ಬೆಂಗಳೂರು : ದೂರದ ಉಕ್ರೇನ್ ನಲ್ಲಿ ನಡೆಯುತ್ತಿರುವ ಯುದ್ಧದ ಬಿಸಿ ಕರ್ನಾಟಕದಂತಹ ಮಧ್ಯಮ ವರ್ಗದ ಜನರೇ ಹೆಚ್ಚಿರುವ ರಾಜ್ಯಕ್ಕೂ ತಟ್ಟಲಾರಂಭಿಸಿದ್ದು ಒಗ್ಗರಣೆ ಎಣ್ಣೆಯಿಂದ ಆರಂಭಿಸಿ ಪೆಟ್ರೋಲ್, ಡಿಸೇಲ್ ದರದವರೆಗೂ ಎಲ್ಲವೂ ದರ ಏರಿಕೆಯಾಗುವ ಭೀತಿಯಲ್ಲಿದ್ದು, ಅಡುಗೆ ಎಣ್ಣೆ(Cooking Oil Price ) ಬಿಸಿ ಯಾಗುವ ಮುನ್ನವೇ ಗ್ರಾಹಕರ ಕೈ ಸುಡಲಾರಂಭಿಸಿದೆ. ಕರ್ನಾಟಕದ ಎಲ್ಲ ಮಾರುಕಟ್ಟೆಯಲ್ಲಿ 120 ರಿಂದ 140 ರೂಪಾಯಿ ಆಸುಪಾಸಿನಲ್ಲಿದ್ದ ಆಡುಗೆ ಎಣ್ಣೆ ದರ ಯುದ್ಧದ ಪರಿಣಾಮವಾಗಿ ಪ್ರಸ್ತುತ 180-200 ರೂಪಾಯಿ ದರ ತಲುಪಿದೆ.
ಮೂಲಗಳ ಮಾಹಿತಿ ಪ್ರಕಾರ ಕರ್ನಾಟಕ ಪ್ರತಿ ತಿಂಗಳು 25 ರಿಂದ 30 ಸಾವಿರ ಟನ್ ಗಳಷ್ಟು ಸೂರ್ಯಕಾಂತಿ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತಿತ್ತು. ಭಾರತವೂ ಬಹುತೇಕ ಅಡುಗೆ ಎಣ್ಣೆಯನ್ನು (Cooking Oil Price ) ಉಕ್ರೇನ್ ನಿಂದಲೇ ಆಮದು ಮಾಡಿಕೊಳ್ಳುತ್ತಿತ್ತು. ಈಗ ಈ ಚೈನ್ ಲಿಂಕ್ ನಲ್ಲಿ ಏರಿಕೆ ಆರಂಭವಾಗಿದ್ದು ಕರ್ನಾಟಕದ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಯ ದರ 180 ಗಡಿ ದಾಟಿದೆ. ಇನ್ನು ಎಣ್ಣೆ ದರ ಏರಿಕೆಯ ಸುದ್ದಿಯಿಂದ ಗ್ರಾಹಕರು ಕೂಡ ಮುಗಿಬಿದ್ದು ಅಡುಗೆ ಎಣ್ಣೆ ಖರೀದಿಗೆ ಮುಂದಾಗುತ್ತಿದ್ದು ಇದೂ ಕೂಡ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.
ಹೋಲಸೇಲ್ ಅಡುಗೆ ಎಣ್ಣೆ ಮಾರಾಟಗಾರರ ಪ್ರಕಾರ, ಸಗಟು ದರದಲ್ಲಿ ಅಡುಗೆ ಎಣ್ಣೆಯ (Cooking Oil Price) ಬೆಲೆಯ ಸುಮಾರು ಲೀಟರ್ ಮೇಲೆ 40 ರೂಪಾಯಿ ಏರಿಕೆ ಯಾಗಿದ್ದು, 5 ಲೀಟರ್ ಎಣ್ಣೆ ಕ್ಯಾನ್ ಗಳ ಬೆಲೆ ಎರಡು ತಿಂಗಳಿನಲ್ಲಿ 650 ರೂಪಾಯಿ ಗಳಿಂದ 800ಕ್ಕೆ ಏರಿಕೆಯಾಗಿದೆ. ಕೇವಲ ಒಂದು ವಾರದ ಅವಧಿಯಲ್ಲಿ ರಾಜ್ಯದಲ್ಲಿ ಎಣ್ಣೆ ಬೆಲೆ 100 ರೂಪಾಯಿ ಏರಿಕೆಕಂಡಿದೆ. ಒಂದು ಲೀಟರ್ ಎಣ್ಣೆ ಪ್ಯಾಕ್ ದರ 120 ರಿಂದ ಸದ್ಯ 180, 200 ಅಂಚು ತಲುಪಿದೆ.
ಇನ್ನೂ ಬೆಂಗಳೂರು ನಗರವೊಂದಕ್ಕೆ ಪ್ರತಿನಿತ್ಯ ಅಂದಾಜು 900 ಟನ್ ಅಡುಗೆ ಎಣ್ಣೆ (Cooking Oil ) ಬೇಕೆಂದು ಅಂದಾಜಿಸಲಾಗಿದೆ.ಇನ್ನೊಂದೆಡೆ ಅಡುಗೆ ಎಣ್ಣೆ ಪೊರೈಕೆ ವ್ಯತ್ಯಯದ ಲಾಭ ಪಡೆಯಲು ಬಯಸುತ್ತಿರುವ ಕಾಳಸಂತೆಕೋರರು ಕೃತಕಅಭಾವವನ್ನು ಸೃಷ್ಟಿಸುತ್ತಿದ್ದಾರೆ. ಇನ್ನೊಂದೆಡೆ ಪೆಟ್ರೋಲ್, ಡಿಸೇಲ್ ಏರಿಕೆಯಾಗೋ ಮುನ್ಸೂಚನೆ ಸಿಕ್ಕಿದ್ದು, ಲೀಟರ್ ಮೇಲೆ 5 -15 ರೂಪಾಯಿವರೆಗೆ ಏರಿಕೆಯಾಗಲಿದೆ ಎನ್ನಲಾಗುತ್ತಿದೆ. ಹೀಗಾಗಿ ಇಂದು ಪೆಟ್ರೋಲ್ ಬಂಕ್ ಗಳಲ್ಲಿ ಜನರು ಸಾಲುಗಟ್ಟಿ ನಿಂತಿದ್ದು ಟ್ಯಾಂಕ್ ಫುಲ್ ಮಾಡಿಕೊಂಡು ಸ್ವಲ್ಪ ದಿನವಾದರೂ ಈ ಪೆಟ್ರೋಲ್ ಬೆಲೆ ಏರಿಕೆಯಿಂದ ಬಚಾವಾಗುವ ಪ್ರಯತ್ನದಲ್ಲಿದ್ದಾರೆ.
ಇದನ್ನೂ ಓದಿ : 14 ವರ್ಷಗಳ ಬಳಿಕ ದಾಖಲೆ ಬರೆದ ಕಚ್ಚಾ ತೈಲ
ಇದನ್ನೂ ಓದಿ : ಮಾಯಾನಗರಿಯಲ್ಲಿ ತಲೆ ಎತ್ತಲಿದೆ ಜಿಯೋ ವರ್ಲ್ಡ್ ಸೆಂಟರ್ : ಏನಿದರ ವಿಶೇಷತೆ ಗೊತ್ತಾ !
(Cooking Oil Price has crossed Rs 200)