kidnap and kill teen for ransom : ಬಾಲಿವುಡ್​ ಸಿನಿಮಾದಿಂದ ಪ್ರೇರಣೆ ಪಡೆದು ಸ್ನೇಹಿತನನ್ನೇ ಕೊಂದ ಪಾಪಿಗಳು

kidnap and kill teen for ransom : 18 ವರ್ಷದ ಯುವಕನನ್ನು ಅಪಹರಿಸಿ ಕೊಲೆ ಮಾಡಿದ ಇಬ್ಬರು ಯುವಕರು 10 ಲಕ್ಷ ರೂಪಾಯಿಗಳಿಗೆ ಬೇಡಿಕೆ ಇಡಲು ಪ್ಲಾನ್​ ಮಾಡಿದ್ದ ಶಾಕಿಂಗ್​ ಘಟನೆಯು ಉತ್ತರ ದೆಹಲಿಯ ಬುರಾರಿಯಲ್ಲಿ ನಡೆದಿದೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಆರೋಪಿಗಳಿಬ್ಬರೂ 19 ವರ್ಷ ಪ್ರಾಯದವರು ಎಂದು ತಿಳಿದುಬಂದಿದೆ. ಬಾಲಿವುಡ್​ ಸಿನಿಮಾದಿಂದ ಪ್ರೇರಣೆ ಪಡೆದು ಇವರು ಈ ರೀತಿಯ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.


ಆರೋಪಿಗಳಲ್ಲಿ ಒಬ್ಬನಾದ ಗೋಪಾಲ್​​ ಶೋರೂಂನಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಈತ ಕೊಲೆಯಾದ ರೋಹನ್​ನ ಸ್ನೇಹಿತನಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಜನವರು 23ರ ಸಂಜೆ ರೋಹನ್​ನ್ನು ಹುಟ್ಟು ಹಬ್ಬಕ್ಕೆ ಕರೆದುಕೊಂಡು ಹೋಗುವ ನೆಪದಲ್ಲಿ ಆತನನ್ನು ಅಪಹರಿಸಲಾಗಿತ್ತು.


ರೋಹನ್​ನ ತಂದೆ ಮನೋಜ್​​ ಅದೇ ದಿನದಂದು ಪೊಲೀಸರಿಗೆ ಕರೆ ಮಾಡಿ ಪುತ್ರ ನಾಪತ್ತೆಯಾಗಿರುವ ಬಗ್ಗ ದೂರನ್ನು ದಾಖಲಿಸಿದ್ದರು.ದೂರು ನೀಡುವ ವೇಳೆಯಲ್ಲಿ ಮನೋಜ್​ ಪೊಲೀಸರಿಗೆ ನನ್ನ ಪುತ್ರ 18 ವರ್ಷದ ರೋಹನ್​ ಬರ್ತಡೇ ಪಾರ್ಟಿಗೆಂದು ಸ್ನೇಹಿತ ಗೋಪಾಲ್​ ಜೊತೆ ತೆರಳಿದವನು ವಾಪಸ್​ ಬಂದಿಲ್ಲ ಎಂದು ಹೇಳಿದ್ದರು.


ಈ ಸಂಬಂಧ ದೂರು ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ ಪೊಲೀಸರು ರೋಹನ್​ ಪತ್ತೆಗಾಗಿ ಬರೋಬ್ಬರಿ 200ಕ್ಕೂ ಅಧಿಕ ಸಿಸಿ ಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದ್ದರು. ರೋಹನ್​ ಸ್ನೇಹಿತ ಗೋಪಾಲ್​ನನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದರು. ಪೊಲೀಸರ ವಿಚಾರಣೆಯ ಸಮಯದಲ್ಲಿ ಗೋಪಾಲ್​ ತಾನು ಸ್ನೇಹಿತರ ಜೊತೆ ಸೇರಿ ರೋಹನ್​ನ್ನು ಅಪಹರಿಸಿ ಬಳಿಕ ಕೊಲೆ ಮಾಡಿದ್ದೇವೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.
ಗೋಪಾಲ್​ ವಿಚಾರಣೆಯ ವೇಳೆ ಅಪರಾಧ ಕೃತ್ಯದಲ್ಲಿ ಭಾಗಿಯಾದ ಇನ್ನಿಬ್ಬರ ಹೆಸರನ್ನೂ ಬಾಯ್ಬಿಟ್ಟಿದ್ದಾನೆ. ಗೋಪಾಲ್​ ಹೇಳಿಕೆಯನ್ನು ಆಧರಿಸಿ ಪೊಲೀಸರು 19 ವರ್ಷದ ಸುಶೀಲ್​ನನ್ನು ಬಂಧಿಸಿದ್ದಾರೆ. ತಲೆ ಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

ಗೋಪಾಲ್​ ಹೇಳಿರುವಂತೆ ಅವರು ರೋಹನ್​ನ್ನು ಒಂದು ರೂಮಿಗೆ ಕರೆದುಕೊಂಡು ಹೋಗಿ ಬರ್ತ ಡೇ ಪಾರ್ಟಿ ಮಾಡಿದ್ದರು. ಬಳಿಕ ಆತನನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದರು. ಇದಾದ ನಂತರ ಆತನ ಮೃತದೇಹವನ್ನು ವಿಲೇವಾರಿ ಮಾಡುವ ಬಗ್ಗೆ ನಿರ್ಧರಿಸಿದ್ದಾರೆ. ಬಳಿಕ ಹಣಕ್ಕಾಗಿ ಬೇಡಿಕೆ ಇಡುವುದು ಅವರ ಪ್ಲಾನ್​ ಆಗಿತ್ತು ಎನ್ನಲಾಗಿದೆ.

Delhi: Youths, inspired by Bollywood movie, kidnap and kill teen for ransom

ಇದನ್ನು ಓದಿ : no night curfew : ಜನವರಿ 31ರಿಂದ ರಾಜ್ಯದಲ್ಲಿ ನೈಟ್​ ಕರ್ಫ್ಯೂ ರದ್ದು : ಶಾಲೆಗಳು ಪುನಾರಂಭ

ಇದನ್ನೂ ಓದಿ : bs yediyurappa grand daughter soundarya : ಸೌಂದರ್ಯ ಆತ್ಮಹತ್ಯೆ ಪ್ರಕರಣ: ನಿಜಕ್ಕೂ ಅಪಾರ್ಟ್​ಮೆಂಟ್​ನಲ್ಲಿ ನಡೆದದ್ದೇನು..?ಇಲ್ಲಿದೆ ಡಿಟೈಲ್ಸ್​

Comments are closed.