WhatsApp web ನ ಸುರಕ್ಷತೆಗಾಗಿ ಟ್ರಾಫಿಕ್‌ ಲೈಟ್‌! ಈ ಬ್ರೌಸರ್‌ ಎಕ್ಸಟೆಂನ್ಷನ್‌ ನ ಉಪಯೋಗ ನಿಮಗೆ ತಿಳಿದಿದೆಯೇ!

ಯಾರಿಗಾದರೂ ಟೆಕ್ಸ್ಟ್‌ ಸಂದೇಶ ಕಳುಹಿಸಲು WhatsApp ಒಂದು ಸುರಕ್ಷಿತ ಮಾರ್ಗ ಎನ್ನುವುದು ಈಗಾಗಲೇ ಗೊತ್ತಿರುವ ವಿಷಯ. ಇದರ ಎಂಡ್‌–ಟು–ಎಂಡ್‌ ಎನ್‌ಕ್ರಿಪ್ಷನ್‌ ಮೊಬೈಲ್‌ ಮತ್ತು ವೆಬ್‌ ವರ್ಷನ್‌ ಎರಡರಲ್ಲೂ ಕುಳುಹಿಸಿದ ಸಂದೇಶಗಳನ್ನು ಚಾಟ್‌ ಹಿಸ್ಟರಿಯಿಂದ ಬೇರೊಬ್ಬರು ತೆಗೆಯುವುದು ಬಹಳ ಕಷ್ಟ. ನೀವು ಇದು ಇಷ್ಟೇ ಸಾಕೆಂದುಕೊಂಡಿದ್ದೀರಾ, ಆದರೆ WhatsApp ಕೋಡ್‌ ವೆರಿಫೈ ಅನ್ನುವ ಹೊಸ ವೆಬ್‌ ಎಕ್ಸಟೆಂನ್ಷನ್‌ ಅನ್ನು ತನ್ನ ನೆಟ್‌ ಫೀಚರ್‌ನಲ್ಲಿ ಸೇರಿಸಿಕೊಂಡಿದೆ. ಇದು WhatsApp web ಸರ್ವೀಸ್‌ ಅನ್ನು ಟೆಕ್ಸ್ಟ್‌ ಮೆಸೇಜ್‌ ಮಾಡಲು ಹೆಚ್ಚಿನ ಸುರಕ್ಷತೆ ಒದಗಿಸುತ್ತಿದೆ. ಈ ಹೊಸದಾದ ಫಿಚರ್‌ ಕ್ರೋಮ್‌ ಅಲ್ಲಿ ಬ್ರೌಸರ್‌ ಎಕ್ಸಟೆಂನ್ಷನ್‌ ಎನ್ನುವ ಹೊಸ ಸೆಕ್ಯರಿಟಿ ಅಪ್ಡೇಟ್‌ ಆಗಿ ಬಂದಿದೆ.

ಕೋಡ್‌ ವೆರಿಫೈ ಎಕ್ಸಟೆಂನ್ಷನ್‌ ಹೇಳುವುದೇನೆಂದರೆ, “ಬೇರೆಯವರ ಬ್ರೌಸರ್‌ನಿಂದ WhatsAppನ ಕೋಡ್‌ ನ್ನು ತಿದ್ದಲು ಈ ರೀಯಲ್‌ ಟೈಮ್‌ ಥರ್ಡ್‌ ಪಾರ್ಟಿ ವೆರಿಫಿಕೇಷನ್‌ ಕೊಡುವುದಿಲ್ಲ” ಎಂದು ಹೇಳುತ್ತದೆ. ಅಂದರೆ ಸರಳವಾಗಿ ಹೇಳುವದಾದರೆ, ಈ ಕೋಡ್‌ ವೆರಿಫೈ ಎಕ್ಸಟೆಂನ್ಷನ್‌ ಒಮ್ಮೆ ಸ್ಕ್ಯಾನ್‌ ಮಾಡಿದ ಕ್ಯೂಆರ್‌ ಕೋಡ್‌, ಮತ್ತೊಂದು ಸೆಕ್ಯುರಿಟಿ ಯ ಹೊಸ ಲೇಯರ್‌ನ್ನು ಸೇರಿಸುತ್ತದೆ. ಸೆಕ್ಯರಿಟಿಯ ಸ್ಟೆಟಸ್‌ ಅನ್ನು ಸರಿಯಾದ ಸಮಯದಲ್ಲಿ ಅಪ್ಡೇಟ್‌ ಆಗುವಂತೆ ನೋಡಿಕೊಳ್ಳುತ್ತದೆ. ರಿಯಲ್‌ ಟೈಮ್‌ನಲ್ಲಿ ಬೆಳಗುವ ಬೆಳಕು(ಇಂಡಿಕೇಟರ್‌) ನೀವು ಸುರಕ್ಷಿತವಾಗಿದ್ದೀರೋ ಅಥವಾ ಇಲ್ಲವೋ ಎಂಬುದನ್ನು ತಿಳಿಸುತ್ತದೆ.

ಟ್ರಾಫಿಕ್‌ ಲೈಟ್‌ ನಂತೆಯೇ ಕೆಲಸ ಮಾಡುವ WhtsApp ವೆಬ್‌ ಕೋಡ್‌ ವೆರಿಫೈ:

ರಿಯಲ್‌ ಟೈಮ್‌ನಲ್ಲಿ ಉಪಯೋಗದಲ್ಲಿಯ WhatsApp ವೆಬ್‌ ಬ್ರೌಸರ್‌ ಪಬ್ಲಿಷ್‌ ಮಾಡಿದ ಹೇಷ್‌ ಕೋಡ್‌ ಅನ್ನು ಈ ಕೋಡ್‌ ವೆರಿಫೈ ಎಕ್ಷಟೆಂನ್ಷನ್‌ ಚೆಕ್‌ ಮಾಡುತ್ತದೆ. ಇದನ್ನು ಕ್ಲೌಡ್‌ ಫೆರ್‌ ನಿಭಾಯಿಸುತ್ತದೆ. ಬೇರೆ ಯಾರಾದರೂ ಎಕ್ಸಟೆಂನ್ಷನ್‌ ಅನ್ನು ಉಪಯೋಗಿಸಲು ನೋಡಿದರೆ ಇದು ಅಟೊಮೆಟಿಕ್‌ಆಗಿ WhatsApp Web ರನ್‌ ಆಗುತ್ತಿರುವ ಕೊಡ್‌ ನ ಜೊತೆಗೆ ಕಂಪೇರ್‌ ಮಾಡುತ್ತದೆ. ಇದು ಕ್ಲೌಡ್‌ಫ್ಲೇರ್‌ ಸರ್ವರ್‌ನಲ್ಲಿರುವ ಕೋಡ್‌ ಜೊತೆಗೆ WhatsApp ಸ್ವತಃ ಕಂಪೇರ್‌ ಮಾಡುತ್ತದೆ.

ಒಂದು ವೇಳೆ ಅದು ಕಂಪೇರ್‌ ಮಾಡಿದ ಕೋಡ್‌ ಮೊದಲಿನ ಕೊಡ್‌ ಜೊತೆಗೆ ಹೊಂದಿಕೆಯಾಗದಿದ್ದರೆ ಆಗ ಅದು ನಿಮ್ಮನ್ನು ಅಲರ್ಟ್‌ ಮಾಡುತ್ತದೆ. ಇವೆಲ್ಲವೂ ರಿಯಲ್‌ ಟೈಮ್‌ನಲ್ಲೇ ಆಗುವುದು.

ಇದನ್ನೂ ಓದಿ : Jio Live TV: ಜಿಯೋ ಲೈವ್ ಟಿವಿಯನ್ನು ಟಿವಿ, ಲ್ಯಾಪ್ ಟಾಪ್‌ನಲ್ಲಿ ನೋಡೋದು ಹೇಗೆ?

ವೆಬ್‌ ಬ್ರೌಸರ್‌ನಲ್ಲಿ ಪಿನ್‌ ಆದ ಇಂಡಿಕೇಟರ್‌ ಬೆಳಗುವುದರ ಮೂಲಕ ನೀವು ಅದರ ಸ್ಥಿತಿಯನ್ನು ನೋಡಬಹುದು. ನೀವು ಲಾಗ್‌ ಇನ್‌ ಆದಾಗ ಮತ್ತು ಎಲ್ಲವೂ ಸೇಫ್‌ ಆಗಿ ಇದ್ದಾಗ ಇದು ಹಸಿರು ಬಣ್ಣದಲ್ಲಿರುವುದು ಮತ್ತು ಒಂದುವೇಳೆ ಕೋಡ್‌ ಮಿಸ್‌ಮ್ಯಾಚ್‌ ಆದರೆ ಅಂದರೆ, ಬೇರೆ ಎಕ್ಷಟೆಂನ್ಷನಿಂದ ಅಥವಾ Appನಿಂದ ತೆರೆಯುತ್ತಿದ್ದರೆ ಆಗ ಕೋಡ್‌ ವೆರಿಫೈ ಇಂಡಿಕೇಟರ್‌ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಇಂತಹ ಸಮಯದಲ್ಲಿ ಯುಸರ್‌ ಪುನಃ ಲಾಗಿನ್‌ ಆಗಬಹುದು ಅಥವಾ ಹೆಚ್ಚಿನ ಸುರಕ್ಷತೆಗಾಗಿ ಮೊಬೈಲ್‌ ಆಪ್‌ ಬಳಸಬಹುದು.

ಇಂಡಿಕೇಟರ್‌ ಕೇಸರಿ(ಆರೆಂಜ್‌) ಬಣ್ಣದಲ್ಲಿದ್ದರೆ WhatApp web ನ ಟೈಮ್‌ ಮುಗಿದಿದೆ. ಅಥವಾ ಕೋಡ್‌ ವೆರಿಫೈ ಎಕ್ಸಟೆಂನ್ಷನ್‌ ಬೇರೆ ಎಕ್ಷಟೆಂನ್ಷನಿಂದ ಸ್ಥಗಿತಗೊಂಡಿದೆ ಎಂದರ್ಥ.
ನೀವು WhatsApp Web ಉಪಯೋಗಿಸುತ್ತಿದ್ದರೆ ಮತ್ತು ಅದರ ಸುರಕ್ಷತೆಯ ಬಗ್ಗೆ ಕಳಜಿ ವಹಿಸುತ್ತಿದರೆ, ಗೂಗಲ್‌ ಕ್ರೋಮ್‌, ಫೈರ್‌ಫಾಕ್ಸ್‌, ಮತ್ತು ಮೈಕ್ರೋಸಾಫ್ಟ್‌ ಎಡ್ಜ್‌ ಗಳಲ್ಲಿ ಕೋಡ್‌ ವೆರಿಫೈ ಎಕ್ಸಟೆಂನ್ಷನ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ನೀವು ಒಮ್ಮೆ ಕೋಡ್‌ ವೆರಿಫೈ ಎಕ್ಸಟೆಂನ್ಷ್‌ನ ಅನ್ನು ಇನಸ್ಟಾಲ್‌ ಮಾಡಿದ ಮೇಲೆ ಇದು ಆಟೋಮೆಟಿಕ್‌ ಆಗಿಯೇ ಫೈರ್‌ಫಾಕ್ಸ್‌ ಮತ್ತು ಎಡ್ಜ್‌ ಬ್ರೌಸರ್‌ಗಳಗೆ ಪಿನ್‌ ಆಗುವುದು. ಆದರೆ, ಕ್ರೋಮ್‌ ಬಳಕೆದಾರರು ಅವರೇ ಸ್ವತಃ ಪಿನ್‌ ಮಾಡಬೇಕಾಗಿದೆ.

ಇದನ್ನೂ ಓದಿ : Government Mobile Apps:: ಯಾರ ಕಿರಿಕಿರಿಯಿಲ್ಲದೇ ಪ್ರಯಾಣ ಮಾಡಲು ಸರ್ಕಾರದ ಈ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿ!

(WhatsApp Web new traffic light feature for security)

Comments are closed.