ನವದೆಹಲಿ : ಕೊರೊನಾ ವಿರುದ್ದ ಸಮರ ಸಾರಿರೋ ಪ್ರಧಾನಿ ನರೇಂದ್ರ ಮೋದಿ ದೇಶವನ್ನೇ ಲಾಕ್ ಡೌನ್ ಮಾಡಿದ್ದಾರೆ. 21 ದಿನಗಳ ಕಾಲ ಸಂಪೂರ್ಣ ಭಾರತವೇ ಲಾಕ್ ಡೌನ್ ಆಗಲಿದೆ. ಪ್ರಧಾನಿ ನರೇಂದ್ರ ಮೋದಿ ಮನೆಯಿಂದ ಹೊರಗೆ ಬರಲೇ ಬೇಡಿ ಅಂತಾ ಮನವಿ ಮಾಡಿದ್ದಾರೆ.

ಲಾಕ್ ಡೌನ್ ಹಿನ್ನೆಲೆಯಲ್ಲಿ ಎಲ್ಲೆಡೆ ಕರ್ಪ್ಯೂ ಜಾರಿ ಮಾಡಲಾಗಿದೆ. ಅಪ್ಪಿತಪ್ಪಿ ಮನೆಯಿಂದ ಹೊರಬಂದ್ರೆ ಕೇಸ್ ಬೀಳೊದು ಗ್ಯಾರಂಟಿ. ದೇಶವೇ ಲಾಕ್ ಡೌನ್ ಆದ್ರೂ ಅಗತ್ಯ ಸೇವೆಗಳು ಜನರಿಗೆ ಲಭ್ಯವಾಗಲಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಸರಕಾರ ಹೊರಡಿಸಿರೊ ಮಾರ್ಗಸೂಚಿಗಳೇನು ? ಯಾವ ಸೇವೆ ಲಭ್ಯವಿರುತ್ತೇ ? ಯಾವ ಸೇವೆ ಲಭ್ಯವಿರೋಧಿಲ್ಲ.. ಲಾಕ್ ಡೌನ್ ಆದೇಶ ಪಾಲನೆ ಮಾಡದಿದ್ರೆ ಕಾನೂನಾತ್ಮಕವಾಗಿ ಕೈಗೊಳ್ಳುವ ಕ್ರಮಗಳೇನು ಅನ್ನೋ ಕುರಿತ ಮಾಹಿತಿ ಇಲ್ಲಿದೆ ನೋಡಿ..

ಲಭ್ಯವಿರುವ ಸೇವೆಗಳು :
- ಆಸ್ಪತ್ರೆ ಮತ್ತು ವೈದ್ಯಕೀಯ ಸೇವೆ (ಖಾಸಗಿ ಮತ್ತು ಸರ್ಕಾರಿ), ಅಂಬುಲೆನ್ಸ್, ಮೆಡಿಕಲ್, ಲ್ಯಾಬ್, ಕ್ಲಿನಿಕ್, ನರ್ಸಿಂಗ್ ಹೋಮ್
- ಡಿಫೆನ್ಸ್, ಸೆಂಟ್ರಲ್ ಆರ್ಮಡ್ ಪೊಲೀಸ್ ಫೋರ್ಸ್, ಅಗತ್ಯ ಸೇವೆಗಳು (ಪೆಟ್ರೋಲಿಯಂ, ಸಿಎನ್‍ಜಿ, ಎಲ್‍ಪಿಜಿ ಮತ್ತು ಪಿಎನ್‍ಜಿ), ವಿಪತ್ತು ನಿರ್ವಹಣೆ, ವಿದ್ಯುತ್ ಪ್ರಸರಣ ಕೇಂದ್ರಗಳು, ಅಂಚೆ ಕಚೇರಿ
- ಪೊಲೀಸ್, ಹೋಮ್ ಗಾರ್ಡ್ಸ್, ವಿದ್ಯುತ್ ಪ್ರಸರಣ, ಜಲ ಮಂಡಳಿ ಸೇರಿದಂತೆ ಅಗತ್ಯ ಸೇವೆಗಳು ಲಭ್ಯ
- ಅಗತ್ಯ ವಸ್ತು ಮತ್ತು ತುರ್ತು ಸೇವೆಗಳಿಗೆ ಮಾತ್ರ ವಾಹನ ಸೌಲಭ್ಯ
- ಪೆಟ್ರೋಲ್ ಪಂಪ್, ಎಲ್‍ಪಿಜಿ ಸೇರಿದಂತೆ ಇಂಧನ ಲಭ್ಯ
- ಪ್ರಾವಿಸನ್ ಸ್ಟೋರ್, ಹಾಲು, ಹಣ್ಣು, ತರಕಾರಿ, ಮಾಂಸ, ಮೀನು.
- ಬ್ಯಾಂಕ್, ವಿಮೆ ಕಚೇರಿಗಳು ಮತ್ತು ಎಟಿಎಂ
- ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮ
- ಇ-ಕಾಮರ್ಸ್ ನಲ್ಲಿ ಆಹಾರ, ಮೆಡಿಸಿನ್ ಮತ್ತು ಔಷಧ ಉತ್ಪನ್ನಗಳು
- ಶೀತಘಟಕ (ಕೋಲ್ಡ್ ಸ್ಟೋರೇಜ್)
- ಖಾಸಗಿ ಭದ್ರತೆ ಸೇವೆ
- ಅಗತ್ಯ ವಸ್ತುಗಳ ಉತ್ಪಾದನ ಘಟಕಗಳು
- ಅಂತ್ಯಕ್ರಿಯೆಗಳಲ್ಲಿ 20 ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ.

ಯಾವುದಕ್ಕೆಲ್ಲಾ ನಿಷೇಧ ?
- ವಿಮಾನ, ರೈಲು, ರಸ್ತೆ ಸಾರಿಗೆ ಸೇರಿ ಎಲ್ಲ ಸಾರಿಗೆ ಸೌಲಭ್ಯ
- ಕೈಗಾರಿಕಾ ಸಂಸ್ಥೆಗಳು
- ಸಾಮೂಹಿಕ ಪೂಜಾ ಕೈಂಕರ್ಯ, ಧಾರ್ಮಿಕ ಕಾರ್ಯಕ್ರಮ, ಸಭೆಗಳಿಗೆ ನಿರ್ಬಂಧ
- ಎಲ್ಲ ವಾಣಿಜ್ಯ ಹಾಗೂ ಖಾಸಗಿ ಸಂಸ್ಥೆಗಳು
- ವಿನಾಯಿತಿ ಪಡೆದ ಹಾಗೂ ವರ್ಕ್ ಫ್ರಮ್ ಹೋಮ್ ಬಿಟ್ಟು ಎಲ್ಲ ಸಂಸ್ಥೆಗಳು
- ಶಿಕ್ಷಣ ಸಂಸ್ಥೆಗಳು
- ಎಲ್ಲಾ ಸಾಮಾಜಿಕ, ರಾಜಕೀಯ, ಕ್ರೀಡಾ, ಮನರಂಜನೆ, ಶೈಕ್ಷಣಿಕ, ಸಾಂಸ್ಕತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ.

ಆದೇಶ ಪಾಲಿಸದಿದ್ರೆ ಶಿಕ್ಷೆ ಖಚಿತ
- ಲಾಕ್‍ಡೌನ್ ಉಲ್ಲಂಘಿಸಿ ಸುಳ್ಳು ಮಾಹಿತಿ ನೀಡಿದರೆ 2 ವರ್ಷಳವರೆಗೆ ಜೈಲು ಮತ್ತು ದಂಡ ವಿಧಿಸಬಹುದು.
- ಸುಳ್ಳು ಸುದ್ದಿ ಹಬ್ಬಿಸಿ ಭಯ ಹುಟ್ಟಿಸಿದರೆ ಒಂದು ವರ್ಷ ಜೈಲು ಶಿಕ್ಷೆ ಅಥವಾ ದಂಡ ವಿಧಿಸಲಾಗುವುದು.
- ಕೃತಕ ಬೆಲೆ ಏರಿಕೆಯಲ್ಲಿ ಭಾಗಿಯಾದರೆ, ಪರಿಹಾರ ಸಾಮಗ್ರಿಗಳ ಬೆಲೆ ಹೆಚ್ಚಿಸಿದರೆ 2 ವರ್ಷ ಜೈಲು ಹಾಗೂ ದಂಡ
- ಅಧಿಕೃತ ವ್ಯಕ್ತಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಒಂದು ವರ್ಷ ಜೈಲು ಅಥವಾ ದಂಡ ಇಲ್ಲವೇ ಎರಡೂ ಶಿಕ್ಷೆ ವಿಧಿಸಲಾಗುವುದು.