love U Racchu Release) ಆರಂಭದಿಂದಲೂ ಒಂದಿಲ್ಲೊಂದು ವಿಘ್ನ ಎದುರಾಗುತ್ತಲೇ ಇದೆ. ಸದ್ಯ ಡಿಸೆಂಬರ್ 31 ಕ್ಕೆ ರಿಲೀಸ್ ಆಗಲಿರೋ ಸಿನಿಮಾ ಪ್ರಮೋಶನ್ ಭರ್ಜರಿಯಾಗಿ ನಡೆದಿರುವಾಗಲೇ ಚಿತ್ರತಂಡಕ್ಕೆ ಶಾಕ್ ಎದುರಾಗಿದ್ದು ಡಿಸೆಂಬರ್ 31 ರ ಕರ್ನಾಟಕ ಬಂದ್ ( Karnataka bund )ನಿಂದ ಚಿತ್ರತಂಡ ಸಂಕಷ್ಟಕ್ಕೆ ಸಿಲುಕಿದೆ.

ರಾಜ್ಯದಲ್ಲಿ ಎಂಇಎಸ್ ಪುಂಡಾಟ ಖಂಡಿಸಿಹಾಗೂ ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಸರ್ಕಾರಕ್ಕೆ ಡೆಡ್ ಲೈನ್‌ನೀಡಿವೆ. ಅಲ್ಲದೇ ಒಂದೊಮ್ಮೆ ಸರ್ಕಾರ ಎಂಇಎಸ್ ನಿಷೇಧಿಸದಿದ್ದರೇ ಡಿಸೆಂಬರ್ 31 ರಂದು ಕರ್ನಾಟಕ ಬಂದ್ ನಡೆಸುವುದಾಗಿ ಎಚ್ಚರಿಸಿದೆ. ಇನ್ನು ಕನ್ನಡಪರ ಸಂಘಟನೆಗಳ ಬಂದ್ ಗೆ ಹೊಟೇಲ್ ಮಾಲೀಕರು, ಓಲಾ‌ಊಬರ್ ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ಘೋಷಿಸಿವೆ.

ಆದರೆ ಇದ್ಯಾವುದು ವಿಚಾರವಲ್ಲ. ಈ ಕರ್ನಾಟಕ ಬಂದ್ ಗೆ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಚಲನಚಿತ್ರಮಂದಿರಗಳ ಅಸೋಶಿಯೇಶನ್ ಕೂಡಾ ಬೆಂಬಲಿಸಿದೆ. ಚಿತ್ರೋದ್ಯಮ ಅಂದು ಎಲ್ಲ ಶೂಟಿಂಗ್ ಸ್ಥಗಿತಗೊಳಿಸಿ ಬಂದ್ ಗೆ ಬೆಂಬಲ ನೀಡಿದೆ. ಇದು ಈಗ ಲವ್ ಯೂ ರಚ್ಚು ಚಿತ್ರತಂಡದ ನಿದ್ದೆಗೆಡಿಸಿದೆ. ಅದ್ದೂರಿ ಪ್ರಮೋಶನ್ ನಡೆಸಿರುವ ಲವ್ ಯೂ ರಚ್ಚು ಅಂದೇ ರಾಜ್ಯದಾದ್ಯಂತ ತೆರೆಗೆ ಬರಲಿದೆ. ಆದರೆ ಅಂದು ಬಂದ್ ಇರೋದರಿಂದ ಸಿನಿಮಾ ರಿಲೀಸ್ ಗೆ ಇದು ಹೊಡೆತಕೊಡಲಿದೆ.

ಇದೇ ಕಾರಣಕ್ಕೆ ಸಿನಿಮಾ ನಿರ್ಮಾಪಕ ಗುರು ದೇಶಪಾಂಡೆ ಆಕ್ರೋಶ ವ್ಯಕ್ತಪಡಿಸಿದ್ದು, ಮಾಧ್ಯಮಗಳ ಜೊತೆ ಮಾತನಾಡಿದ ಗುರು ದೇಶಪಾಂಡೆ, ಕನ್ನಡ ಹೋರಾಟ ಎನ್ನುವುದು ಕನ್ನಡಿಗರ ವಿರುದ್ಧದ ಹೋರಾಟ ಆಗಬಾರದು. ನಾವು ಬಂಡವಾಳ ಹೂಡಿ ಸಿನಿಮಾ ಮಾಡಿದ್ದೇವೆ. ಆದರೇ ಈ ಬಂದ್ ನಮ್ಮ ನಮ್ಮ ಪ್ರಾಣ ತೆಗೆಯುವಂತಾಗಬಾರದು ಎಂದಿದ್ದಾರೆ.

ಅಲ್ಲದೇ ಡಿಸೆಂಬರ್ 31 ರಂದು ಬಂದ್ ಆದರೇ ನಾವು ಎಲ್ಲಾದ್ರೂ ಹೋಗಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಅಷ್ಟೇ. ಯಾಕಂದ್ರೇ ಸಿನಿಮಾ‌ ಮೇಲೆ ಕೋಟ್ಯಾಂತರ ರೂಪಾಯಿ ಹೂಡಿದ್ದೇವೆ.‌ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಪ್ರಮೋಶನ್ ಮಾಡಿದ್ದೇವೆ. ಈಗ ಸಿನಿಮಾ ರಿಲೀಸ್ ಗೆ ಬಂದ್ ಅಂದ್ರೆ ನಾವು ಆತ್ಮಹತ್ಯೆ ಮಾಡಿಕೊಳ್ಳಬೇಕು ಇಲ್ಲವೇ ಯಾರನ್ನಾದರೂ ಹೋಗಿ ಕೊಲೆ ಮಾಡಿ ಬರಬೇಕಷ್ಟೇ ಎಂದು ಗುರು ದೇಶಪಾಂಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲವ್ ಯೂ ರಚ್ಚು ಅಜಯ್ ರಾವ್ ಹಾಗೂ ರಚಿತಾರಾಮ್ ನಟನೆಯ ಸಿನಿಮಾ ವಾಗಿದ್ದು ಈ ಸಿನಿಮಾಗೆ ಆರಂಭದಿಂದಲೂ ಒಂದಿಲ್ಲೊಂದು ವಿಘ್ನ ಎದುರಾಗುತ್ತಲೇ ಇದೆ. ಶೂಟಿಂಗ್ ವೇಳೆ ವಿದ್ಯುತ್ ಶಾಕ್ ತಗುಲಿ ಫೈಟರ್ ಸಾವನ್ನಪ್ಪಿದ್ದು ಬಳಿಕ ನಿರ್ದೇಶಕ ಸೇರಿದಂತೆ ಹಲವರು ಬಂಧನಕ್ಕೊಳಗಾಗಿದ್ದರು. ನಿರ್ಮಾಪಕರು ತಲೆಮರೆಸಿಕೊಂಡು ಬಳಿಕ‌ ಜಾಮೀನಿನ ಮೇಲೆ ಹೊರಬಂದಿದ್ದರು.‌

ಇನ್ನು ಪ್ರಮೋಶನ್ ವೇಳೆ ನಟ ಅಜಯ್ ರಾವ್ ನಿರ್ಮಾಪಕರ ಮೇಲೆ ಮುನಿಸಿಕೊಂಡು ಸುದ್ದಿಗೋಷ್ಟಿಗೆ ಹಾಜರಾಗಿರಲಿಲ್ಲ. ಈಗ ಸಿನಿಮಾ ರಿಲೀಸ್ ವೇಳೆಗೆ ಬಂದ್ ಸಂಕಷ್ಟ ಎದುರಾಗಿದ್ದು ನಾಳೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ತೆರಳಲಿರುವ ನಿರ್ಮಾಪಕ ಗುರು ದೇಶಪಾಂಡೆ ಬಂದ್ ಗೆ ಬೆಂಬಲ ನೀಡಿದಂತೆ ಮನವಿ‌ಮಾಡಲಿದ್ದಾರಂತೆ.‌

ಇದನ್ನೂ ಓದಿ : ವಿವಾದದ ಸುಳಿಗೆ ಸಿಲುಕಿದ ಸನ್ನಿ ಲಿಯೋನ್​​ರ ‘ಮಧುಬನ್​’ ಗೀತೆ

ಇದನ್ನೂ ಓದಿ : ರಶ್ಮಿಕಾ ಮಂದಣ್ಣ ಫ್ಯಾನ್ಸ್ ಗೆ ಸಿಹಿಸುದ್ದಿ: ಇನ್ ಸ್ಟಾದಲ್ಲಿ 2.5 ಕೋಟಿ ದಾಟಿದ ಫಾಲೋವರ್ಸ್

( Love U Racchu Release date trouble movie team as Karnataka bund)

Comments are closed.