Semi Lockdown in Delhi : ಕೊವಿಡ್ ಹೆಚ್ಚಳದಿಂದ ದೆಹಲಿಯಲ್ಲಿ ತುರ್ತು ಸೆಮಿ ಲಾಕ್‌ಡೌನ್ ಘೋಷಣೆ; ಸಾರ್ವಜನಿಕ ಸೇವೆಗಳು ಅರ್ಧ ಮೊಟಕು

ದೆಹಲಿ: ಕೊವಿಡ್ ಪ್ರಕರಣಗಳು ದಿನೆದಿನೇ ಹೆಚ್ಚಾಗುತ್ತಿರುವ ಬೆನ್ನಲ್ಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೆಮಿ ಲಾಕ್‌ಡೌನ್ (Semi Lockdown in Delhi ) ಜಾರಿಗೊಳಿಸಲು ದೆಹಲಿ ಸರ್ಕಾರ (Delhi Government) ಮತ್ತು ದೆಹಲಿ ವಿಕೋಪ ನಿರ್ವಹಣೆ ಪ್ರಾಧಿಕಾರ ತುರ್ತು ತೀರ್ಮಾನ ಕೈಗೊಂಡಿವೆ. ದೆಹಲಿಯಲ್ಲಿ ಈಗಾಗಲೇ ಕೊವಿಡ್ ಸೋಂಕು (Delhi Covid 19 Cases) ನಿರ್ಬಂಧಿಸಲು ನೈಟ್ ಕರ್ಫ್ಯೂ (Delhi Night Curfew) ಜಾರಿಯಲ್ಲಿದೆ. ಇದರ ಜೊತೆಗೆ ಮತ್ತಷ್ಟು ಕಠಿಣ ಕ್ರಮಗಳನ್ನು (Delhi Yellow Alert) ತುರ್ತು ಜಾರಿಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಡಿಸೆಂಬರ್ 27ರಂದು ಸೋಮವಾರ ಒಂದೇ ದಿನ ದೆಹಲಿಯಲ್ಲಿ 331 ಜನರಲ್ಲಿ ಕೊವಿಡ್ ಸೋಂಕು ದೃಢಪಟ್ಟಿರುವ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ. ದೆಹಲಿಯಲ್ಲಿ ಪ್ರಸ್ತುತ 165 ರೂಪಾಂತರಿ ಓಮಿಕ್ರಾನ್ ಕೇಸ್ ಗಳು ಪತ್ತೆಯಾಗಿವೆ. ದೇಶದಲ್ಲಿ ಮಹಾರಾಷ್ಟ್ರ ರಾಜ್ಯದ ನಂತರದ ಸ್ಥಾನದಲ್ಲಿದೆ ದೆಹಲಿ. ಹಲವು ಓಮಿಕ್ರಾನ್- ಕೊವಿಡ್ ಸೋಂಕಿತರಿಗೆ ಪ್ರವಾಸದ ಯಾವುದೇ ಹಿನ್ನೆಲೆಯಿಲ್ಲ. ಹೀಗಾಗಿ ಓಮಿಕ್ರಾನ್ ಸಮುದಾಯಕ್ಕೆ ಹಬ್ಬಿರುವ ಕುರಿತು ಸಹ ಹಲವು ಅನುಮಾನಗಳು ತಜ್ಷರಲ್ಲಿ ಮೂಡಿವೆ ಎಂದು ವರದಿಯಾಗಿದೆ. ಅಷ್ಟೇ ಅಲ್ಲದೇ ಕಳೆದ ಜೂನ್ ತಿಂಗಳಿನಿಂದ ಇಷ್ಟು ಕೊವಿಡ್ ಸೋಂಕಿತರು ಒಂದೇ ದಿನ ಪತ್ತೆಯಾಗಿರಲಿಲ್ಲ. ಈಕಾರಣಕ್ಕೆ ಅರವಿಂದ್ ಕೇಜ್ರೀವಾಲ್ ನೇತೃತ್ವದ ಸರ್ಕಾರ ಈ ಬಿಗು ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗಿದೆ. ಶಾಲೆ, ಕಾಲೇಜು, ಮತ್ತಿತರ ಶೈಕ್ಷಣಿಕ ಸಂಸ್ಥೆಗಳು ಆನ್ ಲೈನ್ ಮೂಲಕ ನಡೆಯಬೇಕು

ಸಿನಿಮಾ, ಪಿವಿಆರ್, ಜಿಮ್ ಕೇಂದ್ರಗಳು ಸಂಪೂರ್ಣ ಮುಚ್ಚಬೇಕು. ರೆಸ್ಟೋರೆಂಟ್ ಬಾರುಗಳು ರಾತ್ರಿ 10 ಗಂಟೆವರೆಗೆ ತೆರೆಯಬಹುದು. ಆದರೆ ಶೇ.50 ಗ್ರಾಹಕರಿಗೆ ಮಾತ್ರ ಅವಕಾಶ ನೀಡಬಹುದು. ರಾತ್ರಿ 10ರಿಂದ ಬೆಳಗ್ಗೆ 5ರವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರಲಿದೆ. ಆನ್‌ಲೈನ್ ಬುಕಿಂಗ್ ಮೂಲಕ ಆಹಾರ ಡೆಲಿವರಿಗೆ ಸಾಧ್ಯವಾದಷ್ಟು ಹೆಚ್ಚು ಆದ್ಯತೆ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಶಾಪಿಂಗ್ ಮಾಲ್ ಗಳು ಮತ್ತು ಇತರ ಅಂಗಡಿಗಳನ್ನು ಸಮ-ಬೆಸ ಆಧಾರದಲ್ಲಿ ಬೆಳಗ್ಗೆ 10ರಿಂದ ರಾತ್ರಿ 8ರವರೆಗೆ ತೆರೆಯಬಹುದಾಗಿದೆ. ಆದರೆ ಪ್ರತ್ಯೇಕವಾಗಿ ಇರುವ ಅಂಗಡಿಗಳಿಗೆ ಸಮ ಬೆಸ ನಿಯಮಗಳು.ಅನ್ವಯವಾಗುವುದಿಲ್ಲ ಎಂದು ಆದೇಶ ತಿಳಿಸಿದೆ.

ಸೆಲೂನ್ ಮತ್ತು ಬಾರ್ಬರ್ ಶಾಪ್ ಗಳು ಮತ್ತು ಸ್ಪಾಗಳು ದಿನನಿತ್ಯದಂತೆ ಸಹಜವಾಗಿ ತೆರೆಯಬಹುದು. ದೆಹ;ಇಯ ಸಾರ್ವಜನಿಕ ಸಂಚಾರ ಮಾರ್ಗಗಳಾದ ಮೆಟ್ರೋ ಮತ್ತು ಬಸ್ ಗಳಲ್ಲಿ ಶೇ.50ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಆದರೆ ಯಾವುದೇ ಕಾರಣಕ್ಕೂ ಪ್ರಯಾಣಿಕರು ನಿಂತು ಪ್ರಯಾಣ ಮಾಡುವಂತಿಲ್ಲ. ಈ ಆದೇಶವನ್ನು ಮಾರ್ಪಡಿಸುವವರೆಗೆ ಯಾವುದೇ ಕಾರಣಕ್ಕೂ ಬೃಹತ್ ಸಂಖ್ಯೆಯಲ್ಲಿ ಸಾರ್ವಜನಿಕರು ಜನಜಂಂಗುಳಿ ಸೇರಿ ಸಾಮಾಜಿಕ, ಧಾರ್ಮಿಕ, ರಾಜಕೀಯ ಸಭೆಗಳನ್ನು ನಡೆಸುವಂತಿಲ್ಲ ಎಂದು ಆಧೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಇದನ್ನೂ ಓದಿ: Work From Home Continue : ವರ್ಕ್ ಫ್ರಂ ಹೋಂ ಮುಂದುವರೆಯಬೇಕು; ಆಫೀಸಿಗೆ ಬರೋದು ಬೇಡ ಅಂತಿದೆ ಸಮೀಕ್ಷೆ

(Delhi Covid Yellow Alert 50 percent semi lockdown announced CM Arvind Kejriwal)

Comments are closed.