ಏಷ್ಯಾದ ಅತೀ ಶ್ರೀಮಂತ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಗೌತಮ್​ ಅದಾನಿ

ಫೋರ್ಬ್ಸ್​​ನ ರಿಯಲ್​ ಟೈಮ್​ ಬಿಲಿಯೇನರ್​ ಲೆಕ್ಕಾಚಾರದ ಪ್ರಕಾರ ಭಾರತೀಯ ಉದ್ಯಮಿ ಗೌತಮ್​ ಅದಾನಿ(Gautam Adani becomes richest Asian) 90.1 ಬಿಲಿಯನ್​ ಡಾಲರ್​ ನಿವ್ವಳ ಮೌಲ್ಯದೊಂದಿಗೆ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿದ್ದಾರೆ. ಹಾಗೂ ಇದರ ಜೊತೆಯಲ್ಲಿ ವಿಶ್ವದ 10ನೇ ಅತೀ ಶ್ರೀಮಂತ ಎಂಬ ಖ್ಯಾತಿಯನ್ನೂ ಸಂಪಾದಿಸಿದ್ದಾರೆ. ಪೋರ್ಬ್ಸ್​ ಅಂಕಿ ಅಂಶಗಳ ಪ್ರಕಾರ ರಿಲಯನ್ಸ್​ ಇಂಡಸ್ಟ್ರೀಸ್​ ಮುಖ್ಯಸ್ಥ ಮುಕೇಶ್​ ಅಂಬಾನಿ ಏಷ್ಯಾದ ಎರಡನೇ ಅತೀ ಶ್ರೀಮಂತ ಎನಿಸಿದ್ದಾರೆ.


ಅದಾನಿ ಗ್ರೂಪ್​​ ವಿದ್ಯುತ್​ ಉತ್ಪಾದನೆ ಹಾಗೂ ಪ್ರಸರಣದಿಂದ ಹಿಡಿದು, ಖಾದ್ಯ ತೈಲ, ರಿಯಲ್​ ಎಸ್ಟೇಟ್​ ಹಾಗೂ ಕಲ್ಲಿದ್ದಲಿನಂತಹ ಸಾಕಷ್ಟು ವ್ಯವಹಾರಗಳನ್ನು ಹೊಂದಿದೆ. ಅದಾನಿ ಗ್ರೂಪ್​ ದೇಶದ ಟಾಪ್​ 6 ಕಂಪನಿಗಳ ಸಾಲಿನಲ್ಲಿ ಸ್ಥಾನವನ್ನು ಪಡೆದಿದೆ. 2021ರ ಏಪ್ರಿಲ್​ ತಿಂಗಳಲ್ಲಿ ಉದ್ಯಮಿ ಗೌತಮ್​ ಅದಾನಿ ಆದಾಯವು 50.5 ಶತಕೋಟಿ ಡಾಲರ್​ನಿಂದ ದ್ವಿಗುಣಗೊಂಡಿದೆ.


ಇನ್ನೊಂದು ವಿಶೇಷವಾದ ವಿಚಾರ ಅಂದರೆ ಸಾಮಾಜಿಕ ಮಾಧ್ಯಮ ನೆಟ್​ವರ್ಕಿಂಗ್​ ದೈತ್ಯ ಮಾರುಕಟ್ಟೆ ಬಂಡವಾಳೀಕರಣದಿಂದ ಸುಮಾರು 230 ಶತಕೋಟಿ ಡಾಲರ್​ ಕುಸಿತಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಮಾರ್ಕ್​ ಜುಕರ್ ಬರ್ಗ್​ ಮಾಲೀಕತ್ವದ ಮೆಟಾ ಕಂಪನಿಯನ್ನೂ ಅದಾನಿ ಮೀರಿಸಿದ್ದಾರೆ.


ಫೋರ್ಬ್ಸ್​ ಅಂಕಿ ಅಂಶಗಳು ನೀಡಿರುವ ಮಾಹಿತಿಯ ಪ್ರಕಾರ ರಿಲಯನ್ಸ್​ ಇಂಡಸ್ಟ್ರೀಸ್​ ಮುಖ್ಯಸ್ಥ ಮುಕೇಶ್​ ಅಂಬಾನಿಯ ನಿವ್ವಳ ಮೌಲ್ಯವು ಒಂದೇ ದಿನದಲ್ಲಿ 2.2 ಶತಕೋಟಿ ಡಾಲರ್​ ಕುಸಿತ ಕಂಡಿದೆ ಎಂದು ತಿಳಿದುಬಂದಿದೆ. ಈ ಮೂಲಕ ಮುಕೇಶ್​ ಅಂಬಾನಿಯ ನಿವ್ವಳ ಮೌಲ್ಯವು 89 ಶತಕೋಟಿ ಡಾಲರ್​ಗೆ ಇಳಿಕೆ ಕಂಡಿದೆ. ಪ್ರಸ್ತುತ ವಿಶ್ವದ ಅತ್ಯಂತ ಶ್ರೀಮಂತ ಎಲಾನ್​ ಮಸ್ಕ್​ರ ನಿವ್ವಳ ಮೌಲ್ಯವು ಒಂದೇ ದಿನದಲ್ಲಿ 3.3 ಶತಕೋಟಿ ಡಾಲರ್​ನಷ್ಟು ಕಡಿಮೆಯಾಗಿದೆ. ಆದರೂ ಸಹ ವಿಶ್ವದ ಅತೀ ಶ್ರೀಮಂತ ಎಂಬ ಪಟ್ಟವನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ.

ಇದನ್ನು ಓದಿ : ನಿರ್ಮಾಣ ಹಂತದ ಕಟ್ಟದ ಕುಸಿದು 7 ಮಂದಿ ಕಾರ್ಮಿಕರು ದುರ್ಮರಣ

ಇದನ್ನೂ ಓದಿ : principal stops students wearing hijab : ಹಿಜಬ್​ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರನ್ನು ತಡೆದ ಪ್ರಾಂಶುಪಾಲ

Gautam Adani becomes richest Asian and 10th in world

Comments are closed.