ನವದೆಹಲಿ : ಭಾರತದಲ್ಲಿ ನಿತ್ಯವೂ ಮೂರು ಲಕ್ಷಕ್ಕೂ ಅಧಿಕ ಕೋವಿಡ್ ಪ್ರಕರಣ ದಾಖಲಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 3,33,533 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದೆ (daily coronavirus) ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿಯನ್ನು ಬಿಡುಗಡೆ ಮಾಡಿದೆ. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 4,000 ಪ್ರಕರಣಗಳು ಇಳಿಕೆಯಾಗಿದೆ. ಇದೀಗ COVID-19 ಪ್ರಕರಣಗಳ ಸಂಖ್ಯೆ 3,92,37,264 ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ ವೈರಸ್ ಸೋಂಕಿನಿಂದಾಗಿ ದೇಶವು 535 ಸಾವುಗಳನ್ನು ವರದಿ ಮಾಡಿದೆ.
ಸಕ್ರಿಯ ಪ್ರಕರಣಗಳು 21,87,205 ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 4,89,409 ಕ್ಕೆ ಏರಿದೆ, ರಾಷ್ಟ್ರೀಯ ಕೋವಿಡ್ ಚೇತರಿಕೆ ದರವು 93.18 ಪ್ರತಿಶತಕ್ಕೆ ಇಳಿದಿದೆ ಎಂದು ಸಚಿವಾಲಯ ತಿಳಿಸಿದೆ. ರಾಷ್ಟ್ರವ್ಯಾಪಿ ಕೋವಿಡ್-19 ವ್ಯಾಕ್ಸಿನೇಷನ್ ಡ್ರೈವ್ ಅಡಿಯಲ್ಲಿ ಇದುವರೆಗೆ ದೇಶದಲ್ಲಿ ನಿರ್ವಹಿಸಲಾದ ಸಂಚಿತ ಡೋಸ್‌ಗಳು 161.92 ಕೋಟಿ ಮೀರಿದೆ. ಭಾರತದ ಕೋವಿಡ್-19 ಸಂಖ್ಯೆಯು ಆಗಸ್ಟ್ 7, 2020 ರಂದು 20 ಲಕ್ಷದ ಗಡಿಯನ್ನು ದಾಟಿದೆ, ಆಗಸ್ಟ್ 23 ರಂದು 30 ಲಕ್ಷ, ಸೆಪ್ಟೆಂಬರ್ 5 ರಂದು 40 ಲಕ್ಷ ಮತ್ತು ಸೆಪ್ಟೆಂಬರ್ 16 ರಂದು 50 ಲಕ್ಷ. ಇದು ಸೆಪ್ಟೆಂಬರ್ 28 ರಂದು 60 ಲಕ್ಷ, ಅಕ್ಟೋಬರ್ 11 ರಂದು 70 ಲಕ್ಷವನ್ನು ದಾಟಿದೆ. ಅಕ್ಟೋಬರ್ 29 ರಂದು 80 ಲಕ್ಷ, ನವೆಂಬರ್ 20 ರಂದು 90 ಲಕ್ಷ ಮತ್ತು ಡಿಸೆಂಬರ್ 19 ರಂದು ಒಂದು ಕೋಟಿ ಗಡಿ ದಾಟಿದೆ. ಶನಿವಾರ, ಭಾರತದಲ್ಲಿ 3,37,704 ಹೊಸ ಕರೋನವೈರಸ್ ಪ್ರಕರಣಗಳು ದಾಖಲಾಗಿವೆ, ಜೊತೆಗೆ ವೈರಲ್ ಸೋಂಕಿನಿಂದ 488 ಸಾವುಗಳು ಸಂಭವಿಸಿವೆ.
ಐದು ವರ್ಷದೊಳಗಿನ ಮಕ್ಕಳಿಗೆ ಮಾಸ್ಕ್ ಕಡ್ಡಾಯವಲ್ಲ: ಕೇಂದ್ರ ಸರ್ಕಾರ
ಕೊರೊನಾ ಮೂರನೇ ಅಲೆಯಲ್ಲಿ ಮಕ್ಕಳಿಗೆ ಅಪಾಯ ಹೆಚ್ಚಿದೆ ಎಂದು ಈಗಾಗಲೇ ಸಾಕಷ್ಟು ಅಧ್ಯಯನಗಳು ಮಾಹಿತಿ ನೀಡಿವೆ. ಅಲ್ಲದೇ ದೇಶದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆಯು ದಿನದಿಂದ ದಿನಕ್ಕೆ ಮಿತಿಮೀರುತ್ತಲೇ ಇದೆ. ಈ ಎಲ್ಲದರ ನಡುವೆ ಕೇಂದ್ರ ಸರ್ಕಾರವು ಕೊರೊನಾ ಸೋಂಕಿನ ತಡೆಗೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳತ್ತಲೇ ಬರ್ತಿದೆ. ಇದೀಗ ಮಕ್ಕಳಿಗೆ ಕೊರೊನಾ ಮಾರ್ಗಸೂಚಿ ವಿಚಾರದಲ್ಲಿ ಕೇಂದ್ರ ಆರೋಗ್ಯ ಸಚಿವಾಲಯು ಕೆಲವು ಮಹತ್ವದ ಬದಲಾವಣೆಗಳನ್ನು ಮಾಡಿದೆ. ಇದರನ್ವಯ ಮಕ್ಕಳಿಗೆ ಕೋವಿಡ್ ಸೋಂಕು ಎಷ್ಟೇ ತೀವ್ರತರವಾಗಿದ್ದರೂ ಸಹ ಆ್ಯಂಟಿ ವೈರಸ್ ಹಾಗೂ ಮೊನೋಕ್ಲೊನಲ್ ಆ್ಯಂಟಿಬಾಡಿಗಳನ್ನು ಬಳಕೆ ಮಾಡುವಂತಿಲ್ಲ ಎಂದು ಹೇಳಿದೆ.
ಮಕ್ಕಳು ಹಾಗೂ ಹದಿಹರೆಯದವರಿಗೆ ಕೋವಿಡ್ 19 ಪರಿಷ್ಕೃತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರವು ಐದು ವರ್ಷಕ್ಕಿಂತ ಕೆಳಗಿನ ಮಕ್ಕಳು ಮಾಸ್ಕ್ ಧರಿಸುವ ಅವಶ್ಯಕತೆ ಇಲ್ಲ ಎಂದು ಹೇಳಿದೆ. ಇನ್ನು 6 ರಿಂದ 11 ವರ್ಷದ ಒಳಗಿನ ಮಕ್ಕಳು ಪೋಷಕರ ಮಾರ್ಗದರ್ಶನದಲ್ಲಿ ಸೂಕ್ತವಾಗಿ ಮಾಸ್ಕ್ ಧರಿಸಲು ಸಾಧ್ಯವಾದರೆ ಮಾತ್ರ ಮಾಸ್ಕ್ ಧರಿಸಬಹುದು ಎಂದು ನಿರ್ದೇಶನ ನೀಡಿದೆ. ಇನ್ನು 12 ವರ್ಷ ಮೇಲ್ಪಟ್ಟವರು ಮಾತ್ರ ಎಲ್ಲರಂತೆ ಮಾಸ್ಕ್ ಧರಿಸುವುದು ಅನಿವಾರ್ಯ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಪ್ರಸ್ತುತ ದೇಶದಲ್ಲಿ ಕೊರೊನಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡ ತಜ್ಞರ ತಂಡವು ಈ ಮಾರ್ಗಸೂಚಿಯನ್ನು ಪರಿಷ್ಕೃತಗೊಳಿಸಿದೆ.
ಇನ್ನು ವಿದೇಶಗಳಲ್ಲಿ ಸಿಕ್ಕಂತಹ ದತ್ತಾಂಶಗಳನ್ನು ನೋಡಿದರೆ ಓಮಿಕ್ರಾನ್ ರೂಪಾಂತರಿಯು ಹೆಚ್ಚು ಗಂಭೀರ ಲಕ್ಷಣಗಳನ್ನು ಹೊಂದಿಲ್ಲ. ಹಾಗೆಂದ ಮಾತ್ರಕ್ಕೆ ಕೊರೊನಾ ಮೂರನೇ ಅಲೆಯನ್ನು ನಿರ್ಲಕ್ಷ್ಯ ಮಾಡುವಂತಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಇದನ್ನು ಅಸಿಂಪ್ಟೋಮ್ಯಾಟಿಕ್, ಸೌಮ್ಯ , ಮಧ್ಯಮ ಹಾಗೂ ಗಂಭೀರ ಎಂದು ವಿಂಗಡಿಸಲಾಗಿದೆ. ಮಾರ್ಗಸೂಚಿಯ ಪ್ರಕಾರ ಕೋವಿಡ್ 19 ಒಂದು ವೈರಲ್ ಸೋಂಕಾಗಿದ್ದು ಈ ಸೋಂಕನ್ನು ನಿವಾರಿಸುವಲ್ಲಿ ಆಂಟಿಮೈಕ್ರೋಬಯಲ್ಸ್ ಯಾವುದೇ ರೀತಿಯ ಪಾತ್ರ ವಹಿಸುವುದಿಲ್ಲ ಎಂದು ಹೇಳಲಾಗಿದೆ.
ಇದನ್ನೂ ಓದಿ : ಬಿಬಿಎಂಪಿ ಟೆಸ್ಟ್ ಮಾಡಿಸಿ ಅನುತ್ತೇ, ಸಚಿವರು ಬೇಡ ಅಂತಾರೆ : ಸರ್ಕಾರದ ಡೊಂಬರಾಟಕ್ಕೆ ಜನರು ಹೈರಾಣ
ಇದನ್ನೂ ಓದಿ : ಖಾಸಗಿ ಆಸ್ಪತ್ರೆ ಸಂಕಷ್ಟಕ್ಕಿಲ್ಲ ಬೆಲೆ : ಕೋಟ್ಯಾಂತರ ರೂಪಾಯಿ ಬಿಲ್ ಬಾಕಿ ಉಳಿಸಿಕೊಂಡ ಸರಕಾರ
(India Over 3.33 Lakh Fresh COVID Cases, India Sees Dip In Daily Coronavirus Cases)