tumkur farmer gets new vehicle :ಮಹೀಂದ್ರಾ ಶೋರೂಂಗೆ ಹೊಸ ಗೂಡ್ಸ್ ವಾಹನ ಖರೀದಿಗೆಂದು ತೆರಳಿದ್ದ ತುಮಕೂರಿನ ರಾಮನಪಾಳ್ಯದ ರೈತನ ಮನೆಗೆ ಮಹೀಂದ್ರಾ ಕಂಪನಿಯು ಹೊಸ ಗೂಡ್ಸ್ ವಾಹನವನ್ನು ಕಳುಹಿಸಿಕೊಟ್ಟಿದೆ. ನಿನ್ನೆ ರೈತ ಕೆಂಪೇಗೌಡ ನಿವಾಸಕ್ಕೆ ಗೂಡ್ಸ್ ವಾಹನವನ್ನು ತಲುಪಿಸಿದ ಮಹೀಂದ್ರಾ ಈ ಬಗ್ಗೆ ಟ್ವಿಟರ್ನಲ್ಲಿ ಮಾಹಿತಿ ನೀಡಿದೆ.

ಜನವರಿ 21ರಂದು ವಾಹನ ಖರೀದಿಗೆ ಆಗಮಿಸಿದ್ದ ರೈತ ಕೆಂಪೇಗೌಡ ಹಾಗೂ ಅವರ ಸಿಬ್ಬಂದಿಗೆ ಮಹೀಂದ್ರಾ ಶೋರೂಂನಲ್ಲಿ ಆದ ಅನುಭವದ ಬಗ್ಗೆ ನಾವು ಕ್ಷಮೆಯಾಚಿಸುತ್ತಿದ್ದೇವೆ.ನಾವು ನೀಡಿದ ಭರವಸೆಯಂತೆಯೆ ಈ ಘಟನೆ ಸಂಬಂಧ ಸೂಕ್ತ ಕ್ರಮಗಳನ್ನು ಕೈಗೊಂಡಿದ್ದೇವೆ. ಹಾಗೂ ಈ ಸಮಸ್ಯೆಯನ್ನು ಪರಿಹರಿಸಿದ್ದೇವೆ. ಕೆಂಪೇಗೌಡರಿಗೆ ಮಹೀಂದ್ರಾ ಕುಟುಂಬಕ್ಕೆ ಸ್ವಾಗತ ಎಂದು ಮಹೀಂದ್ರಾ ಟ್ವೀಟ್ ಮಾಡಿದೆ.
And let me add my welcome to Mr. Kempegowda…🙏🏽 https://t.co/BuKnTNov42
— anand mahindra (@anandmahindra) January 28, 2022
ಈ ಟ್ವೀಟ್ನ್ನು ಶೇರ್ ಮಾಡಿರುವ ಆನಂದ್ ಮಹೀಂದ್ರಾ ನನ್ನ ಕಡೆಯಿಂದಲೂ ಕೆಂಪೇಗೌಡರಿಗೆ ಸ್ವಾಗತ ಎಂದು ಬರೆದುಕೊಂಡಿದ್ದಾರೆ.
ತುಮಕೂರಿನ ರಾಮನಪಾಳ್ಯದಲ್ಲಿ ಬೊಲೆರೋ ಗೂಡ್ಸ್ ವಾಹನ ಖರೀದಿ ಮಾಡಲೆಂದು ಯುವರೈತರಾದ ಹೆಬ್ಬೂರು ಹೋಬಳಿಯ ರಾಮನಪಾಳ್ಯ ನಿವಾಸಿ ಕೆಂಪೇಗೌಡರಿಗೆ ಮಹೀಂದ್ರಾ ಶೋರೂಂನ ಸಿಬ್ಬಂದಿ ಅವಮಾನ ಮಾಡಿದ್ದರು. ಹತ್ತು ರೂಪಾಯಿ ಹಣ ನೀಡುವ ಯೋಗ್ಯತೆ ಇಲ್ಲ ಎಂದು ಮಹೀಂದ್ರಾ ಸೇಲ್ಸ್ ಏಜೆಂಟ್ ಕೇಂಪೇಗೌಡರಿಗೆ ಅವಮಾನ ಮಾಡಿದ್ದರು. ಇದರಿಂದ ವಿಪರೀತ ಕೋಪಗೊಂಡಿದ್ದ ಕೆಂಪೇಗೌಡ ಕೇವಲ 1 ಗಂಟೆ ಅವಧಿಯಲ್ಲಿ ಹಣವನ್ನು ಹೊಂದಿಸಿದ್ದರು. ಆದರೂ ಕೂಡ ವಾಹನ ನೀಡಲು ನಿರಾಕರಿಸಿದ್ದ ಸೇಲ್ಸ್ ಏಜೆಂಟ್ ಮೂರ್ನಾಲ್ಕು ದಿನಗಳಲ್ಲಿ ನೀಡುತ್ತೇವೆ ಎಂದು ಬೇಜವಾಬ್ದಾರಿಯ ಮಾತುಗಳನ್ನಾಡಿದ್ದರು. ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಮಹೀಂದ್ರಾ ಕಂಪನಿಯ ವಿರುದ್ಧ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.
tumkur farmer gets new vehicle anand mahindra tweets and wishes him updates here
ಇದನ್ನು ಓದಿ : no night curfew : ಜನವರಿ 31ರಿಂದ ರಾಜ್ಯದಲ್ಲಿ ನೈಟ್ ಕರ್ಫ್ಯೂ ರದ್ದು : ಶಾಲೆಗಳು ಪುನಾರಂಭ