ಬೆಂಗಳೂರು : ಕೊರೊನಾ ಮಹಾಮಾರಿ ವ್ಯಾಪಕವಾಗಿ ಹರಡುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಇನ್ನಿಲ್ಲದ ಕಸರತ್ತು ನಡೆಯುತ್ತಿದೆ. ಹಸ್ತಲಾಘವ ಸೀನಿನಿಂದ ಕೊರೊನಾ ಸೋಂಕು ಹರಡುತ್ತೆ ಅನ್ನೋ ಅನ್ನೋ ಮಾತು ಕೇಳಿಬಂದಿತ್ತು. ಆದ್ರೀಗ ಕೊರೊನಾ ವೈರಸ್ ನಾವು ಧರಿಸುವ ಚಿನ್ನಾಭರಣ, ಬಟ್ಟೆ, ವಾಚ್ ಹಾಗೂ ಬೆಲ್ಟ್ ನಿಂದಲೂ ಹರಡುತ್ತೇ ಅನ್ನೋ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ಕೊರೊನಾ ವೈರಸ್ ಸಾಮಾನ್ಯವಾಗಿ 8 ರಿಂದ 12 ಗಂಟೆಗಳ ಬಟ್ಟೆಗಳ ಮೇಲೆ ಜೀವಂತವಾಗಿರುತ್ತೆ ಅಂತಾ ಹೇಳಲಾಗಿತ್ತು. ಇದೀಗ ಸಾಮಾನ್ಯವಾಗಿ ಬಳಸುವ ಚಿನ್ನದ ಉಂಗುರ, ಓಲೆ, ಬಳೆ, ಸರ ಸೇರಿದಂತೆ ಚಿನ್ನಾಭರಣಗಳಲ್ಲಿ ಅತೀ ಹೆಚ್ಚು ಸಮಯದವರೆಗೆ ಜೀವಂತವಾಗಿ ಇರುತ್ತದೆ.

ಅಲ್ಲದೇ ನಾವು ಧರಿಸುವ ಕನ್ನಡ, ವಾಚ್ ಹಾಗೂ ಬೆಲ್ಟ್ ಕೂಡ ಕೊರೊನಾ ವಿಚಾರದಲ್ಲಿ ಹೆಚ್ಚು ಅಪಾಯಕಾರಿಯಂತೆ ವೈದ್ಯರು ಹೇಳುತ್ತಿದ್ದಾರೆ.

ಕೊರೊನಾ ರೋಗಿಗಳು ಕೆಮ್ಮಿದಾಗ, ಸೀನಿದಾಗ ಈ ವೈರಸ್ ಆಭರಣಗಳ ಮೇಲೆ ಹೆಚ್ಚು ಹೊತ್ತು ಜೀವಂತವಾಗಿರುತ್ತದೆ. ನಂತರ ಈ ಆಭರಣವನ್ನು ಮುಟ್ಟುವುದರಿಂದ ಸೋಂಕು ಬಹುಬೇಗನೆ ಹರಡುತ್ತದೆ.

ವಿದೇಶಗಳಲ್ಲಿ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಆಭರಣ ಬಳಕೆ ಕಡಿಮೆಯಾಗ್ತಿದೆ. ಹೀಗಾಗಿ ಕೊರೊನಾ ಸೋಂಕು ಹರಡುವ ಸಾಧ್ಯತೆ ಇರೋದ್ರಿಂದಾಗಿ ಆಭರಣಗಳಿಂದ ಆದಷ್ಟು ದೂರ ಇರೋದು ಒಳಿತು ಒಳಿತು ಅಂತಾ ವೈದ್ಯರು ಸಲಹೆ ನೀಡುತ್ತಿದ್ದಾರೆ.