The Gujarat Files : ಗುಜರಾತ್ ಫೈಲ್ಸ್ ತೆರೆಗೆ ತರುತ್ತೇನೆ : ಅಡ್ಡಿ ಪಡಿಸಲ್ಲ ಎಂದು ಮಾತು ಕೊಡಿ: ಮೋದಿಗೆ ಸವಾಲೆಸೆದ ನಿರ್ದೇಶಕ

ದಿ ಕಾಶ್ಮೀರಿ ಫೈಲ್ಸ್ (The Kashmir Files ) ಸಿನಿಮಾ ಜನಮನವನ್ನು ಗೆಲ್ಲುತ್ತಿದ್ದಂತೆ ಸಿನಿಮಾದ ಪರ ಮತ್ತು ವಿರೋಧ ದ ಚರ್ಚೆಗೆ ಜೋರಾಗಿದೆ. ಅದರಲ್ಲೂ ಗುಜರಾತ್ ಫೈಲ್ಸ್ (The Gujarat Files), ಗೋದ್ರಾ ಫೈಲ್ಸ್ ಎಲ್ಲಿದೆ ಎಂಬ ಪ್ರಶ್ನೆಗಳು ಬಲ ಪಡೆದುಕೊಂಡಿವೆ. ಈ ಮಧ್ಯೆ ಬಾಲಿವುಡ್ ನಿರ್ದೇಶಕರೊಬ್ಬರು ಪ್ರಧಾನಿ ಗೆ ಸವಾಲೆಸೆದಿದ್ದು, ಗುಜರಾತ್ ಫೈಲ್ಸ್ ತೆರೆಗೆ ತರುತ್ತೇನೆ.‌ ಇದನ್ನು ತಡೆಯುವ ಪ್ರಯತ್ನ ಮಾಡೋದಿಲ್ಲ ಎಂದು ಭರವಸೆ ನೀಡಿ ಎಂದು ನಿರ್ದೇಶಕರು ಮೋದಿಯವರಿಗೆ ಸವಾಲು ಹಾಕಿದ್ದಾರೆ. ಬಹುಭಾಷಾ ನಟ ಪ್ರಕಾಶ್ ರೈ ರಿಂದ ಆರಂಭಿಸಿ ಹಲವು ಜನರು ಗುಜರಾತ್ ಫೈಲ್ಸ್ ಯಾವಾಗ ತೆರೆಗೆ ? ತಾಕತ್ತಿದ್ದರೇ ಗೋದ್ರಾ ಫೈಲ್ಸ್ ತನ್ನಿ ಎಂದೆಲ್ಲ ಸವಾಲು ಹಾಕಿದ್ದರು.

ಅದರೆ ಈ ವಿಚಾರದಲ್ಲಿ ಒಂದು ಹೆಜ್ಜೆ ಮುಂದೇ ಹೋಗಿರೋ ಬಾಲಿವುಡ್ ನಿರ್ದೇಶಕ ವಿನೋದ್ ಕಾಫ್ರಿ, ನಾನು ಗುಜರಾತ್ ಫೈಲ್ಸ್ ನಿರ್ದೇಶನಕ್ಕೆ ಸಿದ್ದತೆ ಮಾಡಿಕೊಂಡಿದ್ದೇನೆ. ಇದಕ್ಕಾಗಿ‌ ನಿರ್ಮಾಪಕರ ಜೊತೆಗೂ ಮಾತನಾಡಿದ್ದೇನೆ. ಈ ಸಿನಿಮಾದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪಾತ್ರವನ್ನು ವಿವರವಾಗಿ ದಾಖಲಿಸಿತ್ತೇನೆ.ಆದರೆ ಈ ಸಿನಿಮಾವನ್ನು ತಡೆಯುವ ಪ್ರಯತ್ನ ಮಾಡೋದಿಲ್ಲ ಎಂದು ರಾಷ್ಟ್ರದ ಜನತೆಗೆ ಭರವಸೆ ನೀಡಲಿ ಎಂದು ವಿನೋದ್ ಮೋದಿಗೆ ಸವಾಲು ಹಾಕಿದ್ದಾರೆ.

ದಿ ಗುಜರಾತ್ ಫೈಲ್ಸ್ ಗಾಗಿ ನಾನು ಸಾಕಷ್ಟು ಅಧ್ಯಯನ ಮಾಡಿದ್ದೇನೆ. ಇದು ಕೇವಲ ಸತ್ಯ ಘಟನೆಗಳನ್ನೇ ಆಧರಿಸಿರುತ್ತದೆ. ನಾನು ಕೂಡ ಪ್ರಾಮಾಣಿಕವಾಗಿ ಈ ಸಿನಿಮಾ ಮಾಡುತ್ತೇನೆ. ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯ ನನಗೂ ಬೇಕು ಎಂದು ವಿನೋದ್ ಕಾಫ್ರಿ ಹೇಳಿದ್ದಾರೆ. ಮಾತ್ರವಲ್ಲ ಪ್ರಧಾನಿ ಮೋದಿ ಅನುಮತಿ ನೀಡಿದ್ರೆ ಆದಷ್ಟು ಬೇಗ ಸಿನಿಮಾ ಶೂಟಿಂಗ್ ಆರಂಭಿಸುತ್ತೇನೆ ಎಂದು ವಿನೋದ್ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಕಾಶ್ಮೀರಿ ಫೈಲ್ಸ್ ಗೆ ಸಖತ್ ರೆಸ್ಪಾನ್ಸ್ ಸಿಕ್ಕಿದ್ದು ಬಿಜೆಪಿ ನಾಯಕರು ಸಿನಿಮಾ ನೋಡುವಂತೆ ಜನರಲ್ಲಿ ಮನವಿ ‌ಮಾಡ್ತಿದ್ದಾರೆ. ಮಾತ್ರವಲ್ಲ ಫ್ರೀ ಸಿನಿಮಾ ವೀಕ್ಷಣೆಗೂ ವ್ಯವಸ್ಥೆ ಕಲ್ಪಿಸುತ್ತಿದ್ದಾರೆ. ಹೀಗಾಗಿ ಸಿನಿಮಾದ ಬಗ್ಗೆ ಸಾಕಷ್ಟು ಟೀಕೆಗಳು ಕೂಡ ವ್ಯಕ್ತವಾಗುತ್ತಿದೆ. ಅಲ್ಲದೇ ಗೋದ್ರಾ ಸೇರಿದಂತೆ ಇನ್ನಷ್ಟು ವಿಷ್ಯಗಳ ಬಗ್ಗೆ ಸಿನಿಮಾ ರಿಲೀಸ್ ಮಾಡಬೇಕೆಂಬ ಒತ್ತಡವೂ ವ್ಯಕ್ತವಾಗುತ್ತಿದೆ. ಇದೇ ಕಾರಣಕ್ಕೆ ನಿರ್ದೇಶಕ ವಿನೋದ್ ತಾವು ಗುಜರಾತ್ ಫೈಲ್ಸ್ ನಿರ್ಮಿಸೋದಾಗಿ ಘೋಷಿಸಿ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ :  ಮೈಮಾಟದಲ್ಲೇ ಮನಗೆದ್ದ ಮೇಘಾ ಗುಪ್ತಾ: ಇಲ್ಲಿದೆ ಹಾಟ್ ಪೋಟೋಶೂಟ್

ಇದನ್ನೂ ಓದಿ : ನಾನೇ ನೀನಗೀಗಾ ಎಂದ್ರು ನಟಿ ಅನಿತಾ ಭಟ್ : ಗಮನ ಸೆಳೆದಿದೆ ಇಂದಿರಾ ಹಾಡು

The Kashmir Files vs The Gujarat Files Director Challenge PM Modi

Comments are closed.