ಕಾಲಿವುಡ್, ಬಾಲಿವುಡ್, ಸ್ಯಾಂಡಲ್ ವುಡ್ ಹೀಗೆ ಚಿತ್ರರಂಗ ಯಾವುದೇ ಇರಲಿ ಮ್ಯಾರಿಡ್ ರಿಂದ ಆರಂಭಿಸಿ, ಯಂಗ್ ಕಪಲ್ಸ್ ಹಾಗೂ ಸೆಲೆಬ್ರೆಟಿಗಳ ಹಾಟ್ ಫೆವರಿಟ್ ಮಾಲ್ಡೀವ್ಸ್. ವಿಶಾಲವಾದ ಸಮುದ್ರ ತೀರದಲ್ಲಿ ಅರೆಬೆತ್ತಲೆಯಾಗಿ ಪೋಸ್ ಕೊಡೋಕೆ ನಟಿಯರಂತೂ ಮಾಲ್ಡೀವ್ಸ್ ಗೆ ಹಾರೋಕೇ ತುದಿಗಾಲಲ್ಲಿ ನಿಂತಿರುತ್ತಾರೆ. ಈಗ ಈ ಸಾಲಿಗೆ ಹೊಸ ಸೇರ್ಪಡೆ ಬಾಲಿವುಡ್ ನ ನ್ಯೂಲೀ ಮ್ಯಾರೀಡ್ ಕಪಲ್ಸ್ ಕತ್ರಿನಾ ಹಾಗೂ ವಿಕ್ಕಿ (Katrina kaif Honeymoon).
ಕಳೆದ ಡಿಸೆಂಬರ್ 9 ರಂದು ವಿವಾಹವಾದ ವಿಕ್ಕಿಕೌಶಲ್ ಹಾಗೂ ಕತ್ರಿನಾ ಕೈಫ್ ತಮ್ಮ ಎಂಗೇಜಮೆಂಟ್ ಹಾಗೂ ಮದುವೆ ವಿಚಾರವನ್ನು ಸಾಕಷ್ಟು ಗುಟ್ಟಾಗಿ ಇಟ್ಟಿದ್ದರು. ಅದ್ದೂರಿಯಾಗಿ ಮದುವೆಯಾದ ಈ ಜೋಡಿ ಅಧಿಕೃತವಾಗಿ ವಿವಾಹ ವಿಚಾರವನ್ನು ಘೋಷಿಸುವ ತನಕ ಯಾರಿಗೂ ಈ ವಿಚಾರವೇ ಗೊತ್ತಿರಲಿಲ್ಲ. ಹೀಗೆ ಗುಟ್ಟಾಗಿ ಮದುವೆಯಾದ ಈ ಜೋಡಿ ಹನಿಮೂನ್ ಗೆ ಹಾರಿತ್ತು ಎಂಬ ಸಂಗತಿಯನ್ನು ಯಾರಿಗೂ ಹೇಳಿಕೊಂಡಿರಲಿಲ್ಲ. ಹೀಗೆ ಚುಪ್ ಚುಪ್ ಕೆ ಹನಿಮೂನ್ ಮುಗಿಸಿ ಬಂದ ಕತ್ರಿನಾ ಕೈಫ್ ಹಾಗೂ ವಿಕ್ಕಿ ಗುಟ್ಟು ಈಗ ರಟ್ಟಾಗಿದೆ.
ಸ್ವತಃ ಕತ್ರಿನಾಕೈಫ್ ತಮ್ಮ ಹನಿಮೂನ್ ಪೋಟೋವನ್ನು ಶೇರ್ ಮಾಡಿಕೊಂಡಿದ್ದು, # myhappyplace ಎಂದು ಪೋಸ್ಟ್ ಮಾಡಿದ್ದಲ್ಲದೇ ಹಾರ್ಟ್ ಇಮೋಜಿ ಕೂಡ ಹಾಕಿದ್ದಾರೆ. ಹಸಿರು ಹಾಗೂ ಕ್ರೀಂ ಬಣ್ಣದ ಬಿಕನಿಯಲ್ಲಿ ಕತ್ರಿನಾ ಸೌಂದರ್ಯ ಅನಾವರಣಗೊಂಡಿದ್ದು ಅಭಿಮಾನಿಗಳು ಸಂಭ್ರಮದಿಂದ ಲೈಕ್ಸ್ ಒತ್ತಿದ್ದಾರೆ.
ಆದರೆ ಕತ್ರಿನಾ ಶೇರ್ ಮಾಡಿದ ಪೋಟೋಸ್ ಮಾಲ್ಡೀವ್ಸ್ ದಾಗಿರೋದರಿಂದ ಹನಿಮೂನ್ ಪೋಟೋ ಎಂದು ಎಲ್ಲರೂ ಕಮೆಂಟ್ ಮಾಡಿದ್ದಾರೆ. ಆದರೆ ಈ ಪೋಟೋದಲ್ಲಿ ವಿಕ್ಕಿ ಕೌಶಲ್ ಮಿಸ್ಸಾಗಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಪತಿಯಿಲ್ಲದೇ ಹನಿಮೂನ್ ಗೆ ಹೋದ್ರಾ ಎಂದು ಕತ್ರಿನಾ ಕೈಫ್ ಕಾಲೆಳೆದಿದ್ದಾರೆ. ಅಲ್ಲದೇ ಕತ್ರಿನಾರ ಈ ಸುಂದರವಾದ ಪೋಟೋಗೆ ಕ್ವೀನ್ ಆಫ್ ಮಿಲಿಯನ್ ಹಾರ್ಟ್ಸ್ ಹಾಗೂ ಕ್ವೀನ್ ಈಸ್ ಬ್ಯಾಕ್ ಎಂಬ ಕಮೆಂಟ್ ಕೂಡ ಬಂದಿದೆ. ಸದ್ಯ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಮದುವೆ ಬಳಿಕ ತಮ್ಮ ಶೂಟಿಂಗ್ ಗೆ ಮರಳಿದ್ದು ಬ್ಯುಸಿಯಾಗಿದ್ದಾರೆ. ಕತ್ರಿನಾ ಶ್ರೀರಾಮ್ ರಾಘವನ್ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತ ವಿಕ್ಕಿ ಕೌಶಲ್ ಕೂಡ ಸಾರಾ ಅಲಿಖಾನ್ ಜೊತೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಇದನ್ನೂ ಓದಿ : ಮತ್ತೊಂದು ಐಟೆಂ ಸಾಂಗ್ನಲ್ಲಿ ಕಾಣಿಸಿಕೊಳ್ಳಲು ಮುಂದಾದ ನಟಿ ಸಮಂತಾ
ಇದನ್ನೂ ಓದಿ : ಯಶಸ್ಸಿನ ಗುಂಗಲ್ಲಿ ಪ್ಯಾಂಟ್ ಧರಿಸೋದನ್ನೇ ಮರೆತ್ರಾ ರಶ್ಮಿಕಾ : ಟ್ರೋಲ್ ಗೆ ಗುರಿಯಾದ ಪುಷ್ಪ ಶ್ರೀವಲ್ಲಿ
(Katrina kaif to Honeymoon alone ! What the viral photo says)