Couple Therapy: ನಿಮ್ಮ ಸಂಗಾತಿ ಜೊತೆಗಿನ ಜಗಳ ಪರಿಹರಿಸಲು ನೆರವಾಗುವ ಚಟುವಟಿಕೆಗಳಿವು!

ನಿಮ್ಮ ಸಂಗಾತಿಯೊಂದಿಗೆ ನೀವು ಮಾಡುವ ಚಟುವಟಿಕೆಗಳು ನಿಮ್ಮ ಮನಸ್ಥಿತಿ, ಆರೋಗ್ಯ ಮತ್ತು ಸಂಬಂಧಗಳ ಮೇಲೆ ಪರಿಣಾಮ ಬೀರುತ್ತವೆ.  ವಾಸ್ತವವಾಗಿ, ನೀವಿಬ್ಬರೂ ನಿರಂತರವಾಗಿ ಜಗಳವಾಡುತ್ತಿರುವಾಗ ಅಥವಾ ಬೇಸರದಲ್ಲಿರುವಾಗ  ನಿಮ್ಮ ಜೊತೆಗಾರರೊಂದಿಗೆ ಇಂತಹ ಹವ್ಯಾಸಗಳು ಮತ್ತು ಆಸಕ್ತಿಗಳಲ್ಲಿ ತೊಡಗಿಸಿಕೊಳ್ಳಲು ತಜ್ಞರು ಶಿಫಾರಸು ಮಾಡುತ್ತಾರೆ.  ದಂಪತಿಗಳ ನಡುವೆ ಈ ಚಟುವಟಿಕೆಗಳು ಸಮಸ್ಯೆ ಪರಿಹರಿಸುವ ವಿಧಾನವನ್ನು ಪ್ರಾರಂಭಿಸಲು ಉತ್ತಮ ಮಾರ್ಗವಾಗಿದೆ. ಸಂಬಂಧವನ್ನು ಬಲಪಡಿಸುವಲ್ಲಿ ಈ ವ್ಯಾಯಾಮ ಸಹಕಾರಿಯಾಗಲಿದೆ.  ಆದ್ದರಿಂದ, ನಿಮ್ಮ ಸಂಗಾತಿಯೊಂದಿಗೆ ನೀವು ಖಂಡಿತವಾಗಿಯೂ ಪ್ರಯತ್ನಿಸಬೇಕಾದ ಕೆಲವು  ಚಟುವಟಿಕೆಗಳನ್ನು (Couple Therapy) ಇಲ್ಲಿ ನೀಡಲಾಗಿದೆ.

  1. ಯಾವುದೇ ಮಾಧ್ಯಮದ ಮೂಲಕ ಪ್ರೀತಿ ವ್ಯಕ್ತಪಡಿಸುವುದು.

ನೀವು ಸಂಗಾತಿಯೊಂದಿಗೆ ಇಲ್ಲದಿರುವಾಗ ದಿನವಿಡೀ ಮೆಸೆಜ್ ಅಥವಾ ಕಾಲ್ ಮಾಡುವ ಮೂಲಕ ನಿಮ್ಮ ಸಂಗಾತಿಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಲು ಅಥವಾ ಪ್ರಿತಿ ತೋರಿಸುವ ಅಭ್ಯಾಸ ರೂಢಿಸಿಕೊಳ್ಳಿ. ಮತ್ತು ಜೊತೆಗಿರುವಾಗ  ಪ್ರೀತಿಯಿಂದ ಒಟ್ಟಿಗೇ ಸ್ನಾನ ಮಾಡಿ.  ಅವರು ನಿಮಗೆ ಎಷ್ಟು ಮುಖ್ಯ ಎಂದು ನಿಮ್ಮ ಸಂಗಾತಿಗೆ ತಿಳಿಸಿ ಮತ್ತು ಪರಸ್ಪರ ಕೃತಜ್ಞತೆಯನ್ನು ವ್ಯಕ್ತಪಡಿಸಿ.

  1. ಜ್ಞಾಪಕದಲ್ಲಿರುವಂತ ವಸ್ತುಗಳನ್ನು ಸಂಗ್ರಹಿಸಿ.

ಮರೆಯಲಾಗದ ಪ್ರೀತಿಯ ಕ್ಷಣಗಳ ಪೋಟೊ, ಕಾರ್ಡ, ಉಡುಗೊರೆ ಇತ್ಯಾದಿಗಳನ್ನು ಸಂಗ್ರಹಿಸಿ. ಇಂತ ವಸ್ತುಗಳು ಸದಾ ಹತ್ತಿರವಿರುವ ಭಾವನೆ ನೀಡುತ್ತವೆ. ಇಬ್ಬರಿಗೂ ಸಂತೋಷತಮದುಕೊಡುತ್ತದೆ. ಈ ವಸ್ತುಗಳು ನಿಮ್ಮವರ ಮೇಲಿನ ಪ್ರೀತಿಯನ್ನು ಹೆಚ್ಚಿಸಲು ನೆರವಾಗುತ್ತದೆ.

  1. ಸಂಭಾಷಣೆ ನಡೆಸಿ.

ಪ್ರಮುಖ ಸಂಭಾಷಣೆಗಳನ್ನು ತಡ  ಮಾಡದೇ ನಿಮ್ಮ ಸಂಗಾತಿಯೊಟ್ಟಿಗೆ ಹಂಚಿಕೊಳ್ಳಿ. ಸಮಯಕ್ಕಾಗಿ ಕಾಯುವ ಬದಲು ನೀವೆ ಒಂದು ಸಮಯ ನಿಗದಿಪಡಿಸಿ ಮುಖ್ಯ ವಿಷಯಗಳನ್ನು ಹಂಚಿಕೊಳ್ಳಿ.  ವಿಷಯವು ಎಷ್ಟೇ ಗಂಭೀರವಾಗಿರಲಿ ನಿಮ್ಮ ಸಂಗಾತಿಯೊಂದಿಗೆ ಸಂವಹನ ನಡೆಸಲು ಮತ್ತು ಸಮಸ್ಯೆಯನ್ನು ಪರಿಹರಿಸಲು ಅದರ ಬಗ್ಗೆ ಸುದೀರ್ಘವಾಗಿ ಮಾತನಾಡಿ.  ನೀವು ಮತ್ತು ನಿಮ್ಮ ಸಂಗಾತಿಯೊಂದಿಗಿನ ಸಂವಹನಕ್ಕೆ ಸಮಯನೀಡದಿದ್ದಾಗ, ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳಬಹುದು ಮತ್ತು ಹೆಚ್ಚಿನ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ, ನಿಮ್ಮ ಸಂಗಾತಿಯೊಂದಿಗೆ ಸಂವಹನ ನಡೆಸಲು ಸಮಯವನ್ನು ನಿಗದಿಪಡಿಸುವುದು ಸಹ ಅಗತ್ಯವಾಗಿದೆ.

4.  ಸಂಗಾತಿಯೊಟ್ಟಿಗೆ ಯೋಗ
ನಿಮ್ಮ ಸಂಗಾತಿಯೊಂದಿಗೆ ಶಾಂತಿ ಮತ್ತು ನೆಮ್ಮದಿ ಅನುಭವಿಸಲು ಯೋಗ ಒಂದು ಉತ್ತಮ ಮಾರ್ಗ. ಇಬ್ಬರೂ ಸೇರಿ ಒಂದೇ ಭಂಗಿಯಲ್ಲಿ ಒಟ್ಟಿಗೆ ಯೋಗ ಮಾಡಿದಲ್ಲಿ ನೆಮ್ಮದಿ ಅನುಭವಿಸಲು ಸಾಧ್ಯ. ಯೋಗವು ನಿಮ್ಮ ದೇಹದಲ್ಲಿನ ಹಾರ್ಮೋನ್‌ಗಳನ್ನು ನಿಯಂತ್ರಿಸುತ್ತದೆ‌. ಮತ್ತು ಅದನ್ನು ನಿಮ್ಮ ಸಂಗಾತಿಯೊಂದಿಗೆ ಅಭ್ಯಾಸ ಮಾಡುವುದರಿಂದ ಇಬ್ಬರಲ್ಲಿಯೂ ಸಮತೋಲನವನ್ನು ಅನುಭವಿಸಲು ಸಹಾಯ ಮಾಡುತ್ತದೆ.  ಒಟ್ಟಿಗೆ ಯೋಗಭ್ಯಾಸ ಮಾಡುವುದರಿಂದ ಇಬ್ಬರ ನಡುವಿನ ನಂಬಿಕೆ ಸುಧಾರಿಸುತ್ತದೆ.

ನಿಮ್ಮ ದಿನ ಹೇಗಿತ್ತು ಎಂಬುದರ ಕುರಿತು ಚರ್ಚಿಸುವಾಗ ಇಬ್ಬರೂ ಎಷ್ಟು ಮಾತನಾಡಬಹುದು ಎಂಬುದನ್ನು ನೋಡಿದರೆ ನಿಮಗೆ ಆಶ್ಚರ್ಯವಾಗುತ್ತದೆ.  ದಿನವಿಡೀ ಇಬ್ಬರೂ ಎದುರಿಸಿದ ಖುಷಿ ಹಾಗೂ ಬೆಸರದ ಸಂಗತಿಗಳನ್ನು ಚರ್ಚಿಸಿದಾಗ ಮತ್ತು ದಿನದಲ್ಲಿ ಸಂಭವಿಸಿದ ಅದ್ಭುತ ಸಂಗತಿಗಳ ಬಗ್ಗೆ ಮಾತುಗಳು ಬಂದಾಗ ನಿಮ್ಮದಿನ ಸುಂದರವಾಗಿರುತ್ತದೆ.

ಇದನ್ನೂ ಓದಿ: Right To Privacy : ‘ಸಂಗಾತಿಯ ಕಾಲ್​ ರೆಕಾರ್ಡ್​ ಮಾಡುವ ಅಧಿಕಾರ ಪತಿಗಿಲ್ಲ’ : ಹೈಕೋರ್ಟ್ ಮಹತ್ವದ ಆದೇಶ

(Couple Therapy you must follow for good relationship with partner)

Comments are closed.