ಬಡಕುಟುಂಬಗಳಿಗೆ ಹಸಿವು ನೀಗಿದ ಮಂಗಳೂರಿನ ‘ವಜ್ರ ಟೆಕ್’

0

ಮಂಗಳೂರು : ಕೊರೊನಾ ಭೀತಿಯಿಂದ ದಕ್ಷಿಣ ಕನ್ನಡ ಜಿಲ್ಲೆ ನಲುಗಿ ಹೋಗುತ್ತಿದೆ. ಲಾಕ್ ಡೌನ್ ನಿಂದಾಗಿ ಮನೆಯಿಂದ ಹೊರಬರಲಾರದ ಸ್ಥಿತಿ ನಿರ್ಮಾಣವಾಗಿದೆ. ಬಡಕಟುಂಬಗಳು ಹೊತ್ತಿನ ತುತ್ತಿಗೂ ಪರದಾಡುತ್ತಿವೆ. ಇಂತಹ ಬಡಕುಟುಂಬಗಳಿಗೆ ಮಂಗಳೂರಿನ ಪ್ರತಿಷ್ಠಿತ ವಜ್ರ ಟೆಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿತ್ಯೋಪಯೋಗಿ ಅಡುಗೆ ಆಹಾಯ ವಸ್ತುಗಳು ಒದಗಿಸಿದೆ.

ವಜ್ರ ಟೆಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಗಳಾದ ಅಶ್ವಿತ್ ಕುಮಾರ್ ಉಪ್ಪಳ, ಜಿತಿನ್ ಎಂ.ಬಿ, ಅವರ ನೇತೃತ್ವದಲ್ಲಿ ಬಿಕರ್ನಕಟ್ಟೆಯ ಪಾಂಡುರಂಗ ವಿಠಲ ಭಜನಾ ಮಂದಿರದಲ್ಲಿ 600 ಬಡಕುಟುಂಬಗಳಿಗೆ ತಲಾ 5 ಕೆ.ಜಿಯಂತೆ ಸುಮಾರು 2000 ಕೆ.ಜಿ. ಅಕ್ಕಿಯನ್ನು ವಿತರಿಸಲಾಯಿತು.

ಖ್ಯಾತ ಚಲನಚಿತ್ರ ನಟ ಪೃಥ್ವಿ ಅಂಬಾರ್ ವಿತರಿಸಿದರು. ಹರಿಹರ ಪಾಂಡುರಂಗ ವಿಠ್ಠಲ ಭಜನಾ ಮಂದಿರ ಟ್ರಸ್ಟ್ ನ ಅಧ್ಯಕ್ಷರಾದ ಭರತೇಶ್ ಕುಮಾರ್, ಕಾರ್ಯದರ್ಶಿ ಮನೋಹರ್ ಎಮ್. ರೈ,

ಗೌರವಧ್ಯಾಕ್ಷರಾದ ಬಿ.ಕೃಷ್ಣಪ್ಪ ಸನಿಲ್, ಸದಸ್ಯರುಗಳಾದ ವಿ.ಜಯರಾಮ್, ಅಜಯ್, ಪ್ರಸನ್ನ, ಮಹೇಶ್, ಬಿ ರಮೇಶ್, ಜಗದೀಶ್ ಆಚಾರ್ಯ, ಕೆ.ರಮೇಶ್. ಶ್ರೀಧರ್ ರೈ, ಶಿವಂ ಫೌಂಡೇಶನ್ ನ ಪವನ್, ರಾಕೇಶ್, ವಿಶ್ವಕರ್ಮ ನಿಗಮದ ರಾಜ್ಯ ಅಧ್ಯಕ್ಷ ವಿಕ್ರಂ ಮುಂತಾದವದರು ಉಪಸ್ಥಿತರಿದ್ದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಗಡಿ ಭಾಗವಾದ ಹೆಜಮಾಡಿಯಿಂದ ಕಾಸರಗೋಡು – ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗವಾದ ತಲಪಾಡಿಯವರೆಗೆ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಸಿಬ್ಬಂದಿಗಳಿಗೆ,

ಮಂಗಳೂರು ತಾಲೂಕು ಕಚೇರಿಯ ಎಲ್ಲಾ ಸಿಬ್ಬಂಧಿಗಳಿಗೆ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂಧಿಗಳಿಗೆ ಸುಮಾರು 1000 ಕ್ಕೂ ಅಧಿಕ ಮಾಸ್ಕ್ ಹಾಗೂ 2000 ಕ್ಕೂ ಅಧಿಕ ಕುಡಿಯುವ ನೀರಿನ ಬಾಟಲಿಗಳನ್ನು ವಿತರಿಸಲಾಯಿತು.

ವಜ್ರ ಟೆಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕಾರ್ಯಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಅಭಿನಂದನೆ ಸಲ್ಲಿಸಿದೆ.

Leave A Reply

Your email address will not be published.