Booster Dose For 60+:ದೇಶದಲ್ಲಿ ಕೋವಿಡ್ 19 ಮೂರನೇ ಅಲೆಯ ಆತಂಕ ಹಾಗೂ ಓಮಿಕ್ರಾನ್ ಭಯದ ಹಿನ್ನೆಲೆಯಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಜನವರಿ ಮೂರರಿಂದ ಮಕ್ಕಳಿಗೆ ಕೊರೊನಾ ಲಸಿಕೆ ಅಭಿಯಾನ ಆರಂಭವಾಗಲಿದೆ. ಜೊತೆಯಲ್ಲಿ ಆರೋಗ್ಯ ಸಿಬ್ಬಂದಿ, ಮುಂಚೂಣಿ ಕಾರ್ಯಕತರು ಹಾಗೂ 60 ವರ್ಷ ಮೇಲ್ಪಟ್ಟ ಕಾಮೊರ್ಬಿಡಿಟಿ ಹೊಂದಿರುವವರಿಗೆ ಜನವರಿ 10ರಿಂದ ಕೇಂದ್ರ ಸರ್ಕಾರವು ಬೂಸ್ಟರ್ ಡೋಸ್ ನೀಡಲಿದೆ. ಇಂದು ಕೇಂದ್ರ ಆರೋಗ್ಯ ಸಚಿವಾಲಯವು ಮತ್ತೆರಡು ಕೋವಿಡ್ ಲಸಿಕೆ ಹಾಗೂ ಆ್ಯಂಟಿ ವೈರಲ್ ಔಷಧಿಗಳ ತುರ್ತು ಬಳಕೆಗೆ ಅನುಮೋದನೆ ನೀಡಿದೆ.
ಇದೀಗ ಬೂಸ್ಟರ್ ಡೋಸ್ ಪಡೆದುಕೊಳ್ಳಬೇಕಿದ್ದ ಕೊಮೊರ್ಬಿಡಿಟಿ ಹೊಂದಿರುವ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರ ರಿಲೀಫ್ ನೀಡಿದೆ. ಈ ಹಿಂದೆ ಕೊಮೊರ್ಬಿಡಿಟಿ ವರದಿ ಕಡ್ಡಾಯ ಎಂದಿದ್ದ ಕೇಂದ್ರವು ಇದೀಗ ಈ ನಿಯಮದಲ್ಲಿ ಬದಲಾವಣೆ ಮಾಡಿದ್ದು 60 ವರ್ಷ ಮೇಲ್ಪಟ್ಟ ಕೊಮೊರ್ಬಿಡಿಟಿ ಹೊಂದಿರುವವರು ಹೆಚ್ಚಿನ ಅಪಾಯದ ವರ್ಗಕ್ಕೆ ಸೇರಿದವರಾದ್ದವರಿಂದ ಅವರು ಬೂಸ್ಟರ್ ಶಾಟ್ ಪಡೆಯಲು ವೈದ್ಯರ ಪ್ರಮಾಣ ಪತ್ರವನ್ನು ಸಲ್ಲಿಸುವ ಅಗತ್ಯವಿಲ್ಲ ಎಂದು ಹೇಳಿದೆ. ಹೀಗಾಗಿ ಕಿಡ್ನಿ ಸಮಸ್ಯೆ, ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆ, ಮಧುಮೇಹದಂತಹ ಅನಾರೋಗ್ಯ ಹೊಂದಿರುವ 60 ವರ್ಷ ಮೇಲ್ಪಟ್ಟವರು ಜನವರಿ 10ರಿಂದ ಯಾವುದೇ ವೈದ್ಯರ ಶಿಫಾರಸಿನ ಅಗತ್ಯವಿಲ್ಲದೇ ಬೂಸ್ಟರ್ ಶಾಟ್ ಪಡೆಯಬಹುದಾಗಿದೆ.
ಈ ವಿಚಾರವಾಗಿ ಪ್ರಕಟಣೆ ಹೊರಡಿಸಿರುವ ಕೇಂದ್ರ ಆರೋಗ್ಯ ಸಚಿವಾಲಯ,ಕೊಮೊರ್ಬಿಡಿಟಿಯನ್ನು ಸಾಬೀತು ಪಡಿಸಲು ವೈದ್ಯರಿಂದ ಯಾವುದೇ ಪ್ರಮಾಣ ಪತ್ರದ ಅಗತ್ಯವಿಲ್ಲ. ಆದರೆ ಮುನ್ನೆಚ್ಚರಿಕಾ ಕ್ರಮವಾಗಿ ಬೂಸ್ಟರ್ ಡೋಸ್ ಸ್ವೀಕರಿಸುವ ಮುನ್ನ 60 ವರ್ಷ ಮೇಲ್ಪಟ್ಟವರು ಒಮ್ಮೆ ತಮ್ಮ ವೈದ್ಯರ ಸಲಹೆಯನ್ನು ಪಡೆಯವುದು ಉತ್ತಮ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಜನವರಿ 3ರಿಂದ ಲಸಿಕೆ ಹಾಕಿಸಿಕೊಳ್ಳುವ 15 ರಿಂದ 18 ವರ್ಷ ವಯಸ್ಸಿನವರು ಕೋವಿನ್ ಅಪ್ಲಿಕೇಶನ್ ಮೂಲಕ ಲಸಿಕೆ ನೋಂದಣಿ ಮಾಡಿಕೊಳ್ಳಲು ಸೂಚಿಸಲಾಗಿದೆ.
Booster Dose For 60+: Prescription Not Needed To Prove Comorbidity
ಇದನ್ನು ಓದಿ : Gujarat Gang Rape : ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ : ಅಪ್ರಾಪ್ತರು ಸೇರಿ 9 ಮಂದಿಯ ಬಂಧನ
ಇದನ್ನೂ ಓದಿ : Covid vaccines :ಕೋವಿಡ್ ವಿರುದ್ಧದ ಹೋರಾಟಕ್ಕೆ ಮತ್ತಷ್ಟು ಬಲ: ಮತ್ತೆರಡು ಲಸಿಕೆಗಳಿಗೆ ಕೇಂದ್ರದಿಂದ ಅನುಮೋದನೆ