Yuvraj Singh : ಟೀಂ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್ ಹಾಗೂ ಅವರ ಪತ್ನಿ ಹೇಜಲ್ ಕೀಚ್ ತಮ್ಮ ಮೊದಲ ಮಗುವನ್ನು ಬರಮಾಡಿಕೊಂಡಿದ್ದಾರೆ. ತಮಗೆ ಗಂಡು ಮಗು ಜನಿಸಿರುವ ಬಗ್ಗೆ ಯುವರಾಜ್ ಸಿಂಗ್ ದಂಪತಿ ಸೋಶೀಯಲ್ ಮೀಡಿಯಾ ಮೂಲಕ ಮಾಹಿತಿಯನ್ನು ಹಂಚಿಕೊಂಡಿವೆ.
ನಮ್ಮೆಲ್ಲ ಅಭಿಮಾನಿಗಳು,ಕುಟುಂಬ ಹಾಗೂ ಸ್ನೇಹಿತರೇ ದೇವರು ನಮಗೆ ಗಂಡು ಮಗುವನ್ನು ಕರುಣಿಸಿದ್ದಾನೆ ಎಂಬ ವಿಚಾರವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನಾವು ಅತ್ಯಂತ ಸಂತೋಷಪಡುತ್ತಿದ್ದೇವೆ. ಇಂತಹದ್ದೊಂದು ಆಶೀರ್ವಾದ ನೀಡಿದ್ದಕ್ಕಾಗಿ ದೇವರಿಗೂ ಧನ್ಯವಾದ ತಿಳಿಸುತ್ತಿದ್ದೇವೆ. ನಾವು ಪುಟ್ಟ ಜೀವವನ್ನು ಈ ಜಗತ್ತಿಗೆ ಸ್ವಾಗತಿಸಿದ್ದೇವೆ. ಈ ಸಂದರ್ಭದಲ್ಲಿ ನೀವೆಲ್ಲ ನಮ್ಮ ಖಾಸಗಿತನಕ್ಕೆ ಗೌರವ ಕೊಡಬೇಕೆಂದು ನಾವು ಬಯಸುತ್ತಿದ್ದೇವೆ ಎಂದು ಟ್ವಿಟರ್ ಹಾಗೂ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
ಯುವರಾಜ್ ಸಿಂಗ್ ಹಾಗೂ ಹೇಜಲ್ ಕೀಚ್ 2016ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ಯುವರಾಜ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನದ ಏಕದಿನ ಪಂದ್ಯಕ್ಕೆ ಅಕ್ಟೋಬರ್ 2000ನೇ ಇಸ್ವಿಯಲ್ಲಿ ಪಾದಾರ್ಪಣೆ ಮಾಡಿದ್ದರು. ಮೊದಲ ಬಾರಿಗೆ ಕೀನ್ಯಾ ವಿರುದ್ಧ ಸೆಣೆಸಿದ್ದ ಯುವರಾಜ್ ಸಿಂಗ್ ಬಳಿಕ 304 ಏಕದಿನ ಪಂದ್ಯ, 40 ಟೆಸ್ಟ್ ಪಂದ್ಯ ಹಾಗೂ 58 ಅಂತಾರಾಷ್ಟ್ರೀಯ ಟಿ 20 ಪಂದ್ಯಗಳಲ್ಲಿ ಮಿಂಚಿದ್ದಾರೆ. 2007ರಲ್ಲಿ ಟೀಂ ಇಂಡಿಯಾ ಅಂತಾರಾಷ್ಟ್ರೀಯ ಟಿ 20 ಟ್ರೋಫಿ ಗೆಲ್ಲುವಾಗಲೂ ಇವರು ತಂಡದ ಸದಸ್ಯರಾಗಿದ್ದರು. ಹಾಗೂ 2011ರಲ್ಲಿ ದೇಶವು ವಿಶ್ವಕಪ್ ಗೆಲ್ಲುವಲ್ಲಿಯೂ ಯುವರಾಜ್ ಪ್ರಮುಖ ಪಾತ್ರ ವಹಿಸಿದ್ದಾರೆ.
ಬರೋಬ್ಬರಿ 19 ವರ್ಷಗಳ ಕಾಲ ಟೀಂ ಇಂಡಿಯಾ ಪರ ಆಡಿದ್ದ ಯುವರಾಜ್ ಸಿಂಗ್ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ಗೆ 2019ರ ಜೂನ್ 10ರಂದು ನಿವೃತ್ತಿ ಘೋಷಿಸಿದ್ದಾರೆ.
‘We are elated’: Yuvraj Singh, Hazel Keech welcome their first child
ಇದನ್ನು ಓದಿ : Swami Vivekananda Jayanti controversy : ಬಾರಕೂರಲ್ಲಿ ವಿವೇಕಾನಂದ ಜಯಂತಿ ಆಚರಣೆಗೆ ಉಪನ್ಯಾಸಕಿ ವಿರೋಧ : ಪೊಲೀಸರಿಗೆ ದೂರು
ಇದನ್ನೂ ಓದಿ : relaxation in Karnataka : ಮೂರನೇ ಅಲೆಯಲ್ಲಿ ಜನರಿಗೆ ಕೊಂಚ ರಿಲ್ಯಾಕ್ಸ್: ಮುಂದಿನ ವಾರದಿಂದ ರದ್ದಾಗಲಿದ್ಯಾ ಟಫ್ ರೂಲ್ಸ್ ?