ಕಳೆದ ತಿಂಗಳು, ಜನವರಿಯಲ್ಲಿಒಟ್ಟು 11 ಸ್ಮಾರ್ಟ್ಫೋನ್ಗಳು ಬಿಡುಗಡೆ ಆಗಿದ್ದವು. ಈ ತಿಂಗಳು, ಸ್ಯಾಮ್ಸಂಗ್,ಒಪ್ಪೋ ರಿಯಲ್ ಮಿ, ರೆಡ್ಮಿ, ನುಬಿಯ, ಲೆನೋವೋ ( Samsung, Oppo, Realme, Redmi, Nubia, Lenovo) ಮತ್ತು ಇತರ ಬ್ರಾಂಡ್ಗಳಿಂದ ಒಟ್ಟು 16 ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಆಗುವುದನ್ನು ನಿರೀಕ್ಷಿಸಲಾಗಿದೆ. ಈ ತಿಂಗಳು ಬಿಡುಗಡೆಯಾಗಲಿರುವ ಬಹು ನಿರೀಕ್ಷಿತ ಫೋನ್ಗಳಲ್ಲಿ ಒಂದು ಪ್ರಮುಖ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್22 ಆಗಿರುತ್ತದೆ. ಚೈನೀಸ್ ಸ್ಪ್ರಿಂಗ್ ಫೆಸ್ಟಿವಲ್ ನಂತರ ಲಾಂಚ್ ಮಾಡಲು ಹಲವಾರು ಗೇಮಿಂಗ್ ಫೋನ್ಗಳು ಕೂಡ ಇವೆ. ಫೆಬ್ರವರಿ 2022 ರಲ್ಲಿ ಮುಂಬರುವ ಸ್ಮಾರ್ಟ್ಫೋನ್ಗಳ (Upcoming Smartphones February 2022) ಸಂಪೂರ್ಣ ಪಟ್ಟಿಯನ್ನು ನೋಡೋಣ.
ಒಪ್ಪೋ ರೇನೋ 7 (Oppo Reno 7)
ಚೀನಾದಲ್ಲಿ ಕಳೆದ ವರ್ಷ ಬಿಡುಗಡೆ ಆದ ಒಪ್ಪೋ 7 ಸರಣಿಯು ಭಾರತದಲ್ಲಿ ಫೆಬ್ರವರಿ 4ರಂದು ಲಾಂಚ್ ಆಗಲಿದೆ. ಇದು ಚೀನಾ ಮಾಡೆಲ್ ಗಿಂತ ಭಿನ್ನವಾಗಿ ಇರಲಿದೆ. ಇದರಲ್ಲಿ ಒಪ್ಪೋ ರೇನೋ 7 ಹಾಗೂ ಒಪ್ಪೋ ರೇನೋ 7 ಪ್ರೊ 5ಜಿ ಹೀಗೆ ಎರಡು ವೇರಿಯಂಟ್ ಇರಲಿದೆ.
ಇದು 6.43-ಇಂಚಿನ ಫುಲ್ ಎಚ್ಡಿ+ ಅಮೋಲ್ಡ್ ಡಿಸ್ಪ್ಲೇ ಜೊತೆಗೆ 90 ಹರ್ಟ್ಸ್ ರಿಫ್ರೆಶ್ ದರದೊಂದಿಗೆ ಬರುತ್ತದೆ. ಇದು 48ಎಂಪಿ+ 2ಎಂಪಿ + 2ಎಂಪಿ ಟ್ರಿಪಲ್ ರಿಯರ್ ಕ್ಯಾಮೆರಾ ಸಿಸ್ಟಮ್ ಮತ್ತು 16ಎಂಪಿ ಸೆಲ್ಫಿ ಸ್ನ್ಯಾಪರ್ ಅನ್ನು ಹೊಂದುವ ನಿರೀಕ್ಷೆಯಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 900 SoC ಯಿಂದ 8ಜಿಬಿ ರಾಮ್ ಮತ್ತು 128ಜಿಬಿ ಸ್ಟೋರೇಜ್ ಹೊಂದಿದೆ.ಇದು 33ವಾಟ್ ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 4,500ಎಂ ಎಎಚ್ ಬ್ಯಾಟರಿಯನ್ನು ಹೊಂದಿದೆ. ಅಂದಾಜು ಬೆಲೆ 29999.
ಇನ್ಫಿನಿಕ್ಸ್ ಝೀರೋ 5ಜಿ (Infinix Zero 5G)
ಇನ್ಫಿನಿಕ್ಸ್ ತನ್ನ ಝೀರೋ 5ಜಿ ಸ್ಮಾರ್ಟ್ಫೋನ್ ಅನ್ನು ಫೆಬ್ರವರಿ 8 ರಂದು ಭಾರತದಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ. ಸ್ಮಾರ್ಟ್ಫೋನ್ ಡೈಮೆನ್ಸಿಟಿ 900 SoC ಅನ್ನು ಹೊಂದಿದೆ. ಮತ್ತು ವೇಗವಾದ ( LPDDR5 ) ರಾಮ್ ಮತ್ತು ಯುಎಫೆಸ್ 3.1 ಇಂಟರ್ನಲ್ ಸ್ಟೋರೇಜ್ ಹೊಂದಿರುತ್ತದೆ. ಸ್ಮಾರ್ಟ್ಫೋನ್ 6.67-ಇಂಚಿನ ಫುಲ್ ಎಚ್ ಡಿ+ ಅಮೋಲ್ಡ್ ಸ್ಕ್ರೀನ್ ಜೊತೆಗೆ 120ಹರ್ಟ್ಸ್ ರಿಫ್ರೆಶ್ ರೇಟ್ನೊಂದಿಗೆ ಬರಲಿದೆ ಎಂದು ವದಂತಿಗಳಿವೆ. ಅಂದಾಜು ಬೆಲೆ 20,000.
ರೆಡ್ಮಿ ನೋಟ್ 11 ಹಾಗೂ ರೆಡ್ಮಿ ನೋಟ್ 11ಎಸ್ (Redmi Note 11 and Note 11S)
ಶಿಯೋಮಿ ರೆಡ್ಮಿ ಭಾರತದಲ್ಲಿ ಫೆಬ್ರವರಿ 9 ರಂದು ತನ್ನ ನೋಟ್ 11 ಸರಣಿಯನ್ನು ಲಾಂಚ್ ಮಾಡಲಿದೆ. ಭಾರತೀಯ ಮಾರುಕಟ್ಟೆಯಲ್ಲಿ ನೋಟ್ 11 ಮತ್ತು ನೋಟ್ 11ಎಸ್ ಅನ್ನು ಪಡೆಯುವ ನಿರೀಕ್ಷೆಯಿದೆ.
ಸದ್ಯಕ್ಕೆ, ಫೋನ್ಗಳ ಯಾವುದೇ ಸ್ಪೆಸಿಫಿಕೇಶನ್ ಲೀಕ್ ಆಗಿಲ್ಲ. ಆದರೆ ಈ ರೂಪಾಂತರಗಳು ಜಾಗತಿಕ ಮಾದರಿಗಳಂತೆಯೇ ಇರುತ್ತವೆ ಎಂದು ವದಂತಿಗಳು ಸೂಚಿಸುತ್ತವೆ.
ಲೀಕ್ ಅದ ಮಾಹಿತಿಗಳ ಪ್ರಕಾರ, ಈ ಸಿರೋಸ್ 6.43-ಇಂಚಿನ 90 ಹರ್ಟ್ಸ್ ಫುಲ್ ಎಚ್ಡಿ ಡಿಸ್ಪ್ಲೇಯನ್ನು ಹೊಂದಿರುವ ನಿರೀಕ್ಷೆಯಿದೆ. ನೋಟ್ 11 50ಎಂಪಿ + 8ಎಂಪಿ + 2ಎಂಪಿ + 2ಎಂಪಿ ಸೆಟಪ್ನೊಂದಿಗೆ ಕ್ವಾಡ್-ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿರುತ್ತದೆ,
ಆದರೆ ನೋಟ್ 11ಎಸ್ 108ಎಂಪಿ ಮುಖ್ಯ ಲೆನ್ಸ್ ಮತ್ತು ಅದೇ ಸೆನ್ಸರ್ ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಸರಣಿಯು 5,000 ಎಂಎ ಎಚ್ ಬ್ಯಾಟರಿಯನ್ನು ಹೊಂದಿರುತ್ತದೆ ಮತ್ತು 33ವಾಟ್ ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಬೆಂಬಲಿಸುತ್ತದೆ. ಅಂದಾಜು ಬೆಲೆ. 13,999 ಅಥವಾ ರೂ. 14,499.
ರಿಯಲ್ ಮಿ 9 ಪ್ರೊ ಸಿರೀಸ್ (Realme 9 Pro series)
ಯುರೋಪಿಯನ್ ಮತ್ತು ಭಾರತೀಯ ಮಾರುಕಟ್ಟೆಗಳಲ್ಲಿ ವೈಶಿಷ್ಟ್ಯ-ಪ್ಯಾಕ್ಡ್ ಬಜೆಟ್ ಫೋನ್ ಸರಣಿಯನ್ನು ಪ್ರಾರಂಭಿಸಲು ರಿಯಲ್ ಮಿ ತಯಾರಿ ನಡೆಸುತ್ತಿದೆ. ರಿಯಲ್ ಮಿ 9 ಪ್ರೊಮತ್ತು 9 ಪ್ರೊ+ ಯುರೋಪ್ನಲ್ಲಿ ಫೆಬ್ರವರಿ 15 ರಂದು ಪ್ರಾರಂಭವಾಗಲಿದೆ ಮತ್ತು ಫೆಬ್ರವರಿ 16 ರಂದು ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಈ ಫೋನ್ 120ಹರ್ಟ್ಸ್ ರಿಫ್ರೆಶ್ ದರದೊಂದಿಗೆ 6.59-ಇಂಚಿನ ಫುಲ್ ಎಚ್ಡಿ+ಅಮೋಲ್ಡ್ ಡಿಸ್ಪ್ಲೇ ಹೊಂದಿದೆ. ವೆನಿಲ್ಲಾ 9 ಪ್ರೊ ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿರುತ್ತದೆ. ಕ್ಯಾಮೆರಾಗಳಿಗೆ ಸಂಬಂಧಿಸಿದಂತೆ, 9 ಪ್ರೊ 64ಎಂಪಿ + 8ಎಂಪಿ+ 2ಎಮೋನ್ ಟ್ರಿಪಲ್ ರಿಯರ್ ಕ್ಯಾಮೆರಾ ವ್ಯವಸ್ಥ ಹೊಂದಿದೆ. ಆದರೆ 9 ಪ್ರೊ+ 50ಎಂಪಿ ಟ್ರಿಪಲ್ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿರುತ್ತದೆ. ಸರಣಿಯು 8ಜಿಬಿ ಯ ರಾಮ್ ಮತ್ತು 128ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿರುತ್ತದೆ. ಅಂದಾಜು ಬೆಲೆ 15,000.
ಮೋಟೋ ಎಡ್ಜ್ 30ಪ್ರೊ (Motorola Edge 30 Pro)
ಮೊಟೊರೋಲ ಭಾರತೀಯ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಮೊಟೊರೋಲ ಎಡ್ಜ್ 30 ಪ್ರೊ ಆಗಿ ಎಡ್ಜ್ ಎಕ್ಸ್30 ಅನ್ನು ತರಬಹುದು ಎಂದು ಹೊಸ ವರದಿಯು ಬಹಿರಂಗಪಡಿಸುತ್ತದೆ.
ಎಡ್ಜ್ 30 ಪ್ರೊ 144ಹರ್ಟ್ಸ್ ರಿಫ್ರೆಶ್ ದರದೊಂದಿಗೆ 6.7-ಇಂಚಿನ ಫುಲ್ ಎಚ್ಡಿ ಅಮೋಲ್ಡ್ ಪ್ಯಾನೆಲ್ನೊಂದಿಗೆ ಬರುವ ನಿರೀಕ್ಷೆಯಿದೆ. ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸ್ಕ್ಯಾನರ್ ಕೂಡ ಇರಲಿದೆ. ಇದು ಸ್ನಾಪ್ಡ್ರಾಗನ್ 8 ಜನ್ 1 ನಿಂದ ನಡೆಸಲ್ಪಡುವ ಪ್ರಮುಖ ಫೋನ್ ಆಗಿರುತ್ತದೆ.
ಇದು 12ಜಿಬಿ ವರೆಗೆ (LPDDR5 ) ರಾಮ್ ಮತ್ತು 256ಜಿಬಿ ಯುಎಫ್ ಎಸ್ 3.1 ಇಂಟರ್ನಲ್ ಸ್ಟೋರೇಜ್ ಹೊಂದಿರುತ್ತದೆ. ಈ ಫೋನ್ 5,000ಎಂ ಎಎಚ್ ಬ್ಯಾಟರಿಯನ್ನು ಹೊಂದುವ ನಿರೀಕ್ಷೆಯಿದೆ. ಬೆಲೆ ಹಾಗೂ ಲಾಂಚ್ ಡೇಟ್ ಕುರಿತು ಮಾಹಿತಿ ಬಹಿರಂಗಗೊಂಡಿಲ್ಲ.
ಇದನ್ನೂ ಓದಿ: Best Smartphones Under 5000: ಕಡಿಮೆ ಬೆಲೆಗೆ ಹೆಚ್ಚು ಫೀಚರ್ಸ್; 5 ಸಾವಿರದೊಳಗಿನ ಉತ್ತಮ ಸ್ಮಾರ್ಟ್ಫೋನ್ಗಳಿವು
Upcoming Smartphones February 2022 Samsung Oppo Realme Infanix Redmi Motorola