PhonePe vs Google Pay : ಫೋನ್ ಪೇ vs ಗೂಗಲ್ ಪೇ; ಬಳಕೆಗೆ ಯಾವುದು ಬೆಸ್ಟ್?

ಭಾರತವು ಅತ್ಯಂತ ವೇಗದಲ್ಲಿ ಡಿಜಿಟಲೀಕರಣದತ್ತ ಸಾಗುತ್ತಿದೆ. ಭಾರತದಲ್ಲಿನ ದಿನೇ ದಿನೇ ಡಿಜಿಟಲ್ ಪೇಮೆಂಟ್ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ವಿಶೇಷವಾಗಿ ನೋಟು ಅಮಾನ್ಯೀಕರಣದ ನಂತರ, ಜನರು ನಗದು ಬದಲಿಗೆ ಡಿಜಿಟಲ್ ಪೇಮೆಂಟ್ ಬಳಸಲು ಪ್ರಾರಂಭಿಸಿದರು. ಪ್ರಸ್ತುತ, ವಿವಿಧ ಡಿಜಿಟಲ್ ಪೇಮೆಂಟ್ ಆಯ್ಕೆಗಳು (Digitap Payment) ಲಭ್ಯವಿದೆ ಮತ್ತು ಭಾರತದಲ್ಲಿ, ಹೆಚ್ಚಿನ ಜನರು ಈ ಪ್ಲಾಟ್‌ಫಾರ್ಮ್‌ಗಳನ್ನು ಬಳಸುತ್ತಿದ್ದಾರೆ. ಈ ಡಿಜಿಟಲ್ ಪಾವತಿ ವೇದಿಕೆಗಳು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್‌ನಂತಹ ಆನ್‌ಲೈನ್ ಸೇವೆಗಳನ್ನು (Online Banking) ನೀಡುತ್ತಿವೆ. ನಂತರ ಯುಪಿಐ ಅನ್ನು ಪರಿಚಯಿಸಿದ ನಂತರ ಪೇಮೆಂಟ್ (UPI Payment) ಮಾಡುವುದು ಇನ್ನೂ ತುಂಬಾ ಸುಲಭ. ಇವುಗಳಲ್ಲಿ ಗೂಗಲ್ ಪೇ ಹಾಗೂ ಫೋನ್ ಪೇ (PhonePe vs Google Pay) ಹೆಚ್ಚು ಜನಪ್ರಿಯತೆ ಪಡೆದಿವೆ.

ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ, ಫಿನ್‌ಟೆಕ್ ಕಂಪನಿಯು ಭಾರಿ ಯಶಸ್ಸನ್ನು ಕಂಡಿತು ಮತ್ತು ಈ ದಿನಗಳಲ್ಲಿ ಹೆಚ್ಚಿನ ಫಿನ್‌ಟೆಕ್ ಕಂಪನಿಗಳು ತಮ್ಮ ಡಿಜಿಟಲ್ ಪೇಮೆಂಟ್ ವೇದಿಕೆಯನ್ನು ಪರಿಚಯಿಸಲು ಬಯಸುತ್ತಿವೆ. ಭಾರತದಲ್ಲಿನ ಅತ್ಯಂತ ಜನಪ್ರಿಯ ಡಿಜಿಟಲ್ ಪಾವತಿ ಪ್ಲಾಟ್‌ಫಾರ್ಮ್‌ಗಳು ಪೇಟಿಎಂ (Paytm),ಗೂಗಲ್ ಪೇ (Google Pay), ಫೋನ್ ಪೇ (PhonePe), ಅಮಜಾನ್ ಪೇ (Amazon Pay) ಇತ್ಯಾದಿ. ಇವುಗಳಲ್ಲಿ ಗೂಗಲ್ ಪೇ ಹಾಗೂ ಫೋನ್ ಪೇ ಹೆಚ್ಚು ಜನಪ್ರಿಯತೆ ಪಡೆದಿವೆ.

ಫೋನ್‌ ಪೇಯಲ್ಲಿ ಸಿಗುವ ಸೌಲಭ್ಯಗಳೇನು?
ಫೋನ್ ಪೇ (PhonePe) ಭಾರತೀಯ ಇ-ಕಾಮರ್ಸ್ ಪೇಮೆಂಟ್ ವ್ಯವಸ್ಥೆ ಮತ್ತು ಡಿಜಿಟಲ್ ವಾಲೆಟ್ ಕಂಪನಿಯಾಗಿದೆ. ಇದರ ಪ್ರಧಾನ ಕಛೇರಿ ಬೆಂಗಳೂರಿನಲ್ಲಿದೆ. ಇದನ್ನು ಸಮೀರ್ ನಿಗಮ್ ಮತ್ತು ರಾಹುಲ್ ಚಾರಿ ಅವರು ಡಿಸೆಂಬರ್ 2015 ರಲ್ಲಿ ಪ್ರಾರಂಭಿಸಿದರು. ಇದು ಆಂಡ್ರಾಯ್ಡ್ (Android) ಮತ್ತು ಐಒಎಸ್ (iOS) ಎರಡಕ್ಕೂ ಲಭ್ಯವಿದೆ. ಫೋನ್ ಪೇಯ ಮೊಬೈಲ್ ಅಪ್ಲಿಕೇಶನ್ ಆಗಸ್ಟ್ 2016 ರಲ್ಲಿ ಲೈವ್ ಆಯಿತು ಮತ್ತು ಇದು ಭಾರತದಲ್ಲಿ UPI (ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್) ಅನ್ನು ಪ್ರಾರಂಭಿಸಿದ ಮೊದಲ ಡಿಜಿಟಲ್ ಪಾವತಿ ಅಪ್ಲಿಕೇಶನ್ ಆಗಿದೆ.

ಫೀಚರ್ಸ್:
*ಫೋನ್ ಪೇ ವಾಲೆಟ್ ಸೌಲಭ್ಯ ನೀಡುತ್ತಿದ್ದು, ಇದು ಕ್ವಿಕ್ ಪೇಮೆಂಟ್ ಮಾಡಲು ಸಹಾಯ ಮಾಡುತ್ತದೆ.
*ಮಲ್ಟಿಪಲ್ ಬ್ಯಾಂಕ್ ಅಕೌಂಟ್ ಲಿಂಕ್ ಮಾಡಲು ಸಾಧ್ಯವಿದೆ.

  • ಫೋನ್ ಪೇ ಯುಪಿಐ ಸೇವೆ ನೀಡುತ್ತಿದ್ದು, ಇದು ಸೆಕ್ಯೂರ್ ಪೇಮೆಂಟ್ ಆಗಿದೆ.
  • ಫೋನ್ ಪೇ ಬೆಸ್ಟ್ ಕಸ್ಟಮರ್ ಸಪೋರ್ಟ್ ಒದಗಿಸುತ್ತಿದ್ದು, ಗ್ರಾಹಕರ ಸಮಸ್ಯೆಗೆ ತಕ್ಷಣ ರೆಸ್ಪಾನ್ಸ್ ನೀಡುತ್ತದೆ.

ಗೂಗಲ್ ಪೇಯಲ್ಲಿ ಏನೇನನ್ನೆಲ್ಲಾ ಮಾಡಬಹುದು?
ಇದು ಡಿಜಿಟಲ್ ಪಾವತಿ ಪ್ಲಾಟ್‌ಫಾರ್ಮ್ ಮತ್ತು ಗೂಗಲ್ ನಿಂದ ನಡೆಸಲ್ಪಡುವ ಆನ್‌ಲೈನ್ ಪಾವತಿ ವ್ಯವಸ್ಥೆಯಾಗಿದೆ. ಆರಂಭಿಕ ಹಂತದಲ್ಲಿ, ಗೂಗಲ್ ಪೇಗೆ ತೇಜ್ (‘Tez) ಎಂಬ ಹೆಸರನ್ನು ನೀಡಲಾಯಿತು. ಇದನ್ನು ಸುಮಾರು 4 ವರ್ಷಗಳ ಹಿಂದೆ ಪ್ರಾರಂಭಿಸಲಾಯಿತು ಮತ್ತು ಅದರ ಪ್ರಧಾನ ಕಛೇರಿಯು ನೋಯ್ಡಾದಲ್ಲಿದೆ. ಇದು ಸೆಕ್ಯೂರಿಟಿ ಕಾರಣದಿಂದಾಗಿ, ವಾಲೆಟ್ ಸೇವೆಗಳನ್ನು ನೀಡುತ್ತಿಲ್ಲ. ಆದ್ದರಿಂದ ಇದು ಗೂಗಲ್ ಪೇ ಅನ್ನು ಹೆಚ್ಚು ಸುರಕ್ಷಿತಗೊಳಿಸುತ್ತದೆ. ಇದು ಸಹ ಸ್ಕ್ರ್ಯಾಚ್ ಕಾರ್ಡ್ ಅನ್ನು ಒದಗಿಸಿದೆ ಮತ್ತು ಅದರ ಮೂಲಕ ಬಳಕೆದಾರರು ಕ್ಯಾಶ್‌ಬ್ಯಾಕ್ ಗಳಿಸುತ್ತಾರೆ.

ಫೀಚರ್ಸ್
*ಸೆಕ್ಯೂರಿಟಿ ಕಾರಣದಿಂದಾಗಿ ವಾಲೆಟ್ ಸೌಲಭ್ಯ ನೀಡುತ್ತಿಲ್ಲ.
* ಸ್ಕ್ರಾಚ್ ಕಾರ್ಡ್ ಹಾಗೂ ಕಾಶ್ ಬ್ಯಾಕ್ ಸೌಲಭ್ಯ.
*ಯುಪಿಐ ಸೌಲಭ್ಯ ನೀಡುತ್ತಿದ್ದು, ಸೆಕ್ಯೂರ್ ಪೇಮೆಂಟ್ ಮಾಡಲು ಸಾಧ್ಯವಿದೆ.

ಹಾಗಿದ್ರೆ ಯಾವುದು ಬೆಸ್ಟ್?
ಈ ಎರಡೂ ಆಪ್‌ಗಳು ಯುಪಿಐ ಸೌಲಭ್ಯ ಒದಗಿಸುತ್ತದೆ. ಯೂಸರ್ ಇಂಟರ್ ಫೇಸ್ ಲಾಂಗ್ವೇಜ್ ಬಗ್ಗೆ ಹೇಳುವುದಾದರೆ ಫೋನ್ ಪೇಗಿಂತ ಗೂಗಲ್ ಪೇ ಬೆಟರ್ ಆಗಿದೆ. ಫೋನ್ ಪೇ11 ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ. ಆದರೆ ಗೂಗಲ್ ಪೇ ಕೇವಲ 7 ಭಾಷೆಯಲ್ಲಿ ಮಾತ್ರ ಲಭ್ಯವಿದೆ.

ಇದನ್ನೂ ಓದಿ: Google Map Without Internet : ಇಂಟರ್‌ನೆಟ್ ಇಲ್ಲದೆಯೂ ಗೂಗಲ್ ಮ್ಯಾಪ್ ಬಳಸಬಹುದು ! ಅದು ಹೇಗೆ ಎಂಬ ಮಾಹಿತಿ ತಿಳಿಯಿರಿ

ಇದನ್ನೂ ಓದಿ: Paytm Fake App Alert : ನೀವು ಪೇಟಿಎಂ ಬಳಸುತ್ತೀರಾ ? ಫೇಕ್ ಪೇಟಿಎಂ ಆ್ಯಪ್ ಹಣ ಲಪಟಾಯಿಸಬಹುದು; ನಿಮ್ಮ ಆ್ಯಪ್‌ನ್ನು ಪರಿಶೀಲಿಸಿ

(PhonePe vs Google Pay which one is better for use to make money transaction)

Comments are closed.