High Risk country : ಹೈರಿಸ್ಕ್ ದೇಶದ ಪ್ರವಾಸಿಗರು ಕೊವೀಡ್ ಕೇರ್ ಸೆಂಟರ್ ಗೆ ದಾಖಲು : ಆರೋಗ್ಯ ಇಲಾಖೆ ಆದೇಶ

ಬೆಂಗಳೂರು : ರಾಜ್ಯದಲ್ಲಿ ಹೆಚ್ಚಳವಾಗ್ತಿರೋ ಕೋವಿಡ್ ಪ್ರಕರಣ ಹಿನ್ನೆಲೆಯಲ್ಲಿ ಸೋಂಕು ಹರಡುವುದನ್ನು ತಪ್ಪಿಸಲು ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹೈರಿಸ್ಕ್ ದೇಶದಿಂದ ( High Risk country ) ಬರುತ್ತಿರುವ ಬಹುತೇಕ ಪ್ರಯಾಣಿಕರು ಕೊರೋನಾ ಹಾಗೂ ಓಮೈಕ್ರಾನ್ ಸೋಂಕಿಗೆ ತುತ್ತಾಗುತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಸೋಂಕು ಹೆಚ್ಚು ವೇಗವಾಗಿ ಹರಡುತ್ತಿದೆ. ಇದನ್ನು ತಪ್ಪಿಸಲು ಆರೋಗ್ಯ ಇಲಾಖೆ ಮಹತ್ವದ ಆದೇಶ ಹೊರಡಿಸಿದ್ದು,ವಿದೇಶಿ ಪ್ರಯಾಣಿಕರ ಕೋವಿಡ್ ಚಿಕಿತ್ಸಾ ವಿಧಾನ ಬದಲಿಸಿ ಆದೇಶ ಹೊರಡಿಸಿದೆ.

ಹೈ ರಿಸ್ಕ್ ದೇಶಗಳಿಂದ ಬರುವ ಪ್ರಯಾಣಿಕರಿಗೆ ಕೋವಿಡ್ ಪಾಸಿಟಿವ್ ಬಂದರೆ ನೇರಾ ಸಿಸಿಸಿ ಸೆಂಟರ್ ಗೆ ಚಿಕಿತ್ಸೆಗೆ ದಾಖಲುಗೊಳಿಸಿ ಚಿಕಿತ್ಸೆ ಕೊಡಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಹಿಂದೆ ಹೈ ರಿಸ್ಕ್ ದೇಶಗಳಿಂದ ಬರುವ ಪ್ರಯಾಣಿಕರಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡ ಬಳಿಕ ಮತ್ತೊಮ್ಮೆ ಕರೋನಾ ಟೆಸ್ಟ್ ಮಾಡಿ ವರದಿ ನೆಗೆಟಿವ್ ಇದ್ದರೇ ಮನೆಗೆ ಕಳುಹಿಸಲಾಗುತ್ತಿತ್ತು. ಆದರೀಗ ಕೋವಿಡ್ ಕೇಸ್ ಏರಿಕೆ ಬೆನ್ನಲ್ಲೇ ಬೆಡ್ ಗಳ ಕೊರತೆ ಉಂಟಾಗುವ ಭೀತಿ ಎದುರಾಗಿದೆ.

ಹೀಗಾಗಿ ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ಪಾಸಿಟಿವ್ A symptomatic ವಿದೇಶಿ ಪ್ರಯಾಣಿಕರಿಗೆ ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಸೌಲಭ್ಯ ನೀಡಲು ನಿರ್ಧರಿಸಲಾಗಿದೆ. ಒಂದೊಮ್ಮೆ ಸೋಂಕಿತರಿಗೆ ಸಿಸಿಸಿ ವ್ಯವಸ್ಥೆ ಬೇಡವಾದರೆ ಹೋಟೆಲ್ ಗಳ ಸೌಲಭ್ಯ ಕೂಡ ಲಭ್ಯವಿದೆ. ಹೋಟೆಲ್, 3 ಸ್ಟಾರ್, 5 ಸ್ಟಾರ್ ಗಳಲ್ಲಿ ಕೋವಿಡ್ ಬೆಡ್ ವ್ಯವಸ್ಥೆ ಮಾಡಲಾಗುತ್ತದೆ. ಆದರೆ ಹೋಟೆಲ್ ಚಿಕಿತ್ಸೆ ಸೇವೆ ಪಡೆಯಲು ಬಯಸುವ ಸೋಂಕಿತರು ಸ್ವಂತ ಖರ್ಚಿನಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಸೂಚಿಸಲಾಗಿದೆ. ಇನ್ನು ಮೈಲ್ಡ್ ಮತ್ತು a symptomatic ಸೋಂಕಿತರಿಗೆ ಸಿಸಿಸಿ ಮತ್ತು ಹೋಟೆಲ್ ಗಳಲ್ಲಿ ಸಾಂಸ್ಥಿಕ ಕ್ವಾರಂಟೈನ್ಒಂ ದು ವೇಳೆ ಸಿಂಟಮ್ಸ್ ಹೆಚ್ಚಾದರೆ ಕೂಡಲೇ ಅಂತಹ ರೋಗಿಗಳನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲು ‌ನಿರ್ಧಾರ ಮಾಡಲಾಗಿದೆ.

ಕೋವಿಡ್ ಕೇರ್ ಸೆಂಟರ್ ಮತ್ತು ಹೋಟೆಲ್ ನ ಸಾಂಸ್ಥಿಕ ಕ್ವಾರಂಟೈನ್ 7 ದಿನಗಳಿಗೆ ನಿಗದಿಪಡಿಸಲಾಗಿದ್ದು, 7 ನೇ ದಿನಕ್ಕೆ ಡಿಸ್ಟಾರ್ಜ್ ಅನುಮತಿ ನೀಡಲಾಗಿದೆ. ಇನ್ನು ಸಾಂಸ್ಥಿಕ ಕ್ವಾರಂಟೈನ್ 5ನೇ ದಿನಕ್ಕೆ ಜ್ವರ, ನೆಗಡಿ, ಉಸಿರಾಟದ ತೊಂದರೆ ಇಲ್ಲದಿದ್ದರೇ ಹಾಗೂ 94% ಆಕ್ಸಿಜನ್ ಇದ್ದರೆ ಆಗಷ್ಟೆ ಬಿಡುಗಡೆಗೆ ಅನುಮತಿ ನೀಡಲಾಗುತ್ತದೆ. ಅಲ್ಲದೇ
ಟೆಸ್ಟಿಂಗ್ ದಿನದಿಂದ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಕೌಂಟ್ ಮಾಡಲು ಸೂಚಿಸಲಾಗಿದೆ.

ಇದನ್ನೂ ಓದಿ : ಎಸ್​ಎಸ್​ಎಲ್​ಸಿ ಮುಖ್ಯ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

ಇದನ್ನೂ ಓದಿ : ವೀಕೆಂಡ್‌ ಕರ್ಪ್ಯೂ : ರಾಜ್ಯದಾದ್ಯಂತ ಶಾಲೆಗಳಿಗೆ ರಜೆ ಘೋಷಿಸಿದ ಶಿಕ್ಷಣ ಇಲಾಖೆ

( High Risk country Visitors to the Covid Care Center are ordered by the Department of Health)

Comments are closed.