ಚಾರ್ಜರ್‌ನ(Charger for Smartphone) ಮುಖ್ಯ ಕೆಲಸವೇನು? ಫೋನಿನ ಬ್ಯಾಟರಿಗೆ ವಿದ್ಯುತ್ತ್‌ನ್ನು ಒದಗಿಸುವುದೇ ಅಲ್ಲವೇ? ಪ್ರತಿ ಚಾರ್ಜರ್ ಸಹ ವ್ಯಾಟ್ ಆಧಾರದ ಮೇಲೆಯೇ ಇರುತ್ತದೆ. ವ್ಯಾಟ್ ಎಂದರೆ ಫೋನ್‌ನ ಬ್ಯಾಟರಿ ಎಷ್ಟು ವೇಗವಾಗಿ ಚಾರ್ಜ್ ಆಗುತ್ತದೆ ಎಂಬುದಾಗಿದೆ. ಚಾರ್ಜರ್‌ನ ವ್ಯಾಟ್‌ಅನ್ನು ಕಂಡುಹಿಡಿಯುವುದು ಹೇಗೆಂದರೆ, ನಿಮ್ಮ ಚಾರ್ಜರ್ ಮೇಲೆ 5V-3A ಎಂದಿದ್ದರೆ, ನಿಮ್ಮ ಚಾರ್ಜರ್ 15W(ವ್ಯಾಟ್)ನದು ಎಂದರ್ಥ. ನಿಮ್ಮ ಸ್ಮಾರ್ಟ್‌ಫೋನ್‌ಗೆ ಚಾರ್ಜರ್ ಕೊಳ್ಳುವಾಗ ಗಮನಿಸಬೇಕಾದ ಹಲವು ಅಂಶಗಳಿವೆ. ಅದರಲ್ಲಿ ಕೆಲವು ಮುಖ್ಯವಾದದ್ದನ್ನು ನಾವು ನಿಮಗೆ ಹೇಳುತ್ತೇವೆ.
ನಿಮ್ಮ ಸ್ಮಾರ್ಟ್‌ಫೋನ್‌ಗೆ ಸರಿಯಾದ ಚಾರ್ಜರ್ ಆಯ್ದುಕೊಳ್ಳುಬೇಕಾದರೆ ನೆನಪಿಡಬೇಕಾದ ಅಂಶಗಳು:
ಬ್ಯಾಟರಿಯ ಕಾನ್ಫಿಗರೇಷನ್ ನೋಡಿ:
ಫೋನಿನ ಬ್ಯಾಟರಿ ಚಾರ್ಜ್ ಮಾಡಲು ಮಾಡಲು ಅನೇಕ ವೈರ್‌ಗಳ ಸರ್ಕಿಟ್, ಚಾರ್ಜಿಂಗ್ ಪೋರ್ಟ್, ಚಾರ್ಜರ್ ಕೂಲ್ ಆಗುವ ತಂತ್ರಾಂಶ, ವಿದ್ಯುತ್ತ್ ಹರಿವಿನ ರಕ್ಷಣೆ, ಸರಿಯಾದ ಬ್ಯಾಟರಿಯ ಸಂಯೋಜನೆ ಇವೆಲ್ಲವೂ ಆ ಚಾರ್ಜರ್‌ನಲ್ಲಿ ಅಡಕವಾಗಿರಬೇಕು. ಇಂತಹ ಸಂದರ್ಭದಲ್ಲಿ, 20 ವ್ಯಾಟ್ ಸಾಮರ್ಥ್ಯದ ಬ್ಯಾಟರಿಯನ್ನು 120 ವ್ಯಾಟ್ ಅಥವಾ 65 ವ್ಯಾಟ್ ಚಾರ್ಜರ್‌ನಿಂದ ಚಾರ್ಜ್ ಮಾಡಿದರೆ ನಿಮಗೆ ಅಂತಹ ವ್ಯತ್ಯಾಸವೇನೂ ಗೊತ್ತಾಗುವುದಿಲ್ಲ. ಏಕೆಂದರೆ ಕಂಪನಿಯವರು 20 ವ್ಯಾಟ್ ಮಾತ್ರ ಬೆಂಬಲಿಸುವಂತೆ ವಿನ್ಯಾಸಗೊಳಿಸಿರುತ್ತಾರೆ.
ಇದನ್ನೂ ಓದಿ: itel A49 ಅಗ್ಗದ ಬೆಲೆಯ ಸ್ಮಾರ್ಟ್‌ಫೋನ್! ಭಾರತದಲ್ಲಿ ಇದು ಕೇವಲ 6499 ರೂಪಾಯಿಗಳಿಗೆ
ಸ್ಮಾರ್ಟ್‌ಫೋನ್‌ನೊಂದಿಗಿನ ಚಾರ್ಜರ್ :
ಸ್ಮಾರ್ಟ್‌ಫೋನ್‌ನೊಂದಿಗೆ ಬಂದಿರುವ ಕಂಪನಿ ಚಾರ್ಜರ್ ಬೆಸ್ಟ್ ಚಾರ್ಜರ್ ಆಗಿದೆ. ನೀವು ಚಾರ್ಜರ್ ಇಲ್ಲದಿರುವ ಫೋನ್ ಖರೀದಿಸಿದ್ದರೆ ಆಗ ಕಂಪನಿ ಶಿಫಾರಸ್ಸು ಮಾಡಿದ ಚಾರ್ಜರ್ ಅನ್ನೇ ಆಯ್ದುಕೊಳ್ಳಿ. ಒಂದುವೇಳೆ ಚಾರ್ಜರ್ ಡ್ಯಾಮೇಜ್ ಆಗಿದ್ದರೆ ಉತ್ತಮ ಕಂಪನಿಯ ಚಾರ್ಜರ್ ಅನ್ನೇ ಆಯ್ದುಕೊಳ್ಳಬೇಕು ಅನ್ನುವುದನ್ನೇ ನೆನಪಿಟ್ಟುಕೊಳ್ಳಿ. ಅತೀ ವೇಗವಾಗಿ ಚಾರ್ಜ್ ಆಗುವ ತಂತ್ರಜ್ಞಾನದ ಕಡೆಗೆ ಅಷ್ಟಾಗಿ ಗಮನ ಹರಿಸದಿದ್ದರೆ ಇವತ್ತಿನ ದಿನಗಳಲ್ಲಿ ಯಾವುದೇ ಫೋನ್ ಆದರೂ ಮತ್ಯಾವುದೋ ಚಾರ್ಜರ್‌ನಿಂದ ಚಾರ್ಜ್ ಮಾಡಬಹುದಾಗಿದೆ.
ಸ್ಮಾರ್ಟ್‌ಫೋನ್ ಜೊತೆಗೆ ಚಾರ್ಜರ್ ಇಲ್ಲದಿದ್ದರೆ ಏನು ಮಾಡುವುದು?
ನೀವು ಚಾರ್ಜರ್ ನೀಡದ ಕಂಪನಿಯ ಸ್ಮಾರ್ಟ್‌ಫೋನ್ ಖರೀದಿಸಿದ್ದರೆ ಆಗ, ಕಂಪನಿ ಶಿಫಾರಸ್ಸುಮಾಡಿದ ಸಾಮರ್ಥ್ಯದ ಚಾರ್ಜರನ್ನೇ ಖರೀದಿಸಿ. ಅದರಿಂದ ನಿಮ್ಮ ಫೋನ್ ಅನ್ನು ಸರಿಯಾಗಿ ಚಾರ್ಜ್ ಮಾಡಬಹುದು. ಚಾರ್ಜರ್ ಹಾಳಾದರೆ ಇಲ್ಲವೇ ಒಡೆದುಹೋದರೆ ಆಗಲೂ ಸಹ ಉತ್ತಮ ಕಂಪನಿಯ ಚಾರ್ಜರ್ ಅನ್ನೇ ಖರೀದಿಸಿ ಲೋಕಲ್ ಚಾರ್ಜರ್‌ಗಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲಾದ್ದರಿಂದ ಪದೇ ಪದೇ ಚಾರ್ಜ್ ಮಾಡಬೇಕಾಗುತ್ತದೆ.
ವೇಗದ ಚಾರ್ಜಿಂಗ್ ಟೆಕ್ನಾಲಾಜಿ:
ವೇಗದ ಚಾರ್ಜಿಂಗ್ ಟೆಕ್ನಾಲಿಜಿಯಿಂದ ಫೋನಿನ ಬ್ಯಾಟರಿಗಳು ಬಹುಬೇಗ ಚಾರ್ಜ್ ಆಗುವುದು. ಆದರೆ, ಇದರಲ್ಲೂ ಕೆಲವು ಅನಾನುಕೂಲಗಳಿವೆ. ಈ ಫಾಸ್ಟ್ ಚಾರ್ಜಿಂಗ್ ಟೆಕ್ನಾಲಜಿಯಿಂದ ಬ್ಯಾಟರಿಯ ತಾಪಮಾನ ಹೆಚ್ಚಿ, ಬ್ಯಾಟರಿಯ ಆಯಸ್ಸು ಬೇಗ ಕಡಿಮೆಯಾಗುತ್ತದೆ. ಈ ಸಮಸ್ಯೆ ನಿವಾರಿಸಲು ಬಹಳ ಕಂಪನಿಗಳು ಸ್ಮಾರ್ಟ್‌ಫೋನ್‌ಗೆ 2 ಬ್ಯಾಟರಿಗಳನ್ನು ಅಳವಡಿಸಿರುತ್ತಾರೆ. ಎರಡು ಬ್ಯಾಟರಿಗಳಿರುವ ಸ್ಮಾರ್ಟ್‌ಫೋನ್‌ಗಳು ಯಾವುದೆಂದರೆ ಶಿಯೋಮಿ 11ಐ ಹೈಪರ್‌ಚಾರ್ಜ್, ಶಿಯೋಮಿ 11ಐ, ಒನ್‌ಪ್ಲಸ್ 9ಪ್ರೊ ಮತ್ತು ಸ್ಯಾಮಸಂಗ್ ಗ್ಯಾಲಕ್ಸಿ ಝೆಡ್ ಫೋಲ್ಡ್.
ಇದನ್ನೂ ಓದಿ: Google Mapನಲ್ಲಿ ನಿಮ್ಮ ಮನೆಯ ಅಡ್ರೆಸ್ ಬದಲಾಯಿಸಬಹುದು! ಹೇಗೆ ಗೊತ್ತೇ?
(Charger for Smartphone pick the right charger for smartphone)