Sonakshi Sinha : ವಂಚನೆ ಪ್ರಕರಣ, ಸಂಕಷ್ಟಕ್ಕೆ ಸಿಲುಕಿದ ಸೋನಾಕ್ಷಿ ಸಿನ್ಹಾ

ಸೆಲೆಬ್ರೆಟಿಗಳು ಸಿನಿಮಾ, ಶೂಟಿಂಗ್, ಪೋಟೋಶೂಟ್ ಗಳ ಜೊತೆ ಸುದ್ದಿಯಾಗೋದು ಕಾಮನ್. ಆದರೆ ಬಾಲಿವುಡ್ ನಟ- ನಟಿಯರು ಇದೆಲ್ಲದರ ಜೊತೆಗೆ ಕಾನೂನು ಉಲ್ಲಂಘನೆ, ಪೊಲೀಸ್ ಕೇಸ್ ಗಳಿಂದಲೂ ಸುದ್ದಿಯಾಗುತ್ತಾರೆ. ಈಗ ದಬಂಗ ಬೆಡಗಿ ಸೋನಾಕ್ಷಿ ಸಿನ್ಹಾ (Sonakshi Sinha) ಇಂತಹುದೇ ವಿಚಾರವೊಂದಕ್ಕೆ ಮುನ್ನಲೆಗೆ ಬಂದಿದ್ದು, ಬಂಧನ ಭೀತಿ ಎದುರಿಸುತ್ತಿದ್ದಾರೆ.

ಬಾಲಿವುಡ್ ನಲ್ಲಿ ಬೋಲ್ಡ್ ಪಾತ್ರ ಹಾಗೂ ಐಟಂ ಡ್ಯಾನ್ಸ್ ಗಳ ಮೂಲಕವೇ ಮಿಂಚಿದ ನಟಿ ಸೋನಾಕ್ಷಿ ಸಿನ್ಹಾ (Sonakshi Sinha) ಸದ್ಯ ಬಂಧನ ಭೀತಿ ಎದುರಿಸುತ್ತಿದ್ದಾರೆ. ಸೋನಾಕ್ಷಿ ಮೇಲೆ ವಂಚನೆ ಪ್ರಕರಣ ಕೇಳಿಬಂದಿದ್ದು, ನ್ಯಾಯಾಲಯ ಸೋನಾಕ್ಷಿ ಸಿನ್ಹಾ ಬಂಧನಕ್ಕೆ ಆದೇಶ ಹೊರಡಿಸಿದೆ. ಪ್ರಕರಣ ಏನು ಅನ್ನೋದನ್ನು ಗಮನಿಸೋದಾದರೇ, ಸೆಲೆಬ್ರೆಟಿ ಸೋನಾಕ್ಷಿ ಸಿನ್ಹಾ ದೆಹಲಿಯಲ್ಲಿ ನಡೆಯಬೇಕಿದ್ದ ಕಾರ್ಯಕ್ರಮವೊಂದಕ್ಕೆ ಮುಖ್ಯ ಅತಿಥಿಯಾಗಿ ಬರಲು ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲ ಈ ಕಾರ್ಯಕ್ರಮಕ್ಕೆ ಬರಲು ಬರೋಬ್ಬರಿ 37 ಲಕ್ಷ ರೂಪಾಯಿ ಗೌರವಧನ ಪಡೆದಿದ್ದಾರೆ.

ಆದರೆ ಹಣ ಪಡೆದ ಮೇಲೆ ಸೋನಾಕ್ಷಿ ಸಿನ್ಹಾ (Sonakshi Sinha) ಈ ಕಾರ್ಯಕ್ರಮಕ್ಕೆ ಹಾಜರಾಗಿಲ್ಲ. ಮಾತ್ರವಲ್ಲ ಕಾರ್ಯಕ್ರಮ ಆಯೋಜಕರಾದ ಪ್ರಮೋದ್ ಶರ್ಮಾ ಎಂಬುವವರಿಗೆ ಹಣವನ್ನು ವಾಪಸ್ ಮಾಡಿಲ್ಲ. ನಟಿ ಸೋನಾಕ್ಷಿ ಸಿನ್ಹಾ ಈ ವರ್ತನೆಯಿಂದ ಕಂಗೆಟ್ಟ ಕಾರ್ಯಕ್ರಮದ ಆಯೋಜಕರಾ್ ಪ್ರಮೋದ್ ಶರ್ಮಾ, ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.

ಆದರೆ ಇದಕ್ಕೂ ಬಗ್ಗದ ಸೋನಾಕ್ಷಿ ಸಿನ್ಹಾ(Sonakshi Sinha) ಸತತವಾಗಿ ನ್ಯಾಯಾಲಯದ ವಿಚಾರಣೆಗೆ ಗೈರಾಗಿದ್ದಾರೆ. ಇದರಿಂದ ಅಸಮಧಾನಗೊಂಡಿರುವ ನ್ಯಾಯಾಧೀಶರು ಪದೇ ಪದೇ ವಿಚಾರಣೆಗೆ ಗೈರಾದ ಸೋನಾಕ್ಷಿ ಸಿನ್ಹಾ ಅವರನ್ನು ಬಂಧಿಸಿ ಕರೆತರುವಂತೆ ಸ್ಥಳೀಯ ಪೊಲೀಸರಿಗೆ ಆದೇಶಿಸಿದ್ದಾರೆ. ಅಲ್ಲದೇ ಸೋನಾಕ್ಷಿ ಸಿನ್ಹಾರನ್ನು ಬಂಧಿಸಿ ಏಪ್ರಿಲ್ 24 ರಂದು ನ್ಯಾಯಾಲಯ ದ ಮುಂದೇ ಹಾಜರು ಪಡಿಸಲು ನ್ಯಾಯಾಲಯ ಆದೇಶಿಸಿದೆ‌. ಹೀಗಾಗಿ ಸೋನಾಕ್ಷಿ ಸಿನ್ಹಾ ಸಂಕಷ್ಟಕ್ಕಿಡಾಗಿದ್ದಾರೆ.

ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ ಸೋನಾಕ್ಷಿ ಸಿನ್ಹಾ ಹೆಸರು ಆಗಾಗ ಬಾಲಿವುಡ್ ನ ಮೋಸ್ಟ್ ಎಲಿಜ್ಯಿಬಲ್ ಬ್ಯಾಚುಲರ್ ಸಲ್ಮಾನ್ ಖಾನ್ ಜೊತೆ ಕೇಳಿಬಂದಿದ್ದು ಅವರಿಬ್ಬರು ಡೇಟಿಂಗ್ ಮಾಡ್ತಿದ್ದಾರೆ ಎನ್ನಲಾಗಿತ್ತು. ಅಷ್ಟೇ ಅಲ್ಲ ಇತ್ತೀಚಿಗೆ ಸಲ್ಮಾನ್ ಖಾನ್ ಹಾಗೂ ಸೋನಾಕ್ಷಿ ಸಿನ್ಹಾ ಮದುವೆ ಕೂಡ ಆಗಿದ್ದಾರೆ ಎಂಬ ವದಂತಿ ಹರಡಿದ್ದು ಅದರ ಪೋಟೊಗಳು ಕೂಡ ವೈರಲ್ ಆಗಿದ್ದವು. ಆದರೆ ಈ ಪೋಟೋಗಳು ಎಡಿಟೆಡ್ ಎಂಬುದು ತಡವಾಗಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ : Ira Khan : ಬಾಲಿವುಡ್ ಗೆ ಬರ್ತಾರೆ ಅಮೀರ್ ಖಾನ್ ಪುತ್ರಿ ಇರಾ ಖಾನ್‌

ಇದನ್ನೂ ಓದಿ : Radhika Pandit : ಅಪ್ಪು ನೆನಪು ಕಾಡುತ್ತಿದೆ ; ಹುಟ್ಟುಹಬ್ಬ ಬೇಡವೆಂದ ನಟಿ ರಾಧಿಕಾ ಪಂಡಿತ್

( Sonakshi Sinha lands in legal trouble, non bailable warrant issued against in a fraud case)

Comments are closed.