ಸೋಮವಾರ, ಏಪ್ರಿಲ್ 28, 2025
HomeeducationHijab or Education : ಹಿಜಾಬ್ ಬೇಕೋ ಪರೀಕ್ಷೆ ಬೇಕೋ, ಆಯ್ಕೆ ಮಕ್ಕಳದ್ದು : ಶಿಕ್ಷಣ...

Hijab or Education : ಹಿಜಾಬ್ ಬೇಕೋ ಪರೀಕ್ಷೆ ಬೇಕೋ, ಆಯ್ಕೆ ಮಕ್ಕಳದ್ದು : ಶಿಕ್ಷಣ ಸಚಿವ ಬಿ.ಸಿ.ನಾಗೇಶ್

- Advertisement -

ಬೆಂಗಳೂರು : ಹಿಜಾಬ್ ಪ್ರಕರಣ ಸದ್ಯ ತಣ್ಣಗಾಗಿದ್ದರೂ ಪರೀಕ್ಷೆಗೆ ಹಿಜಾಬ್ ಧರಿಸಿದ ಮಕ್ಕಳ ಕತೆಯೇನು ಎಂಬ ಆತಂಕ ಎಲ್ಲರನ್ನು ಕಾಡುತ್ತಲೇ ಇದೆ. ಸದ್ಯ ಹಿಜಾಬ್ ಧರಿಸೋದು ಬೇಡ ಯಥಾಸ್ಥಿತಿ ಕಾಪಾಡಿ ಎಂದು ಹೈಕೋರ್ಟ್ ಹೇಳಿದೆ. ಆದರೆ ಇದಕ್ಕೆ ಒಪ್ಪದ ಮಕ್ಕಳು ಕಾಲೇಜುಗಳಿಂದಲೇ ದೂರ ಉಳಿದಿದ್ದಾರೆ. ಹೀಗಾಗಿ ಪರೀಕ್ಷೆಯ ಕತೆಯೇನುಎಂಬ ಆತಂಕವೂ ಮನೆ ಮಾಡಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಬಿ.ಸಿ ನಾಗೇಶ್ ಸ್ಪಷ್ಟನೆ ನೀಡಿದ್ದು ( Hijab or Education) ಸರ್ಕಾರದ ಕಠಿಣ ನಿಯಮವನ್ನು ಮತ್ತೊಮ್ಮೆ ಪುನರುಚ್ಛರಿಸಿದ್ದಾರೆ.

ಕಾರವಾರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಹಿಜಾಬ್ (Hijab ) ವಾದ ಹಿನ್ನಲೆಯಲ್ಲಿ ಹೈಕೋರ್ಟ್ ಏನು ಆದೇಶ ಮಾಡುತ್ತೋ ಅದನ್ನು ಪಾಲಿಸಲೇ ಬೇಕು.‌ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ಒಂದೊಮ್ಮೆ ಹಿಜಾಬ್ ಕಾರಣಕ್ಕೆ ಅಥವಾ ಮತ್ಯಾವುದೇ ವಿಚಾರಕ್ಕೆ ಈ ಪರೀಕ್ಷೆಯಲ್ಲಿ ಗೈರಾದವರಿಗೆ ಮತ್ತೆ ಪರೀಕ್ಷೆ ಬರೆಯಲು ಅವಕಾಶ ಕೊಡುವುದಿಲ್ಲ ಎಂದಿದ್ದಾರೆ.

ಮತ್ತೊಮ್ಮೆ ಶಿಕ್ಷಣ ಇಲಾಖೆ ಯಾವಾಗ ಪರೀಕ್ಷೆ ಮಾಡುತ್ತೋ ಅವಾಗಲೇ ಆ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಬೇಕು. ಒಂದೊಮ್ಮೆ ಆ ವಿದ್ಯಾರ್ಥಿನಿಯರಿಗೆ ಪರೀಕ್ಷೆ ಮುಖ್ಯ ಎಂದಾದರೇ ಅವಾಗ ಯಾವ ನಿಯಮ ಜಾರಿಯಲ್ಲಿರುತ್ತೋ ಆ ನಿಗಮವನ್ನು ಪಾಲಿಸಬೇಕು ಎಂದು ಖಡಕ್ (Hijab ) ಎಚ್ಚರಿಕೆ ರವಾನಿಸಿದ್ದಾರೆ. ಮಕ್ಕಳ ಹಿಜಾಬ್ ಹೋರಾಟದ ಹಿಂದೆ ಸಂಘಟನೆಗಳು,ವಿಚಾರವಾದಿಗಳು ಇದ್ದಾರೆ ಎಂದು ಬಿ.ಸಿ.ನಾಗೇಶ್ ಆರೋಪಿಸಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ 20 ಸಾವಿರ ಶಾಲೆಯಲ್ಲಿ ಮಕ್ಕಳ ಆರಂಭಿಕ ಶಿಕ್ಷಣ‌ ಪರಿಚಯ ಮಾಡುತಿದ್ದೇವೆ. ಅಲ್ಲದೇ ಪಠ್ಯಗಳ ತಪ್ಪುಗಳನ್ನು ತಿದ್ದುವ ಕೆಲಸ ಮಾಡುತಿದ್ದೇವೆ ವಾರದಲ್ಲಿ ಶಿಕ್ಷಕರ ನೇಮಕಾತಿ ನೋಟಿಫಿಕೇಷನ್ ಹೊರಡಿಸುತ್ತೇವೆ. 15 ಸಾವಿರ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದಿದ್ದಾರೆ.

5 ಸಾವಿರ ಕಲ್ಯಾಣ ಕರ್ನಾಟಕ ,10 ಸಾವಿರ ಕರ್ನಾಟಕದಲ್ಲಿ ನೇಮಕ‌ ಮಾಡಲಾಗುವುದು ಕೋವಿಡ್ ಕಾರಣದಿಂದ ಶಾಲೆಗಳನ್ನು ಬಂದ್ ಮಾಡಿದ್ದರಿಂದ ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ಕಲಿಕಾ ಚೇತರಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಬಿ.ಸಿ.ನಾಗೇಶ್ ತಮ್ಮ ಇಲಾಖೆಯ ಬಗ್ಗೆಯೂ ಹಲವು ಮಾಹಿತಿ ನೀಡಿದ್ದಾರೆ.
ಸದ್ಯ ಹೈಕೋರ್ಟ್ ನ ತ್ರಿಸದಸ್ಯ ಪೀಠದಲ್ಲಿ ಹಿಜಾಬ್ (Hijab)‌ ವಿಚಾರಣೆ ಪೂರ್ಣಗೊಂಡಿದ್ದು ಹೈಕೋರ್ಟ್ ಆದೇಶವನ್ನು ಕಾಯ್ದಿರಿಸಿದೆ. ಈ ತಿಂಗಳಾಂತ್ಯಕ್ಕೆ ಹೈಕೋರ್ಟ್ ಹಿಜಾಬ್ ವಿಚಾರದಲ್ಲಿ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ.

ಇದನ್ನೂ ಓದಿ :  ಪರೀಕ್ಷೆ ಹೊತ್ತಲ್ಲಿ ಪೋಷಕರ ಪರದಾಟ: ಫೀಸ್ ಕಟ್ಟಿದ್ರೇ ಮಾತ್ರ ಹಾಲ್ ಟಿಕೇಟ್ ಎಂದ ಸ್ಕೂಲ್ ಗಳು

ಇದನ್ನೂ ಓದಿ : ಸಿಬಿಎಸ್‌ಇ ಟರ್ಮ್ 1 ಫಲಿತಾಂಶ‌ ಪ್ರಕಟ : ರಿಸಲ್ಟ್‌ ನೋಡಲು ಇಲ್ಲಿ ಕ್ಲಿಕ್‌ ಮಾಡಿ

( Hijab or education Choice Students says Education Minister BC Nagesh )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular