Ira Khan : ಬಾಲಿವುಡ್ ಗೆ ಬರ್ತಾರೆ ಅಮೀರ್ ಖಾನ್ ಪುತ್ರಿ ಇರಾ ಖಾನ್‌

ಮಿಸ್ಟರ್ ಪರ್ಫೆಕ್ಟ್ ಖ್ಯಾತಿಯ ನಟ ಅಮೀರ್ ಖಾನ್ ಬಾಲಿವುಡ್ ನ ಸೂಪರ್ ಸ್ಟಾರ್ ಗಳ ಸಾಲಿನಲ್ಲಿ ಅಗ್ರಗಣ್ಯರು. ದಶಕಗಳಿಂದ ಸಿನಿಮಾದಲ್ಲಿ ಸಕ್ರಿಯರಾಗಿರೋ ಅಮೀರ್ ಖಾನ್, ಸದ್ಯ ಲಾಲ್ ಸಿಂಗ್ ಛಡ್ಡಾ ಸಿನಿಮಾ ದಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್ ನ ಬಹುತೇಕ ನಟರ‌ ಮಕ್ಕಳು ತಂದೆ-ತಾಯಿ ಹಾದಿಯನ್ನೇ ತುಳಿದಿದ್ದಾರೆ. ಆದರೆ ಅಮೀರ್ ಖಾನ್ ಮಗಳು (Ira Khan) ಮಾತ್ರ ತಂದೆಯ ಹಾದಿಯಲ್ಲಿ ನಡೆಯೋದಿಲ್ಲ ಅನ್ನೋ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಅಮೀರ್ ಖಾನ್ ಪುತ್ರಿ ಇರಾ ಖಾನ್ (Ira Khan) ಸದಾ ತಮ್ಮ ವಿಭಿನ್ನವಾದ ನಿಲುವು ಹಾಗೂ ಅಚ್ಚರಿಯ ನಡೆಗಳ ಮೂಲಕವೇ ಸದ್ದು ಮಾಡಿದವರು. ತಮ್ಮ ಜಿಮ್ ಟ್ರೇನರ್ ಜೊತೆಗೆ ಡೇಟ್ ಮಾಡ್ತಿರೋ ಇರಾ ಖಾನ್ ಸದಾ ಸ್ಟ್ರೇಟ್ ಫಾರ್ವರ್ಡ್ ನಡೆಯಿಂದಲೇ ಗಮನ ಸೆಳೆಯುತ್ತಾರೆ. ಯಾವ ನಟಿಗೂ ಕಡಿಮೆಯಿಲ್ಲದಂತೇ ಹಾಟ್ ಹಾಟ್ ಅವತಾರಗಳಲ್ಲಿ ಮಿಂಚುವ ಇರಾ ಖಾನ್ ಸದ್ಯದಲ್ಲೇ ಬಾಲಿವುಡ್ ಗೆ ಎಂಟ್ರಿಕೊಡಬಹುದು ಎಂದು ಅಮೀರ್ ಖಾನ್ ಅಭಿಮಾನಿಗಳು ಕಾದಿದ್ದರು. ಆದರೆ ಇದು ಕನಸೇ ಎನ್ನುವುದನ್ನು ಸ್ವತಃ ಇರಾ ಖಾನ್ ಸ್ಪಷ್ಟ ಪಡಿಸಿದ್ದಾರೆ.

ಇತ್ತೀಚಿಗೆ ಇರಾ ಖಾನ್ ಇನ್ ಸ್ಟಾಗ್ರಾಂ ನಲ್ಲಿ ಅಭಿಮಾನಿಗಳಿಗೆ Ask Me Anything ಎಂಬ ಚಾಟ್ ಆಫ್ಸನ್ ನೀಡಿದ್ದರು. ಈ ವೇಳೆ ಅಭಿಮಾನಿಯೊಬ್ಬರು ನೀವು ಚಿತ್ರರಂಗಕ್ಕೆ ಬರುತ್ತೀರಾ ಎಂದು ಪ್ರಶ್ನಿಸಿದ್ದರು. ಇದಕ್ಕೆ ನೇರವಾಗಿ ಉತ್ತರಿಸಿದ ಇರಾ ಖಾನ್, ನಾನು ಯಾವುದೇ ಕಾರಣಕ್ಕೂ ಚಿತ್ರರಂಗಕ್ಕೆ ಕಾಲಿರಿಸೋದಿಲ್ಲ ಎಂದಿದ್ದಾರೆ. ಆ ಮೂಲಕ ಇರಾ ಖಾನ್ ತಾವು ತಂದೆಗೆ ಯಶಸ್ಸು ತಂದುಕೊಟ್ಟ ಬಣ್ಣದ ಲೋಕಕ್ಕೆ ಎಂಟ್ರಿಕೊಡೋದಿಲ್ಲ ಎಂಬುದನ್ನು ಸ್ಪಷ್ಟ ಪಡಿಸಿದ್ದಾರೆ. ಆದರೆ ಇರಾ ತಮ್ಮ ಆಸಕ್ತಿಯ ಕ್ಷೇತ್ರ ಯಾವುದು. ಅವರು ಯಾವುದರಲ್ಲಿ ಮುಂದುವರೆಯುತ್ತೇನೆ ಎಂಬುದನ್ನು ಬಹಿರಂಗಪಡಿಸಿಲ್ಲ.

ಕೆಲದಿನಗಳ ಹಿಂದೆ ಇರಾ ಖಾನ್ ನಾಟಕವೊಂದನ್ನು ನಿರ್ದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಇರಾ ಖಾನ್ ನಿರ್ದೇಶನಕ್ಕೆ ಇಳಿಯುತ್ತಾರೆ ಎಂದು ಅಂದಾಜಿಸಲಾಗಿತ್ತು. ಆದರೆ ಈಗ ಇರಾ ಖಾನ್ ಬಣ್ಣದ ಲೋಕದಿಂದ ದೂರವೇ ಉಳಿಯುವುದಾಗಿ ಘೋಷಿಸಿದ್ದು ಅಚ್ಚರಿ ತಂದಿದೆ. ಒಂದೊಮ್ಮೆ ಇರಾ ಖಾನ್ ಬಾಲಿವುಡ್ ಪ್ರವೇಶಿಸುವುದಾದರೇ ಸ್ವತಃ ನಿರ್ದೇಶಕರು ಆಗಿರುವ ಅಮೀರ್ ಖಾನ್ ಮಗಳಿಗಾಗಿ ಚಿತ್ರ ನಿರ್ದೇಶಿಸಲು ಸಿದ್ಧರಿದ್ದರು. ಅಷ್ಟೇ ಅಲ್ಲ ಅಮೀರ್ ಖಾನ್ ಮಗಳಿಗೆ (Ira Khan) ಬಂಡವಾಳ ಹೂಡಲು ನಿರ್ಮಾಪಕರ ಕೊರತೆಯೂ ಇರಲಿಲ್ಲ. ಆದರೆ ಸ್ವತಃ ಇರಾನೇ ಬಾಲಿವುಡ್ ಪ್ರವೇಶಿಸಲ್ಲ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಇದನ್ನೂ ಓದಿ : Rudra Movie : ಕ್ರೈಂ ಸಿರೀಸ್ ನಲ್ಲಿ ಮಿಂಚಿದ ಬಾಲಿವುಡ್ ನಟ ಅಜಯ್ ದೇವಗನ್

ಇದನ್ನೂ ಓದಿ : ಇಂಗ್ಲೀಷ್ ನಲ್ಲೂ ಅಬ್ಬರಿಸಿದ ಕಿಚ್ಚ ಸುದೀಪ್ : ವಿಕ್ರಾಂತ್ ರೋಣ ಟೀಂನಿಂದ ಬಂತು ಅಪ್ಡೇಟ್

(Ira Khan daughter of Aamir Khan enter to Bollywood)

Comments are closed.