Puneet Raj Kumar : ದೇಶದ ಗಡಿ ದಾಟಿದ ರಾಜಕುಮಾರ : ಶ್ರೀಲಂಕಾದಲ್ಲಿ ಪುನೀತ್ ರಾಜ್ ಕುಮಾರ್ ಗೆ ಸಿಕ್ತು ವಿಶೇಷ ಗೌರವ

ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ( Puneet Raj Kumar ) ಬಾಲನಟನಾಗಿ ಬಣ್ಣ ಹಚ್ಚಿ ಮನೆಮಾತಾದವರು.‌ ಹೀರೋ ಆದ ಬಳಿಕವೂ ಅವರ ಬಹುತೇಕ ಸಿನಿಮಾಗಳು ಜನಮೆಚ್ಚುಗೆ ಗಳಿಸೋದರಲ್ಲಿ ಹಿಂದೆ ಬೀಳಲಿಲ್ಲ. ಅದರಲ್ಲೂ ಪುನೀತ್ ಅಭಿನಯದ ರಾಜ್ ಕುಮಾರ್ ಸಿನಿಮಾವಂತೂ ಪುನೀತ್ ನಿಜ ವ್ಯಕ್ತಿತ್ವದ ರೂಪ ಎಂಬ ಷ್ಟು ಪ್ರಸಿದ್ಧಿ ಪಡೆಯಿತು. ಹೀಗೆ ಕನ್ನಡಿಗರ ಮನೆಮಾತಾದ ಈ ರಾಜಕುಮಾರ್ ಸಿನಿಮಾ ಈಗ ದೇಶದ ಗಡಿ ದಾಟಿದ್ದು, ಶ್ರೀಲಂಕಾದಲ್ಲಿ ಪ್ರದರ್ಶನಗೊಳ್ಳುವ ಮೂಲಕ ಕನ್ನಡಿಗರಿಗೆ ಹೆಮ್ಮೆ ತಂದಿದೆ.

2017 ರಲ್ಲಿ ತೆರೆಕಂಡ ಈ ಸಿನಿಮಾ ತನ್ನ ಚಿತ್ರಕತೆ,ನಿರೂಪಣೆ,ಹಾಡು,ನಟನೆ ಹೀಗೆ ಎಲ್ಲಾ ರಂಗದಲ್ಲೂ ಸೈ ಎನ್ನಿಸಿಕೊಂಡು ಬಾಕ್ಸಾಫೀಸ್ ನಲ್ಲೂ ಗೆದ್ದು ಮೋಡಿ ಮಾಡಿತ್ತು. ಈ ಸಿನಿಮಾ ಈಗ ಶ್ರೀಲಂಕಾದಲ್ಲಿಪ ಪ್ರದರ್ಶನಗೊಂಡಿದೆ. ಶ್ರೀಲಂಕಾದ ಸಹಾಯಕ ಭಾರತೀಯ ರಾಯಭಾರಿ ಕಚೇರಿಯೂ ಈ ಸಿನಿಮಾವನ್ನು ಪ್ರದರ್ಶಿಸಿದೆ. ಭಾರತ ಸ್ವಾತಂತ್ರ್ಯ ದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ದೇಶದ ವೈಶಿಷ್ಟ್ಯತೆಗಳನ್ನು ಪರಿಚಯಿಸುವ ಕೆಲಸ‌ ಮಾಡುತ್ತಿದೆ.

ಈ ಮಾಲಿಕೆಯಲ್ಲಿ ಭಾರತದ ವೈಶಿಷ್ಟ್ಯಪೂರ್ಣ ಸಿನಿಮಾಗಳ ಸಾಲಿನಲ್ಲಿ ರಾಜಕುಮಾರ್ ಸಿನಿಮಾ ಪ್ರದರ್ಶನಗೊಂಡಿದ್ದು ಈ ವಿಚಾರವನ್ನು ಸ್ವತಃ ಶ್ರೀಲಂಕಾ ರಾಯಭಾರಿ ಕಚೇರಿ ತನ್ನ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಪುನೀತ್ ರಾಜ್ ಕುಮಾರ್ ಹಾಗೂ ಪ್ರಿಯಾ ಆನಂದ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಫ್ಯಾಮಿಲಿ ಆಕ್ಷ್ಯನ್ ಚಿತ್ರ ಇದಾಗಿದ್ದು, ವೃದ್ಧಾಶ್ರಮಗಳ ಕುರಿತು ಕತೆಯನ್ನು ಇದು ಕಟ್ಟಿಕೊಡುತ್ತದೆ ಎಂದು ಬರೆಯಲಾಗಿದೆ.

ಇದರೊಂದಿಗೆ ತಮಿಳು ಹಾಗೂ ಸಿಂಹಿಳಿ ಭಾಷೆಯಲ್ಲೂ ಈ ಸಿನಿಮಾದ ಬಗ್ಗೆ ಮಾಹಿತಿ ನೀಡಲಾಗಿದೆ. ತಮ್ಮ ಸಿನಿಮಾಗೆ ಲಭ್ಯವಾಗಿರುವ ಹೆಗ್ಗಳಿಕೆಗೆ ಹೊಂಬಾಳೆ ಫಿಲ್ಮ್ಸ ಖುಷಿ ಯಾಗಿದ್ದು, ಅಜಾದಿ ಕಿ ಅಮೃತ್ ಮಹೋತ್ಸವ್ ದಲ್ಲಿ ಕೌಟುಂಬಿಕ ಜೀವನದ ಮಹತ್ವ ಸಾರುವ ಈ ಸಿನಿಮಾವನ್ನು ಪ್ರದರ್ಶಿಸಿದ್ದಕ್ಕೆ ಧನ್ಯವಾದಗಳು ಎಂದು ಹೊಂಬಾಳೆ ಫಿಲ್ಸಂ ಹೇಳಿದೆ.

ಈ ಮಾಲಿಕೆಯಲ್ಲಿ ಭಾರತದ ಹಿಂದಿ ಸಿನಿಮಾ ಜೋಧಾಕ್ಬರ್ ಕೂಡಾ ಪ್ರದರ್ಶನಗೊಂಡಿದೆ. ಹೃತಿಕ್ ರೋಶನ್ ಹಾಗೂ ಐಶ್ವರ್ಯಾ ರೈ ನಟನೆಯ ಈ ಸಿನಿಮಾ ಐತಿಹಾಸಿಕ ಕಥಾ ಹಂದರ ಹೊಂದಿದೆ. ಇನ್ನು ರಾಜ್ ಕುಮಾರ್ ಸಿನಿಮಾದಲ್ಲಿ ತಾರಾಗಣ ಹಿರಿದಾಗಿದ್ದು, ಅನಂತ್ ನಾಗ್, ಪ್ರಕಾಶ್ ರಾಜ್, ಶರತ್ ಕುಮಾರ್, ಅಚ್ಯುತ್ ಕುಮಾರ್, ಚಿಕ್ಕಣ್ಣ ಸೇರಿದಂತೆ ಹಲವರು ನಟಿಸಿದ್ದಾರೆ.

ಇದನ್ನೂ ಓದಿ : ಬೆಂಗಳೂರಲ್ಲಿ ಗುರುವಾರದಿಂದ ಶಾಲೆಗಳು ಬಂದ್‌, ರಾಜ್ಯದಾದ್ಯಂತ ವೀಕೆಂಡ್‌ ಕರ್ಪ್ಯೂ ಜಾರಿ

ಇದನ್ನೂ ಓದಿ : ವಿಕ್ರಾಂತ್ ರೋಣ ಬಳಿಕ ಮುಂದೇನು, ಸುದೀಪ್ ಕೊಟ್ರು ಸಖತ್ ಅಪ್ಡೇಟ್

(Puneet Raj Kumar special honor Srilanka)

Comments are closed.