ಮಂಗಳವಾರ, ಜೂನ್ 17, 2025
HometechnologyWhatsApp Number Change : ಹಳೆ ಮೆಸೇಜ್ ಅಳಿಸಿಹೋಗದಂತೆ ವಾಟ್ಸಾಪ್ ನಂಬರ್ ಬದಲಿಸುವುದು ಹೇಗೆ?

WhatsApp Number Change : ಹಳೆ ಮೆಸೇಜ್ ಅಳಿಸಿಹೋಗದಂತೆ ವಾಟ್ಸಾಪ್ ನಂಬರ್ ಬದಲಿಸುವುದು ಹೇಗೆ?

- Advertisement -

ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್ ಬಳಸದವರೇ ಇಲ್ಲ, ಯಾವುದೇ ಕೆಲಸವಿರಲಿ ಒಮ್ಮೆ ವಾಟ್ಸಾಪ್‌ ನೋಡಿಕೊಂಡೇ ನಮಗೇನಾದರೂ ಅಪ್‌ಡೇಟ್‌ ಇದೆಯೇ ಎಂದು ಚೆಕ್ ಮಾಡಿಕೊಂಡು ಕೆಲಸ ಆರಂಭಿಸುವ ಪರಿಪಾಠ ರೂಢಿಯಾಗಿಬಿಟ್ಟಿದೆ. ನಿಮ್ಮ iPhone ಅಥವಾ Android ಫೋನ್‌ನಲ್ಲಿ WhatsApp ಅಪ್ಲಿಕೇಶನ್ನು ಇನ್ನಷ್ಟು ಸುಲಭವಾಗಿ ಬಳಸುವುದು ಮತ್ತು ಹೆಚ್ಚು ಉಪಯೋಗ ಪಡೆಯುವ ಕುರಿತು ನಾವಿಲ್ಲಿ ಹೇಳಹೊರಟಿದ್ದೇವೆ. ಅಂದಹಾಗೆ ಯಾವುದೇ ಮೆಸೆಜ್ ಡಿಲೀಟ್ ಮಾಡದೇ, ಚಾಟ್ ಅಳಿಸಿಹೋಗದಂತೆ ವಾಟ್ಸಾಪ್ ನಂಬರ್ ಚೇಂಜ್ ( WhatsApp Number Change) ಮಾಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ

ಮೊದಲು ವಾಟ್ಸಾಪ್ ಓಪನ್ ಮಾಡಿ. ಅಲ್ಲಿ ಕಾಣಿಸುವ ಸೆಟ್ಟಿಂಗ್ ಆಯ್ಕೆಯನ್ನು ತೆರೆಯಿರಿ. ನೀವು iPhone ನಲ್ಲಿದ್ದರೆ, ಅಪ್ಲಿಕೇಶನ್‌ನ ಕೆಳಗಿನ ಬಾರ್‌ನಲ್ಲಿ “ಸೆಟ್ಟಿಂಗ್‌ಗಳು” ಟ್ಯಾಪ್ ಮಾಡಿ. ನೀವು Android ನಲ್ಲಿದ್ದರೆ, ಮೂರು ಚುಕ್ಕೆಗಳನ್ನು ಟ್ಯಾಪ್ ಮಾಡಿ ಮತ್ತು ಅಪ್ಲಿಕೇಶನ್‌ನ ಮೇಲಿನ ಬಲ ಮೂಲೆಯಲ್ಲಿರುವ “ಸೆಟ್ಟಿಂಗ್‌ಗಳು” ಆಯ್ಕೆಮಾಡಿ.

ಸೆಟ್ಟಿಂಗ್‌ನಲ್ಲಿ ನಿಮ್ಮ ಹೆಸರು ಕಾಣಿಸುತ್ತದೆ. ಹೆಸರಿನ ಮೇಲೆ ಕ್ಲಿಕ್ ಮಾಡಿ. ಆಗ ಅಲ್ಲಿ ನಿಮ್ಮ ಪ್ರೊಫೈಲ್ ಕಾಣಸಿಗುತ್ತದೆ.
ಪ್ರೊಫೈಲ್ ವಿಭಾಗದಲ್ಲಿ ಕಾಣಿಸುವ ಫೋನ್ ಸೆಕ್ಷನ್‌ನಲ್ಲಿ ನಿಮ್ಮ ವಾಟ್ಸಾಪ್‌ಗೆ ಲಿಂಕ್ ಆಗಿರುವ ಫೋನ್ ನಂಬರ್ ಕಾಣಿಸುತ್ತದೆ. ಅದೇ ನಿಮ್ಮ ವಾಟ್ಸಾಪ್ ನಂಬರ್ ಆಗಿರುತ್ತದೆ.

ವಾಟ್ಸಾಪ್ ನಂಬರ್ ಬದಲಿಸುವುದು ಹೇಗೆ?
ವಾಟ್ಸಾಪ್ ಓಪನ್ ಮಾಡಿ.
ಮೂರು ಡಾಟ್‌ಗಳು ಕಾಣಿಸುವ ಆಯ್ಕೆಯನ್ನು ಕ್ಲಿಕ್ ಮಾಡಿ, ಸೆಟ್ಟಿಂಗ್‌ಗೆ ಹೋಗಿ.
ನಂತರ ಅಲ್ಲಿ ಕಾಣಿಸುವ Account ಆಯ್ಕೆ ಮಾಡಿಕೊಳ್ಳಿ
ನಂತರ ನಿಮಗೆ Change Number ಆಯ್ಕೆ ಕಾಣಸಿಗುತ್ತದೆ. ಅದನ್ನು ಆಯ್ಕೆಮಾಡಿ. ಆಗ ನೆಕ್ಸ್ಟ್ ಆಯ್ಕೆಮಾಡಿ. ಅಲ್ಲಿ ನಿಮಗೆ ಸದ್ಯ ಬಳಸುತ್ತಿರುವ ಅಥವಾ ಹಳೆಯ ವಾಟ್ಸಾಪ್ ನಂಬರ್ ಟೈಪಿಸುವ ಆಯ್ಕೆ ಕಾಣಿಸುತ್ತದೆ. ನಂತರ ಎರಡನೇಆಯ್ಕೆಯಲ್ಲಿ ಯಾವ ನಂಬರ್‌ಗೆ ನೀವು ವಾಟ್ಸಾಪ್ ಮಾಡಲು ಬಯಸಿದ್ದೀರಿ, ಆ ನಂಬರನ್ನು ಟೈಪ್ ಮಾಡಿ.

ನಂತರ Next ಆಯ್ಕೆಮಾಡಿ. ಅಲ್ಲಿ ನಿಮಗೆ ನಿಮ್ಮ ಎಲ್ಲ ಕಾಂಟಾಕ್ಟ್‌ಗಳಿಗೂ ನೀವು ವಾಟ್ಸಾಪ್ ನಂಬರ್ ಬದಲಿಸಿರುವ ನೋಟಿಫಿಕೇಶನ್ ಹೊಗಬೇಕೇ ಎಂಬ ಆಯ್ಕೆ ತೋರಿಸುತ್ತದೆ. ನೀವು ಅಲೌ ಕೊಟ್ಟರೆ ಮಾತ್ರ ನಿಮ್ಮ ಎಲ್ಲ ಕಾಂಟಾಕ್ಟ್‌ಗಳಿಗೆ ನೀವು ವಾಟ್ಸಾಪ್ ನಂಬರ್ ಬದಲಿಸಿರುವ ನೋಟಿಫಿಕೇಶನ್ ಹೋಗುತ್ತದೆ.

ನಂತರ Done ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಇಲ್ಲಿಗೆ ನಿಮ್ಮ ವಾಟ್ಸಾಪ್ ನಂಬರ್ ಬದಲಾವಣೆ ಮುಗಿದಂತಾಯಿತು. ಹೊಸ ವಾಟ್ಸಾಪ್ ನಂಬರ್‌ನಲ್ಲಿ ನಿಮ್ಮ ಪ್ರೀತಿಪಾತ್ರರಿಗೆ ಮೆಸೇಜ್ ಕಳಿಸಿ ಖುಷಿಯಾಗಿರಿ.

ಇದನ್ನೂ ಓದಿ: Tiger Prabhakar : ಜನಮೆಚ್ಚುಗೆ ಗಳಿಸಿದ್ದ ಟೈಗರ್ ಪ್ರಭಾಕರ್ ಹೆಸರಿಗೆ ‘ಟೈಗರ್’ ಸೇರಿಕೊಂಡಿದ್ದು ಹೇಗೆ?

(WhatsApp Number Change without delete messages and chats)

RELATED ARTICLES

Most Popular