ಸೋಮವಾರ, ಜೂನ್ 16, 2025
HomeCinemaRadhika Pandit : ಅಪ್ಪು ನೆನಪು ಕಾಡುತ್ತಿದೆ ; ಹುಟ್ಟುಹಬ್ಬ ಬೇಡವೆಂದ ನಟಿ ರಾಧಿಕಾ ಪಂಡಿತ್

Radhika Pandit : ಅಪ್ಪು ನೆನಪು ಕಾಡುತ್ತಿದೆ ; ಹುಟ್ಟುಹಬ್ಬ ಬೇಡವೆಂದ ನಟಿ ರಾಧಿಕಾ ಪಂಡಿತ್

- Advertisement -

ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ (Radhika Pandit) ಸದ್ಯ ಬ್ಯುಸಿ ಮಮ್ಮಿ. ಇಬ್ಬರೂ ಕ್ಯೂಟ್ ಮಕ್ಕಳ‌ ತಾಯಿಯಾಗಿರೋ ರಾಧಿಕಾ ಪಂಡಿತ್ ಸಿನಿಮಾದಿಂದ ದೂರವುಳಿದಿದ್ದು ಮಕ್ಕಳ ಆರೈಕೆ,ಟ್ರಿಪ್ ಅಂತ ತಮ್ಮ ಬ್ರೇಕ್ ಲೈಫ್ ಎಂಜಾಯ್ ಮಾಡ್ತಿದ್ದಾರೆ. ಸದ್ಯದಲ್ಲೇ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿರೋ ರಾಧಿಕಾ ಪಂಡಿತ್ ಅಪ್ಪು ನಿಧನದ ಕಾರಣಕ್ಕೆ ಸಂಭ್ರಮಾಚರಣೆಗೆ ಬ್ರೇಕ್ ಹಾಕೋ ಸಾಧ್ಯತೆ ಇದೆ.

ತಮ್ಮ ಮುದ್ದಾದ ನಗು, ಹಿತಮಿತವಾದ ಮಾತುಕತೆ, ಝೀರೋ ಕಾಂಟ್ರವರ್ಸಿಗಳಿಂದಲೇ ಕನ್ನಡಿಗರ ಮನಗೆದ್ದ ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಸದ್ಯ ಹುಟ್ಟುಹಬ್ಬದ ಹೊಸ್ತಿಲಿನಲ್ಲಿದ್ದಾರೆ. ಮಾರ್ಚ್ 7 ಕ್ಕೆ 38ನೇ ವಸಂತಕ್ಕೆ ಕಾಲಿಡಲಿರೋ ರಾಧಿಕಾ ಪಂಡಿತ್ ಕಳೆದ ಎರಡು ವರ್ಷಗಳಿಂದಲೂ ಕೊರೋನಾ ಕಾರಣಕ್ಕೆ ಹುಟ್ಟುಹಬ್ಬ ಆಚರಿಸಿಕೊಂಡಿ ರಲಿಲ್ಲ. ಪುಟ್ಟ ಪುಟ್ಟ ಮಕ್ಕಳ ಅರೈಕೆಯ ಹೊಣೆಯೂ ಇದ್ದಿದ್ದರಿಂದ ರಾಧಿಕಾ ಪಂಡಿತ್ ಅಭಿಮಾನಿಗಳ ಸಂಪರ್ಕಕ್ಕೂ ಬಂದಿರಲಿಲ್ಲ.

ಆದರೆ ಈ ವರ್ಷ ಕೊರೋನಾ ಮೂರನೇ ಅಲೆ ತಣ್ಣಗಾಗಿದೆ. ಹೀಗಿದ್ದರೂ ರಾಧಿಕಾ ಪಂಡಿತ್ ತಮ್ಮ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳುವುದು ಅನುಮಾನ ಎನ್ನಲಾಗ್ತಿದೆ. ಕಾರಣ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನ‌. ರಾಧಿಕಾ ಪಂಡಿತ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡುವೆ ಒಂದು ಒಳ್ಳೆಯ ಸ್ನೇಹವಿತ್ತು. ಅಲ್ಲದೇ ಇವರ ಕೆಮೆಸ್ಟ್ರಿಯೂ ಅಭಿಮಾನಿಗಳ ಮನಗೆದ್ದಿತ್ತು. ಇಬ್ಬರೂ ಮತ್ತಷ್ಟು ಸಿನಿಮಾಗಳಲ್ಲಿ ನಟಿಸುವ ಮೊದಲೇ ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿದ್ದಾರೆ.

ಇದೇ ಕಾರಣಕ್ಕೆ ನಟಿ ರಾಧಿಕಾ ಪಂಡಿತ್ ಈ ವರ್ಷ ಅದ್ದೂರಿ ಹುಟ್ಟುಹಬ್ಬ ಆಚರಣೆಗೆ ನೋ ಎಂದಿದ್ದಾರಂತೆ. ಪುನೀತ್ ಅಗಲಿಕೆಯನ್ನು ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.‌ ಅವರ ಅಗಲಿಕೆಯ ನೋವನ್ನು ಮರೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ವರ್ಷ ಯಾರೂ ನನ್ನ ಹುಟ್ಟುಹಬ್ಬ ಆಚರಿಸಲು ನಮ್ಮ ಮನೆಗೆ ಬರಬೇಡಿ ಎಂದು ಅಭಿಮಾನಿಗಳಲ್ಲಿ ರಾಧಿಕಾ ಮನವಿ ಮಾಡಿದ್ದಾರೆ.

ಕೇವಲ ರಾಧಿಕಾ ಪಂಡಿತ್ ಮಾತ್ರವಲ್ಲ ನಟ ಯಶ್, ಸುದೀಪ್, ದರ್ಶನ್ ಸೇರಿದಂತೆ ಯಾವ ಸ್ಟಾರ್ ನಟರೂ ಕೊರೋನಾ ಕಾರಣ ನೀಡಿ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಸದ್ಯ ಸಿನಿಮಾಗಳಿಂದ ಬ್ರೇಕ್ ತೆಗೆದುಕೊಂಡಿದ್ದರೂ ಸೋಷಿಯಲ್ ಮೀಡಿಯಾದಲ್ಲಿ ಅಕ್ಟಿವ್ ಆಗಿರೋ ರಾಧಿಕಾ ಪಂಡಿತ್ ಸದಾ ತಮ್ಮ ಪುಟ್ಟ ಪುಟ್ಟ ಮಕ್ಕಳ ವಿಡಿಯೋ ಪೋಟೋ ಹಂಚಿಕೊಂಡು ಸಂಭ್ರಮಿಸುತ್ತಿರುತ್ತಾರೆ.

ಇದನ್ನೂ ಓದಿ : ನಟ ಚೇತನ್ ಗೆ ಮತ್ತೊಂದು ಸಂಕಷ್ಟ: ಚಾರ್ಜ್ ಶೀಟ್ ಗೆ ಸರ್ಕಾರದ ಅನುಮತಿ ಕೋರಿದ ಪೊಲೀಸರು

ಇದನ್ನೂ ಓದಿ :  ಗೂಗಲ್ ತೋರಿಸ್ತಿದೆ ಕೆಜಿಎಫ್ ಸೆಟ್‌ ದಾರಿ : ರಾಕಿಂಗ್‌ ಸ್ಟಾರ್‌ ಯಶ್‌ ಅಭಿಮಾನಿಗಳಿಗೆ ಗುಡ್‌ನ್ಯೂಸ್‌

( Radhika pandit not celebrate birthday for Puneeth Raj Kumar Death)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular