ಸೋಮವಾರ, ಏಪ್ರಿಲ್ 28, 2025
HomeSportsCricketJason Holder IPL 2022 ಆರ್‌ಸಿಬಿ ತಂಡಕ್ಕೆ ಜೇಸನ್ ಹೋಲ್ಡರ್ ನಾಯಕ

Jason Holder IPL 2022 ಆರ್‌ಸಿಬಿ ತಂಡಕ್ಕೆ ಜೇಸನ್ ಹೋಲ್ಡರ್ ನಾಯಕ

- Advertisement -

ಕಳೆದ ಋತುವಿನ ಮುಕ್ತಾಯದ ನಂತರ ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ಹಿನ್ನೆಲೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅವರ ಉತ್ತರಾಧಿಕಾರಿಯನ್ನು ಇನ್ನೂ ಘೋಷಿಸಿಲ್ಲ. ಮುಂದಿನ ಐಪಿಎಲ್‌ನಲ್ಲಿ RCB ಗೆ ಜೇಸನ್ ಹೋಲ್ಡರ್ (Jason Holder IPL 2022 ) ನಾಯಕನಾಗುವ ಸಾಧ್ಯತೆಯಿದೆ.

ಶ್ರೇಯಸ್ ಅಯ್ಯರ್ ಶಿಖರ್ ಧವನ್ ಅವರಂತಹ ಆಟಗಾರರ ಹರಾಜಿನ ಹೊರತಾಗಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ವೆಸ್ಟ್ ಇಂಡೀಸ್‌ನಿಂದ ಈ ಆಟಗಾರನನ್ನು ಖರೀದಿಸಲಿದೆ ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವೆಸ್ಟ್ ಇಂಡೀಸ್ ಮೂಲದ ಜೇಸನ್ ಹೋಲ್ಡರ್ ಅವರನ್ನು ನಾಯಕನ ಸ್ಥಾನಕ್ಕೆ ಖರೀದಿಸಿದರೆ ಉತ್ತಮವಾಗಲಿದೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

ಈ ಹಿಂದೆ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಜೇಸನ್ ಹೋಲ್ಡರ್, ಬೆಂಗಳೂರು ತಂಡವನ್ನು ಆಲ್ ರೌಂಡರ್ ಆಗಿ ಮುನ್ನಡೆಸುವುದು ಉತ್ತಮ ಆಯ್ಕೆಯಾಗಿದೆ ಎಂದಿದ್ದಾರೆ. ನಾಯಕ ವಿರಾಟ್ ಕೊಹ್ಲಿ (15 ಕೋಟಿ ರೂ.), ಗ್ಲೆನ್ ಮ್ಯಾಕ್ಸ್‌ವೆಲ್ (11 ಕೋಟಿ ರೂ.) ಮತ್ತು ಮೊಹಮ್ಮದ್ ಸಿರಾಜ್ (7 ಕೋಟಿ ರೂ.) ಸೇರಿದಂತೆ 3 ಆಟಗಾರರನ್ನು ಮಾತ್ರ ಆರ್‌ಸಿಬಿ ಉಳಿಸಿಕೊಂಡಿದೆ.

ಗ್ಲೇನ್‌ ಮ್ಯಾಕ್ಸ್‌ವೆಲ್‌ ಬಿಗ್ ಬ್ಯಾಷ್ ಲೀಗ್‌ನಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ನಾಯಕನಾಗಿ ಅವರ ಯಶಸ್ಸ ಕಂಡಿದ್ದಾರೆ. ಆದರೂ ಅವರನ್ನು ನಾಯಕತ್ವಕ್ಕೆ ಆರ್‌ಸಿಬಿ ಆಡಳಿತ ಮಂಡಳಿ ಪರಿಗಣಿಸುವುದು ಕೊಂಚ ಕಷ್ಟವೇ ಎನ್ನಲಾಗುತ್ತಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹೊರತುಪಡಿಸಿ, ಎರಡು ಬಾರಿಯ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ಇನ್ನೂ ತಮ್ಮ ನಾಯಕರನ್ನು ಘೋಷಿಸಿಲ್ಲ.

ಮೆಗಾ ಹರಾಜಿನಲ್ಲಿ ಒಟ್ಟು 1214 ಆಟಗಾರರು ನೋಂದಾಯಿಸಿಕೊಂಡಿದ್ದಾರೆ; ಜನವರಿ 21 ರಂದು ಅಂತಿಮ ದಿನಾಂಕವನ್ನು ನಿಗದಿಪಡಿಸಲಾಗಿದೆ. ಪಟ್ಟಿಯು 270 ಕ್ಯಾಪ್ಡ್ ಆಟಗಾರರು, 903 ಅನ್‌ಕ್ಯಾಪ್ಡ್ ಮತ್ತು 41 ಅಸೋಸಿಯೇಟ್ ರಾಷ್ಟ್ರ ಆಟಗಾರರನ್ನು ಒಳಗೊಂಡಿದೆ. 896 ಭಾರತೀಯ ಆಟಗಾರರನ್ನು ಹೊರತುಪಡಿಸಿ, ಒಟ್ಟು 318 ವಿದೇಶಿ ಆಟಗಾರರು ಹರಾಜಿನಲ್ಲಿ ನೋಂದಾಯಿಸಿಕೊಂಡಿದ್ದಾರೆ.

ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ಹರಾಜು ಪಟ್ಟಿಯಲ್ಲಿ ಹೆಚ್ಚಿನ ಸಂಖ್ಯೆಯ ಆಟಗಾರರನ್ನು ಹೊಂದಿದೆ. ಆಸ್ಟ್ರೇಲಿಯಾದ ಒಟ್ಟು 59 ಆಟಗಾರರು, ದಕ್ಷಿಣ ಆಫ್ರಿಕಾದ 48 ಆಟಗಾರರು ಮತ್ತು ವೆಸ್ಟ್ ಇಂಡೀಸ್‌ನ 41 ಆಟಗಾರರು ಇದ್ದಾರೆ. ಈ ಮೂವರ ಹೊರತಾಗಿ ಶ್ರೀಲಂಕಾ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್‌ನ ಕ್ರಮವಾಗಿ 36, 30 ಮತ್ತು 29 ಆಟಗಾರರಿದ್ದಾರೆ. ಬೆನ್ ಸ್ಟೋಕ್ಸ್, ಕ್ರಿಸ್ ಗೇಲ್, ಜೋಫ್ರಾ ಆರ್ಚರ್, ಮಿಚೆಲ್ ಸ್ಟಾರ್ಕ್, ಕ್ರಿಸ್ ವೋಕ್ಸ್ ಮತ್ತು ಸ್ಯಾಮ್ ಕರ್ರನ್ ಅವರಂತಹವರು ವೈಯಕ್ತಿಕ ಸಮಸ್ಯೆಗಳಿಂದ IPL 2022 ರಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.

ಆಟಗಾರರ ವೇತನ ಶ್ರೇಣಿಯ ದೃಷ್ಟಿಕೋನದಿಂದ, ಮೂಲ ವೇತನವನ್ನು2 ಕೋಟಿ, 1.5 ಕೋಟಿ, 1 ಕೋಟಿ , 50 ಲಕ್ಷ ಮತ್ತು20 ಲಕ್ಷ ಮೂಲ ಬೆಲೆಯನ್ನು ನಿಗದಿ ಪಡಿಸಲಾಗಿದೆ. ಅತ್ಯಧಿಕ ಮೂಲ ಬೆಲೆಯಲ್ಲಿ17 ಭಾರತೀಯರು ಮತ್ತು 32 ಸಾಗರೋತ್ತರ ಸೇರಿದಂತೆ ಒಟ್ಟು 49 ಆಟಗಾರರು ಇದ್ದಾರೆ. ಅಲ್ಲದೇ 1.5 ಕೋಟಿ ರೂಪಾಯಿ ಮೂಲ ಬೆಲೆ ಘೋಷಣೆ ಮಾಡಿರುವ ಆಟಗಾರರ ಪೈಕಿ 3 ಭಾರತೀಯರು ಮತ್ತು 17 ವಿದೇಶಿ ಆಟಗಾರರನ್ನು ಹೊಂದಿದೆ. ಇನ್ನು1ಕೋಟಿ ಮೂಲ ಬೆಲೆಯಲ್ಲಿ ಒಟ್ಟು 10 ಭಾರತೀಯರು ಮತ್ತು 22 ವಿದೇಶಿ ಆಟಗಾರರು ಇದ್ದಾರೆ.

ಇದನ್ನೂ ಓದಿ : ವೆಸ್ಟ್ ಇಂಡೀಸ್ ಸರಣಿಗೆ ಮುನ್ನ ಸ್ಲಿಮ್‌ ಆಂಡ್‌ ಫಿಟ್‌ ಆದ ರೋಹಿತ್ ಶರ್ಮಾ

ಇದನ್ನೂ ಓದಿ : ವೆಸ್ಟ್‌ ಇಂಡಿಸ್‌ ಸರಣಿಗೆ ಟೀಂ ಇಂಡಿಯಾ ಪ್ರಕಟ, ರವಿ ಬಿಷ್ಣೋಯ್, ಕುಲದೀಪ್ ಯಾದವ್ ವಾಪಾಸ್‌

( Jason Holder captain for RCB in IPL 2022)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular