ಬುಧವಾರ, ಏಪ್ರಿಲ್ 30, 2025
Homeeducationweekend curfew school holiday : ವೀಕೆಂಡ್‌ ಕರ್ಪ್ಯೂ : ರಾಜ್ಯದಾದ್ಯಂತ ಶಾಲೆಗಳಿಗೆ ರಜೆ ಘೋಷಿಸಿದ...

weekend curfew school holiday : ವೀಕೆಂಡ್‌ ಕರ್ಪ್ಯೂ : ರಾಜ್ಯದಾದ್ಯಂತ ಶಾಲೆಗಳಿಗೆ ರಜೆ ಘೋಷಿಸಿದ ಶಿಕ್ಷಣ ಇಲಾಖೆ

- Advertisement -

ಬೆಂಗಳೂರು : ರಾಜ್ಯದಲ್ಲಿ ಇಂದು ರಾತ್ರಿಯಿಂದಲೇ ವೀಕೆಂಡ್‌ ಕರ್ಪ್ಯೂ ಜಾರಿಗೆ ಬರಲಿದೆ. ಬೆಂಗಳೂರಿನ ಶಾಲೆ, ಕಾಲೇಜುಗಳಿಗೆ ರಾಜ್ಯ ಸರಕಾರ ಎರಡು ವಾರಗಳ ಕಾಲ ರಜೆ ಘೋಷಣೆ ಮಾಡಿದೆ. ಇದರ ಬೆನ್ನಲ್ಲೇ ವೀಕೆಂಡ್‌ ಕರ್ಪ್ಯೂ ವೇಳೆಯಲ್ಲಿ ರಾಜ್ಯದಾದ್ಯಂತ ಶಾಲೆಗಳಿಗೆ ರಜೆಯನ್ನು ಘೋಷಣೆ (weekend curfew school holiday) ಮಾಡಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ರಾಜ್ಯದಲ್ಲಿ ಕೋವಿಡ್‌ ಸೋಂಕಿನ ನಿಯಂತ್ರಣದ ನಿಟ್ಟಿನಲ್ಲಿ ಕಠಿಣ ರೂಲ್ಸ್‌ಗಳನ್ನು ಜಾರಿಗೆ ತಂದಿದೆ. ಈ ಹಿನ್ನೆಲೆಯಲ್ಲಿ ಇಂದು ರಾತ್ರಿ ೮ ಗಂಟೆಯಿಂದಲೇ ವೀಕೆಂಡ್‌ ಕರ್ಪ್ಯೂ ಜಾರಿಗೆ ಬರಲಿದ್ದು, ಸೋಮವಾರ ಬೆಳಗ್ಗೆ ೫ ಗಂಟೆಯ ವರೆಗೂ ಸಂಪೂರ್ಣವಾಗಿ ಸ್ತಬ್ದವಾಗಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ವಾರಾಂತ್ಯದ ಕರ್ಪ್ಯೂ ಅವಧಿಯಲ್ಲಿನ ಶನಿವಾರಗಳಂದು ರಾಜ್ಯದಾದ್ಯಂತ ಎಲ್ಲಾ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ರಾಜ್ಯದಲ್ಲಿ ಕೋವಿಡ್‌ -೧೯ ರೂಪಾಂತರಿ ವೈರಸ್‌ ಓಮಿಕ್ರಾನ್‌ ವೈರಾಣು ಸೋಂಕು ಹರಡುವಿಕೆಯನ್ನು ನಿಯಂತ್ರಿಸುವುದರ ಜೊತೆಗೆ ಸಾರ್ವಜನಿಕರ ಆರೋಗ್ಯದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲುವ ನಿಟ್ಟಿನಲ್ಲಿ ಬೆಂಗಳೂರು ನಗರ ಜಿಲ್ಲೆಯ ಶಾಲೆಗಳನ್ನು ಮುಂದಿನ ಆದೇಶದವರೆಗೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಸೂಚಿಸಲಾಗಿದೆ. ಇದೀಗ ಜನವರಿ ೬ರಿಂದ ೧೯ರ ವರೆಗೆ ಬೆಂಗಳೂರು ನಗರ, ಬೆಂಗಳೂರು ದಕ್ಷಿಣ ಹಾಗೂ ಉತ್ತರ ಶೈಕ್ಷಣಿಕ ಜಿಲ್ಲೆಗಳ ವ್ಯಾಪ್ತಿಯಲ್ಲಿನ ೧೦ನೇ ತರಗತಿ ವರೆಗಿನ ಆಯಾ ಭಾಗದ ಎಲ್ಲಾ ಕೋಚಿಂಗ್‌ ಕೇಂದ್ರಗಳನ್ನು ತಾತ್ಕಾಲಿಕವಾಗಿ ಬಂದ್‌ ಮಾಡುವಂತೆ ಆದೇಶದಲ್ಲಿ ಹೇಳಲಾಗಿದೆ.

ರಾಜ್ಯದಲ್ಲಿ ವೀಕೆಂಡ್​ ಕರ್ಫ್ಯೂ ಅವಧಿಯಲ್ಲಿ ಏನಿರುತ್ತೆ ? ಏನಿರಲ್ಲ?

ರಾಜ್ಯದಲ್ಲಿ ಓಮಿಕ್ರಾನ್​ ಸೋಂಕು ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಕೋವಿಡ್​ ಸೋಂಕು ಕೂಡ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿರೋದರಿಂದ ರಾಜ್ಯ ಸರ್ಕಾರ ನೈಟ್​ ಕರ್ಫ್ಯೂ ಹಾಗೂ ವಿಕೇಂಡ್ ಕರ್ಫ್ಯೂ ಆದೇಶಗಳನ್ನು ಹೊರಡಿಸಿದೆ. ಶುಕ್ರವಾರ ರಾತ್ರಿ 10 ಗಂಟೆಗೆ ಆರಂಭವಾಗಲಿರುವ ವೀಕೆಂಡ್​ ಕರ್ಫ್ಯೂ ಸೋಮವಾರ ಬೆಳಗ್ಗೆ 5 ಗಂಟೆವರೆಗೂ ಇರಲಿದೆ. ವೀಕೆಂಡ್​ ಕರ್ಫ್ಯೂ ಅವಧಿಯಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ. ಹಾಗಾದರೆ ವೀಕೆಂಡ್​ ಕರ್ಫ್ಯೂ ಅವಧಿಯಲ್ಲಿ ಯಾವೆಲ್ಲ ಸೇವೆಗಳಿಗೆ ನಿರ್ಬಂಧವಿದೆ. ಹಾಗೂ ಯಾವೆಲ್ಲ ಚಟುವಟಿಕೆಗಳಿಗೆ ಅವಕಾಶವಿದೆ ಎಂಬುದಕ್ಕೆ ಸಂಕ್ಷಿಪ್ತ ವಿವರ ಇಲ್ಲಿದೆ ನೋಡಿ :

  • ವೀಕೆಂಡ್​ ಕರ್ಫ್ಯೂ ಅವಧಿಯಲ್ಲಿ ಅಗತ್ಯ ಸೇವೆಗಳು, ತುರ್ತು ಸೇವೆಗಳು , ಕೊರೊನಾ ನಿರ್ವಹಣೆಗೆ ಸಂಬಂಧಿಸಿದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಚೇರಿಗಳು ಕಾರ್ಯನಿರ್ವಹಿಸಲಿವೆ.
  • ಐಟಿ ಹಾಗೂ ಕೈಗಾರಿಕಾ ವಲಯಗಳಿಗೆ ಕರ್ಫ್ಯೂ ಅವಧಿಯಲ್ಲಿ ನಿರ್ಬಂಧ ಇರುವುದಿಲ್ಲ. ಕಂಪನಿಯ ಗುರುತಿನ ಚೀಟಿಯನ್ನು ತೋರಿಸುವ ಮೂಲಕ ಕರ್ತವ್ಯಕ್ಕೆ ಹಾಜರಾಗಬಹುದಾಗಿದೆ.
  • ರೋಗಿಗಳು ಹಾಗೂ ಅವರ ಸಂಬಂಧಿಗಳು, ಲಸಿಕೆ ತೆಗೆದುಕೊಳ್ಳುವವರು ತುರ್ತು ಸೇವೆಗಳ ಅಗತ್ಯ ಇರುವವರು ವೀಕೆಂಡ್​ ಕರ್ಫ್ಯೂ ಅವಧಿಯಲ್ಲಿ ಓಡಾಟ ನಡೆಸಬಹುದಾಗಿದೆ.
  • ಹಣ್ಣು ಹಾಗೂ ತರಕಾರಿ ಅಂಗಡಿ, ಡೈರಿ ಉತ್ಪನ್ನಗಳು, ದಿನಸಿ ಅಂಗಡಿಗಳು,ಮೀನು ಹಾಗೂ ಮಾಂಸದ ಅಂಗಡಿ, ಪ್ರಾಣಿಗಳಿಗೆ ಸಂಬಂಧಿಸಿದ ಅಂಗಡಿಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ.
  • ಬೀದಿ ಬದಿ ವ್ಯಾಪಾರಿಗಳೂ ಎಂದಿನಂತೆ ವ್ಯಾಪಾರ ವ್ಯವಹಾರ ನಡೆಸಬಹುದು. ನ್ಯಾಯಬೆಲೆ ಅಂಗಡಿಗಳೂ ಈ ಅವಧಿಯಲ್ಲಿ ತೆರೆಯಲಿವೆ.
  • ಹೋಂ ಡೆಲಿವರಿ ಪಡೆಯುವವರಿಗೆ ಮುಕ್ತ ಅವಕಾಶ ಇರಲಿದೆ. ರೆಸ್ಟಾರೆಂಟ್​ ಹಾಗೂ ಹೋಟೆಲ್​ಗಳಲ್ಲಿ ಪಾರ್ಸಲ್​ ಮಾತ್ರ ಪಡೆಯಬಹುದು.
  • ವಿರಳ ಸಂಖ್ಯೆಯಲ್ಲಿ ಬಸ್​ ಸೇವೆ, ರೈಲು ಸೇವೆ ಹಾಗೂ ವಿಮಾನ ಸೇವೆ ಕೂಡ ಇರಲಿದೆ. ಖಾಸಗಿ ವಾಹನಗಳು ಹಾಗೂ ಟ್ಯಾಕ್ಸಿಗಳ ಓಡಾಟಕ್ಕೂ ಅವಕಾಶ ನೀಡಲಾಗಿದೆ.
  • ಪ್ರಯಾಣಿಕರು ತಮ್ಮ ಟಿಕೆಟ್​ನ್ನು ತೋರಿಸುವ ಮೂಲಕ ವಿಮಾನ ನಿಲ್ದಾಣ, ರೈಲು ನಿಲ್ದಾಣ ಹಾಗೂ ಬಸ್​ ನಿಲ್ದಾಣಗಳಿಗೆ ಸಂಚರಿಸಬಹುದಾಗಿದೆ.
  • ಮೆಟ್ರೋ ಪ್ರಯಾಣದ ಸಮಯದಲ್ಲಿ ಪರಿಷ್ಕರಣೆ ಮಾಡಲಾಗುವುದು.
  • ವೀಕೆಂಡ್​ ಕರ್ಫ್ಯೂ ಅವಧಿಯಲ್ಲಿ ಮದುವೆ ಸೇರಿದಂತೆ ವಿಶೇಷ ಕಾರ್ಯಕ್ರಮಗಳನ್ನು ಆಚರಿಸಲು ಅನುಮತಿ ನೀಡಲಾಗಿದೆ.
  • ಸಾರ್ವಜನಿಕ ಉದ್ಯಾನವಗಳು ಬಂದ್​ ಇರಲಿವೆ.

ಇದನ್ನೂ ಓದಿ : Mixed Booster Dose : ಕೋವಿಶೀಲ್ಡ್ ಅಥವಾ ಕೋವಾಕ್ಸಿನ್ : ಮಿಕ್ಸ್ ಬೂಸ್ಟರ್ ಡೋಸ್ ಅವಕಾಶವಿಲ್ಲಎಂದ ಕೇಂದ್ರ ಸರಕಾರ

ಇದನ್ನೂ ಓದಿ : SSLC : ಎಸ್​ಎಸ್​ಎಲ್​ಸಿ ಮುಖ್ಯ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

(weekend curfew school holiday declared education department Karnataka)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular