ವಿಟ್ಲ : ಲಾಕ್ ಡೌನ್ ನಿಂದ ಕಂಗೆಟ್ಟಿದ್ದ ಕನ್ಯಾನ ಮತ್ತು ಕರೋಪಾಡಿ ಗ್ರಾಮದ ಬಡ ಜನರಿಗೆ ಉದ್ಯಮಿ ಮೇಗಿನಗುತ್ತು ಗುಬ್ಯ ಶ್ರೀಧರ ಶೆಟ್ಟಿ ಅವರು ಆಹಾರ ಸಾಮಗ್ರಿಗಳ ಕಿಟ್ ವಿತರಿಸಿದ್ದಾರೆ.

ಸಾಮಾಜಿಕ, ಧಾರ್ಮಿಕ ಸೇವೆಗಳಲ್ಲಿ ತನ್ನನ್ನು ಗುರುತಿಸಿಕೊಂಡಿರುವ ಶ್ರೀಧರ ಶೆಟ್ಟಿ ಅವರು ಸುಮಾರು 250 ಕಿಟ್ ಗಳನ್ನು ವಿತರಿಸಿದ್ದಾರೆ.

ಕೊರೊನಾದಿಂದ ಕಂಗೆಟ್ಟಿದ್ದ ಗ್ರಾಮೀಣ ಪ್ರದೇಶದ ಬಡ ಕುಟುಂಬಗಳಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡಿದ್ದಾರೆ.

ಶ್ರೀಧರ ಶೆಟ್ಟಿ ಅವರ ಕಾರ್ಯಕ್ಕೆ ವಿಟ್ಲ ಎಸ್ ಐ ವಿನೋದ್ ಕುಮಾರ್ ಅವರು ಸಾಥ್ ನೀಡಿದ್ರು.

ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಜನರು ಆಹಾರ ವಸ್ತುಗಳಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದನ್ನು ಮನಗಂಡ ಶ್ರೀಧರ ಶೆಟ್ಟಿ ಅವರು ಆಹಾರ ಸಾಮಗ್ರಿಗಳ ಕಿಟ್ ವಿತರಿಸಿ ನೆರವಾಗಿದ್ದಾರೆ.