ಬುಧವಾರ, ಜೂನ್ 18, 2025
HomeCinemaLata Mangeshkar : ಗಾನ ಕೋಗಿಲೆ ಲತಾ ಮಂಗೇಶ್ಕರ್​ ಆರೋಗ್ಯದ ಬಗ್ಗೆ ಆಸ್ಪತ್ರೆಯಿಂದ ಹೊರಬಿತ್ತು ಮಾಹಿತಿ

Lata Mangeshkar : ಗಾನ ಕೋಗಿಲೆ ಲತಾ ಮಂಗೇಶ್ಕರ್​ ಆರೋಗ್ಯದ ಬಗ್ಗೆ ಆಸ್ಪತ್ರೆಯಿಂದ ಹೊರಬಿತ್ತು ಮಾಹಿತಿ

- Advertisement -

Lata Mangeshkar : ಕೋವಿಡ್ ಸೋಂಕಿಗೆ ಒಳಗಾಗಿರುವ ಹಿರಿಯ ಗಾಯಕಿ ಲತಾ ಮಂಗೇಶ್ಕರ್​ ಈಗಲೂ ಐಸಿಯುವಿನಲ್ಲೇ ಇದ್ದು ಅವರಿಗೆ ಚಿಕಿತ್ಸೆ ಮುಂದುವರಿದಿದೆ. ದಿನದಿಂದ ದಿನಕ್ಕೆ ಲತಾ ಮಂಗೇಶ್ಕರ್​ ಕೊರೊನಾದಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಕೋವಿಡ್​ 19 ಹಾಗೂ ನ್ಯುಮೋನಿಯಾ ಸೋಂಕಿಗೆ ಒಳಗಾಗಿರುವ ಹಿನ್ನೆಲೆಯಲ್ಲಿ ಲತಾ ಮಂಗೇಶ್ಕರ್​ ಆರೋಗ್ಯದ ಮೇಲೆ ವೈದ್ಯರು ಸಂಪೂರ್ಣ ನಿಗಾ ಇಟ್ಟಿದ್ದಾರೆ. ಆರು ಮಂದಿ ವೈದ್ಯರ ತಂಡ ಮುಂಬೈನ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯಲ್ಲಿ ಲತಾ ಮಂಗೇಶ್ಕರ್​ರ ಆರೈಕೆಯಲ್ಲಿ ತೊಡಗಿದ್ದಾರೆ. ಲತಾ ಮಂಗೇಶ್ಕರ್ ಆರೋಗ್ಯದಲ್ಲಿ ಒಳ್ಳೆಯ ಚೇತರಿಕೆ ಕಂಡು ಬರ್ತಿದೆ ಅಂತಾ ವೈದ್ಯರು ತಿಳಿಸಿದ್ದಾರೆ. ಲತಾ ಮಂಗೇಶ್ಕರ್​ರಿಗೆ ಟ್ರೀಟ್​ಮೆಂಟ್​ ನೀಡುತ್ತಿರುವ ವೈದ್ಯ ಡಾ. ಪ್ರತೀತ್​ ಸಂಧಾನಿ , ಲತಾ ಮಂಗೇಶ್ಕರ್​ ಇನ್ನೂ ಐಸಿಯುವಿನಲ್ಲಿಯೇ ಇದ್ದಾರೆ.ಆದರೆ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದೆ ಎಂದು ಹೇಳಿದರು.
ಭಾರತದ ಗಾನ ಕೋಗಿಲೆ ಎಂಬ ಬಿರುದು ಪಡೆದಿರುವ 92 ವರ್ಷದ ಹಿರಿಯ ಗಾಯಕಿ ಲತಾ ಮಂಗೇಶ್ಕರ್​​ರನ್ನು 2 ದಿನಗಳ ಹಿಂದೆ ಮುಂಬೈನ ಬ್ರೀಚ್​ ಕ್ಯಾಂಡಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೊರೊನಾ ಸೋಂಕಿಗೆ ಒಳಗಾದ ಲತಾ ಮಂಗೇಶ್ಕರ್​ರಿಗೆ ಸೌಮ್ಯ ಲಕ್ಷಣಗಳು ಕಾಣಿಸಿಕೊಂಡಿದ್ದವು. ಆದರೆ ಅವರ ವಯಸ್ಸನ್ನು ಗಮನದಲ್ಲಿಟ್ಟುಕೊಂಡು ಮುಂಜಾಗ್ರತಾ ಕ್ರಮವಾಗಿ ಅವರನ್ನು ಐಸಿಯುವಿಗೆ ಶಿಫ್ಟ್​ ಮಾಡಲಾಗಿದೆ.


ನ್ಯುಮೋನಿಯಾದಿಂದಾಗಿ ಉಸಿರಾಟದ ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ 2019ರ ನವೆಂಬರ್​ ತಿಂಗಳಲ್ಲಿ ಲತಾ ಮಂಗೇಶ್ಕರ್​ರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. 28 ದಿನಗಳ ಬಳಿಕ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು.


1942ರಲ್ಲಿ ಕೇವಲ 13 ವರ್ಷ ವಯಸ್ಸಿನಲ್ಲಿ ತಮ್ಮ ವೃತ್ತಿ ಜೀವನ ಆರಂಭಸಿದ ಲತಾ ಮಂಗೇಶ್ಕರ್​ ಈವರೆಗೆ ಭಾರತದ ವಿವಿಧ ಭಾಷೆಗಳಲ್ಲಿ 30 ಸಾವಿರಕ್ಕೂ ಅಧಿಕ ಹಾಡುಗಳಿಗೆ ದನಿಯಾಗಿದ್ದಾರೆ. ಬರೋಬ್ಬರಿ 7 ದಶಕಗಳ ಜರ್ನಿಯಲ್ಲಿ ಲತಾ ಮಂಗೇಶ್ಕರ್​ ಅಪಾರ ಅಭಿಮಾನಿ ಬಳಗವನ್ನೂ ಸಂಪಾದಿಸಿದ್ದಾರೆ. ಅಜೀಬ್​ ದಾಸತಾ ಹೈ ಯೇ, ಪ್ಯಾರ್​ ಕಿಯಾ ತೋ ಡರನಾ ಕ್ಯಾ , ನೀಲಾ ಆಸ್ಮಾನ್​ ಸೋ ಗಯಾ ಹಾಗೂ ತೇರೆ ಲಿಯೇ ಲತಾ ಮಂಗೇಶ್ಕರ್​ರಿಗೆ ಹೆಸರು ತಂದುಕೊಟ್ಟಂತಹ ಹಾಡುಗಳಾಗಿದೆ.

ಸಿನಿಮಾದ ಗಾಯನ ಲೋಕದಲ್ಲಿ ಲತಾ ಮಂಗೇಶ್ಕರ್​ ಮಾಡಿದ ಅಪ್ರತಿಮ ಸಾಧನೆಗಳನ್ನು ಗಮನಿಸಿ ಕೇಂದ್ರ ಸರ್ಕಾರವು ಇವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು 2001ರಲ್ಲಿ ನೀಡಿ ಗೌರವಿಸಿದೆ. ಇದರ ಜೊತೆಯಲ್ಲಿ ಪದ್ಮ ಭೂಷಣ, ಪದ್ಮ ವಿಭೂಷಣ ಹಾಗೂ ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿ ಸೇರಿದಂತೆ ಸಾಕಷ್ಟು ಅತ್ಯುನ್ನತ ಪ್ರಶಸ್ತಿಗಳು ಇವರ ಮುಡಿಗೇರಿದೆ.

Lata Mangeshkar health update: Veteran singer still in ICU, doctors note slight improvement

ಇದನ್ನು ಓದಿ : PM Modi emergency meeting : ಭಾರತದಲ್ಲಿ ಕೋವಿಡ್‌ ಆರ್ಭಟ : ಪ್ರಧಾನಿ ಮೋದಿ ನೇತೃತ್ವದಲ್ಲಿ ಎಲ್ಲಾ ಸಿಎಂಗಳ ಜೊತೆ ತುರ್ತು ಸಭೆ

ಇದನ್ನೂ ಓದಿ : Mekedatu Government Order : ಮೇಕೆದಾಟು ಪಾದಯಾತ್ರೆಯನ್ನು ತಕ್ಷಣವೇ ನಿಲ್ಲಿಸಿ : ಸರಕಾರದ ಅಧಿಕೃತ ಆದೇಶ

RELATED ARTICLES

Most Popular