ಸೋಮವಾರ, ಏಪ್ರಿಲ್ 28, 2025
HomeCinemaBadava Rascal Movie Promotion : ಹಾಸನ, ಚಿಕ್ಕಮಗಳೂರಲ್ಲಿ ಡಾಲಿ ಹವಾ : ಅಭಿಮಾನಕ್ಕೆ ಚಿರ...

Badava Rascal Movie Promotion : ಹಾಸನ, ಚಿಕ್ಕಮಗಳೂರಲ್ಲಿ ಡಾಲಿ ಹವಾ : ಅಭಿಮಾನಕ್ಕೆ ಚಿರ ಋಣಿ ಎಂದ ನಟ

- Advertisement -

Badava Rascal Movie Promotion : ಕೊರೋನಾ ಹಾಗೂ ಓಮೈಕ್ರಾನ್ ಕರಿನೆರಳಿನ ನಡುವೆಯೂ ಜನರಿಗೆ ಸಿನಿಮಾ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ. ಹೀಗಾಗಿ ಈಗಲೂ ಸಿನಿಮಾ ನಟರನ್ನು ನೋಡೋಕೆ ಜನರು ಮುಗಿಬೀಳುತ್ತಲೇ ಇರುತ್ತಾರೆ. ಇಂದು ಕೂಡ ಹಾಸನದಲ್ಲಿ ಜನರು ಹೀಗೆ ತಮ್ಮ ನೆಚ್ಚಿನ ನಟರನ್ನು ನೋಡೋಕೆ ಮುಗಿಬಿದ್ದಿದ್ದು, ಕೊರೋನಾ ನಿಯನಗಳ ನಡುವೆಯೂ ಡಾಲಿ ಧನಂಜಯ್ ಹಾಗೂ ನಿಖಿಲ್ ಕುಮಾರಸ್ವಾಮಿ ನೋಡೋಕೆ ಜನರು ನೂಕಾಡಿ ತಳ್ಳಾಡಿ ಪರದಾಡಿದ್ರು.

ಹಾಸನದಲ್ಲಿ ಇಂದು ಸ್ಯಾಂಡಲ್ ವುಡ್ ನ ಯುವನಟರ ಸದ್ದು ಜೋರಾಗಿತ್ತು. ಇಬ್ಬರು ನಟರು ಸಿನಿಮಾ ಪ್ರಮೋಶನ್ ಗಾಗಿ ಹಾಸನಕ್ಕೆ ಬಂದಿದ್ದರು. ಬಡವ ರ್ಯಾಸ್ಕಲ್ ಸಿನಿಮಾದ ಪ್ರಮೋಶನ್ ಗಾಗಿ ಡಾಲಿ ಧನಂಜಯ್ ತೆರೆದ ಕಾರಿನಲ್ಲಿ ಹಾಸನಕ್ಕೆ ಬಂದಿದ್ದರು. ಹಾಸನದ ಸಹ್ಯಾದ್ರಿ ಸೇರಿದಂತೆ ಹಲವು ಚಿತ್ರಮಂದಿರದಲ್ಲಿ ಬಡವ್ ರ್ಯಾಸ್ಕಲ್ ಪ್ರದರ್ಶನ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಡಾಲಿ ಧನಂಜಯ್ ಥಿಯೇಟರ್ ಗಳ ಭೇಟಿ ನೀಡಿ ಅಭಿಮಾನಿಗಳ ಜೊತೆ ಬೆರೆತರು.

Badava Rascal Movie Promotion Dhananjay in Hassan and Chikkamagalore 2

ಇದಕ್ಕೂ ಮುನ್ನ ಡಾಲಿ ಧನಂಜಯ್ ಚಿಕ್ಕಮಗಳೂರಿಗೆ ತೆರಳಿದ್ದು ಅಲ್ಲಿನ ಥಿಯೇಟರ್ ಗಳ ಬಳಿ ಅಭಿಮಾನಿಗಳನ್ನು ಭೇಟಿ ಮಾಡಿದರು. ಅಲ್ಲಿಯೂ ಕೂಡ ಸಾವಿರಾರು ಅಭಿಮಾನಿ ಗಳು ನೆರೆದಿದ್ದು, ದೊಡ್ಡ ಜನಜಾತ್ರೆಯೇ ನೆರೆದಿತ್ತು. ಚಿಕ್ಕಮಗಳೂರಿನಲ್ಲಿ ಅಭಿಮಾನಿಗಳು ತೋರಿದ ಪ್ರೀತಿಗೆ ನಟ ಧನಂಜಯ್ ಸೋಷಿಯಲ್ ಮೀಡಿಯಾದಲ್ಲಿ ಪೋಟೋ ಹಂಚಿಕೊಳ್ಳುವ ಮೂಲಕ ಧನ್ಯವಾದ ಹೇಳಿದ್ದಾರೆ.

Badava Rascal Movie Promotion Dhananjay in Hassan and Chikkamagalore 3

ಕಾರಿನ ಮೇಲೆ ನಿಂತ ಧನಂಜಯ್ ಅಭಿಮಾನಿಗಳತ್ತ ಕೈಬೀಸಿದ್ದಲ್ಲದೇ ಕೆಲವರಿಗೆ ಸೆಲ್ಪಿ ಹಾಗೂ ಅಟೋಗ್ರಾಫ್ ನೀಡಿದರು. ಅಷ್ಟೇ ಅಲ್ಲ ಅಭಿಮಾನಿಗಳ ಪ್ರೀತಿ ನೋಡಿ ಖುಷಿಯಿಂದ ಸಂಭ್ರಮಿಸಿದ್ದಾರೆ. ಕೇವಲ ಧನಂಜಯ್ ಮಾತ್ರವಲ್ಲ ನಟ ನಿಕಿಲ್ ಕುಮಾರಸ್ವಾಮಿ ಕೂಡ ಹಾಸನಕ್ಕೆ ಭೇಟಿ‌ನೀಡಿದ್ದು, ಎಸ್ಬಿಜಿ ಚಿತ್ರಮಂದಿರ, ಹೊಳೆನರಸಿಪುರದ ಚನ್ನಾಂಬಿಕ ಚಿತ್ರಮಂದಿರ, ಚೆನ್ನರಾಯಪಟ್ಟಣ ದ ಗಾಯತ್ರಿ ಚಿತ್ರ ಮಂದಿರ ಸೇರಿದಂತೆ ಹಲವೆಡೆ ಭೇಟಿ ನೀಡಿ ಅಭಿಮಾನಿಗಳ ಜೊತೆ ಸಂಭ್ರಮಿಸಿದರು.

Badava Rascal Movie Promotion Dhananjay in Hassan and Chikkamagalore 1

ಡಾಲಿ ಧನಂಜಯ್ ಬಡವ ರ್ಯಾಸ್ಕಲ್ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು ಈ ಹಿನ್ನೆಲೆಯಲ್ಲಿ ಡಾಲಿ ಎಲ್ಲಾ ಜಿಲ್ಲೆಗಳಿಗೂ ಭೇಟಿ‌ ನೀಡುತ್ತಿದ್ದಾರೆ. ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಂದ ಸಿಗುತ್ತಿರುವ ಪ್ರೀತಿಯನ್ನು ಪೋಟೋರೂಪದಲ್ಲಿ ಶೇರ್ ಮಾಡುತ್ತಿದ್ದಾರೆ. ಈ ಪೋಟೋಗಳನ್ನು ನೋಡಿದ ಡಾಲಿ ಧನಂಜಯ್ ಅಭಿಮಾನಿಗಳು ನಮ್ಮ ಜಿಲ್ಲೆಗೂ ಭೇಟಿ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಕೆಲವರು ನಮ್ಮ ಜಿಲ್ಲೆಗೆ ಬರದಿದ್ದರೆ ಪ್ರತಿಭಟನೆ ಮಾಡ್ತಿವಿ ಎಂದೆಲ್ಲ ಅಭಿಮಾನದಿಂದ ಒತ್ತಾಯಿಸಿದ್ದಾರೆ.

ಇದನ್ನೂ ಓದಿ : KGF Yash New Project : ಕೆಜಿಎಫ್ 2 ನಂತರ ಯಶ್ ಏನು ಮಾಡ್ತಾರೆ ?

ಇದನ್ನೂ ಓದಿ : Eye Donate Just Misscall : ಮಿಸ್ ಕಾಲ್ ಕೊಡಿ, ನೇತ್ರದಾನಕ್ಕೆ ಹೆಸರು ನೋಂದಾಯಿಸಿ : ಪುನೀತ್ ಪುಣ್ಯತಿಥಿಯಂದು ವಿಭಿನ್ನ ಪ್ರಯತ್ನ

(Badava Rascal Movie Promotion Dhananjay in Hassan and Chikkamagalore)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular