non ISI helmet : ಬೆಂಗಳೂರಿನಲ್ಲಿ ಇನ್ಮೇಲೆ ಈ ರೀತಿಯ ಹೆಲ್ಮೆಟ್​ ಧರಿಸಿದರೆ ಬೀಳುತ್ತೆ ದಂಡ

ಬೆಂಗಳೂರು : non ISI helmet : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದ್ವಿಚಕ್ರ ವಾಹನಗಳ ಮೇಲೆ ಸವಾರಿ ಮಾಡುವವರಿಗೆ ನಗರ ಸಂಚಾರ ಆಯುಕ್ತರು ಹೊಸ ಆದೇಶವನ್ನು ಹೊರಡಿಸಿದ್ದಾರೆ. ಬೈಕ್​ ಸವಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಪೂರ್ತಿಯಾಗಿ ಮುಖವನ್ನು ಮುಚ್ಚದ ಹಾಫ್​ ಹೆಲ್ಮೆಟ್​ ಹಾಗೂ ಐಎಸ್​ಐ ಮಾರ್ಕ್​ಗಳನ್ನು ಹೊಂದಿರದ ಹೆಲ್ಮೆಟ್​ಗಳನ್ನು ಬಳಕೆ ಮಾಡುವುದಕ್ಕೆ ನಿಷೇಧ ಹೇರಿದ್ದಾರೆ.

ಮೊದಲಿಗೆ 15 ದಿನಗಳ ಐಎಸ್​ಐ ಚಿಹ್ನೆಯನ್ನು ಹೊಂದಿರದ ಹೆಲ್ಮೆಟ್​ಗಳನ್ನು ಧರಿಸದಂತೆ ಜನರಿಗೆ ಸಂಚಾರಿ ಠಾಣೆ ಪೊಲೀಸರು ಎಚ್ಚರಿಕೆ ನೀಡಲಿದ್ದಾರೆ. ಬಳಿಕ ನಗರದ ಸಂಚಾರ ಆಯುಕ್ತರ ಆದೇಶದಂತೆ ಐಎಸ್​ಐ ಮಾರ್ಕ್​ ಇಲ್ಲದ ಹಾಗೂ ಹಾಫ್​ ಹೆಲ್ಮೆಟ್​ಗಳನ್ನು ಧರಿಸುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಿದ್ದಾರೆ.


ರಸ್ತೆ ಅಪಘಾತಗಳಲ್ಲಿ ಹಾಫ್​ ಹೆಲ್ಮೆಟ್​ ಹಾಗೂ ಕಳಪೆ ಗುಣಮಟ್ಟದ ಹೆಲ್ಮೆಟ್​ ಧರಿಸುವವರಿಗೆ ಹೆಚ್ಚಾಗಿ ಗಂಭೀರ ಗಾಯಗಳು ಉಂಟಾಗುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಒಂದು ವೇಳೆ ಸಂಚಾರಿ ಪೊಲೀಸ್​ ಠಾಣೆಯಗಳ ಈ ನಿಯಮವನ್ನು ಮೀರಿದರೆ ದ್ವಿಚಕ್ರ ವಾಹನ ಸವಾರರಿಗೆ 500 ರೂಪಾಯಿ ದಂಡ ಬೀಳಲಿದೆ.


ಹಾಫ್​ ಹೆಲ್ಮೆಟ್​ಗಳಿಂದ ತಲೆಗೆ ಯಾವುದೇ ರಕ್ಷಣೆ ಸಿಗುವುದಿಲ್ಲ. ಇದರಿಂದಾಗಿ ಬೆಂಗಳೂರಿನಲ್ಲಿ ದ್ವಿಚಕ್ರ ವಾಹನಗಳಿಂದ ಉಂಟಾದ ಅಪಘಾತಗಳಲ್ಲಿ ಸಾಕಷ್ಟು ಮಂದಿ ಸವಾರರು ಜೀವ ತೆತ್ತಿದ್ದಾರೆ. ಈ ಅವಘಡಗಳು ಮತ್ತೆ ಮರುಕಳಿಸಬಾರದು. ದ್ವಿಚಕ್ರ ವಾಹನಗಳು ಅಪಘಾತಕ್ಕೀಡಾದರೂ ಸಹ ಸವಾರರ ತಲೆಗೆ ಯಾವುದೇ ರೀತಿಯ ಗಂಭೀರ ಹಾನಿ ಉಂಟಾಗಬಾರದು. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ರಾಜಧಾನಿ ಸಂಚಾರಿ ಪೊಲೀಸ್​ ಇಲಾಖೆಯು ಹಾಫ್​ ಹೆಲ್ಮೆಟ್​, ಐಎಸ್​ಐ ಗುರುತು ಹೊಂದಿರದ ಹೆಲ್ಮೆಟ್​ಗಳಿಗೆ ನಿಷೇಧ ಹೇರಿ ಆದೇಶ ಹೊರಡಿಸಿದೆ.

wearing non isi helmet in bengaluru get ready to pay fine

ಇದನ್ನು ಓದಿ : Vamika’s pics : ವೈರಲ್​ ಆಗುತ್ತಿರುವ ವಮಿಕಾಳ ಫೋಟೋ ಬಗ್ಗೆ ಸ್ಪಷ್ಟನೆ ನೀಡಿದ ವಿರುಷ್ಕಾ ದಂಪತಿ

ಇದನ್ನೂ ಓದಿ : Rohit Sharma Slim : ವೆಸ್ಟ್ ಇಂಡೀಸ್ ಸರಣಿಗೆ ಮುನ್ನ ಸ್ಲಿಮ್‌ ಆಂಡ್‌ ಫಿಟ್‌ ಆದ ರೋಹಿತ್ ಶರ್ಮಾ

Comments are closed.