ದಿನ ಕಳೆದಂತೆ ಜನರ ಲೈಫ್ ಸ್ಟೈಲ್ ಬದಲಾಗುತ್ತೆ. ದಿನಕ್ಕೊಂದು ಟ್ರೆಂಡ್ ಹುಟ್ಟಿಕೊಳ್ಳುತ್ತೆ. ಅದ್ರಲ್ಲೂ ಎಲ್ಲಿ ನೋಡಿದ್ರೂ ಮೊಬೈಲ್… ಕುಳಿತಿರಲಿ,, ನಿಂತಿರಲಿ. ಯಾವುದೇ ಕೆಲಸ ಮಾಡ್ತಾನೂ ಇರಲಿ. ಆದರೆ ಕೈಯಲ್ಲಿ ಮೊಬೈಲ್ ಇರಲೇಬೇಕು. ಈ ಮೊಬೈಲ್ ಎಷ್ಟು ಅನುಕೂಲವೋ ಅಷ್ಟೇ ನಮಗೆ ಅಪಾಯಕಾರಿ. ಯಾಕೆಂದ್ರೆ ಬಹುತೇಕರಿಗೆ ಸೆಲ್ಪಿ ಕ್ಲಿಕ್ಕಿಸೋ ಹವ್ಯಾಸ. ಆದರೆ ಪದೇ ಪದೇ ಸೆಲ್ಪಿ ಕ್ಲಿಕ್ಕಿಸುವುದು ಆರೋಗ್ಯದ ದೃಷ್ಟಿಯಿಂದ ಅಪಾಯವೆನ್ನುತ್ತಿದೆ ಸಂಶೋಧನೆ.

ಸೆಲ್ಪಿ ಕ್ಲಿಕ್ಕಿಸೋದು, ಸ್ಟೇಟಸ್ ಹಾಕಿಕೊಳ್ಳೋದು, ಸಾಮಾಜಿಕ ಜಾಲತಾಣಗಳಲ್ಲಿ ಪೋಟೋ ಅಪ್ಲೋಡ್ ಮಾಡಿ ಲೈಕ್ಸ್, ಕಮೆಂಟ್ಸ್ ಪಡೆಯೋದು ಮಾಮೂಲಿ.

ಆದರೆ ಯಾವಾಗಲೂ ಮೊಬೈಲ್ ಹಿಡಿದುಕೊಂಡು ಸೆಲ್ಪಿ ಕ್ಲಿಕ್ಕಿಸೋದು ಸೆಲ್ಪಿಟಿಸ್ ಅನ್ನೋ ಮಾನಸಿಕ ಅಸ್ವಸ್ಥತೆ ಎನ್ನುತ್ತಿದೆ ಸಂಶೋಧನಾ ವರದಿ.

ಸೆಲ್ಪಿ ಕ್ಲಿಕ್ಕಿಸುವವರ ಕುರಿತು ನಾಟಿಂಗ್ ಹ್ಯಾಮ್`ನ ಟ್ರೆಂಟ್ ಯೂನಿವರ್ಸಿಟಿ ಮತ್ತು ಥಿಯಾಗರಾಜರ್ ಸ್ಕೂಲ್ ಆಫ್ ಮ್ಯಾನೇಜ್ ಮೆಂಟ್ ಸಂಶೋಧನೆಯೊಂದನ್ನು ನಡೆಸಿದೆ.

ಸಂಶೋಧನೆಗೆ ಒಳಪಟ್ಟ 200 ಮಂದಿಯ ಪೈಕಿ ಶೇ.34ರಷ್ಟು ಮಂದಿ ಬಾರ್ಡರ್ ಲೈನ್ ಸೆಲ್ಫಿಟಿಸ್, ಶೇ.40.5ರಷ್ಟು ಜನ ತೀವ್ರ ಸೆಲ್ಫಿಟಿಸ್, ಶೇ.25.5ರಷ್ಟು ಜನ ದೀರ್ಘಕಾಲದಿಂದ ಸೆಲ್ಫಿಟಿಸ್ ಸಮಸ್ಯೆಯಿಂದ ಬಳಲುತ್ತಿರುವುದು ಕಂಡು ಬಂದಿದೆ.

ಸೆಲ್ಫಿ ಮೋಹ ಪುರುಷರಲ್ಲಿ ಶೇ. 57.5 ರಷ್ಟಿದ್ದರೆ ಮಹಿಳೆಯರಲ್ಲಿ 42.5 ರಷ್ಟಿದೆ. ಈ ಸಂಶೋಧನೆಯ ಪ್ರಕಾರ ಸೆಲ್ಫಿ ಕ್ಲಿಕ್ಕಿಸುವುದು ಮಾನಸಿಕ ಅಸ್ವಸ್ಥತೆ ಅನ್ನುವ ತೀರ್ಮಾನಕ್ಕೆ ಬಂದಿದ್ದಾರೆ ಮಾನಸಿಕ ವೈದ್ಯರು.

ಅದ್ರಲ್ಲೂ ಆತ್ಮಸ್ಥೈರ್ಯದ ಕೊರತೆಯಿರುವ ವ್ಯಕ್ತಿಗಳು ತಮ್ಮ ಆತ್ಮಸ್ಥೈರ್ಯ ವೃದ್ಧಿಸಿಕೊಳ್ಳಲು, ವ್ಯಸನಕಾರಿ ನಡವಳಿಕೆ ಹೊಂದಿರುವವರು ಈ ಸೆಲ್ಫಿ ಮಾನಸಿಕ ಸಮಸ್ಯೆಗೆ ಬೇಗತುತ್ತಾಗುತ್ತಾರೆ ಎನ್ನುತ್ತಿದೆ ಸಂಶೋಧನೆ.

ಹೀಗಾಗಿ ಇನ್ಮುಂದೆ ಸೆಲ್ಪಿ ಕ್ಲಿಕ್ಕಿಸುವ ಮುನ್ನ ಒಮ್ಮೆ ಯೋಚಿಸುವುದು ಒಳಿತು.