ಸೌತ್ ಹಾಗೂ ಬಾಲಿವುಡ್ ನಲ್ಲಿ ಸಖತ್ ಮಿಂಚಿದ ಬೆಡಗಿ ಹಾಗೂ ಬಹುಭಾಷಾ ಹಿರಿಯ ನಟ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ (Shruti Haasan ) ಏನು ಮಾಡಿದ್ರೂ ಒಂಥರಾ ಡಿಫರೆಂಟಾಗೇ ಮಾಡ್ತಾರೆ. ತಮ್ಮ ನಟನೆ ಗಿಂತ ಬೋಲ್ಡ್ ವರ್ತನೆ ಯಿಂದಲೇ ಫೇಮಸ್ ಆಗಿರೋ ನಟಿ ಯಾರಿಗೂ ಕ್ಯಾರೇ ಎನ್ನದ ವ್ಯಕ್ತಿತ್ವ. ತಮ್ಮ ಬದುಕಿನ ಬಗ್ಗೆ ಸೋಷಿಯಲ್ ಮೀಡಿಯಾದಲ್ಲೇ ಅಪ್ಡೇಟ್ ಕೊಡೋ ಶ್ರುತಿ ಬಗ್ಗೆ ಈಗ ಹೊಸತೊಂದು ಸುದ್ದಿ ಸದ್ದು ಮಾಡಿದೆ. ಇದಕ್ಕೆ ಅಧಿಕೃತ ಮುದ್ರೆಯೂ ಬಿದ್ದಿದ್ದು, ಬಯಲಾದ ಸಂಗತಿ ಮಾತ್ರ ಅಭಿಮಾನಿಗಳಿಗೆ ಬೇಸರ ತಂದಿದೆ.

ಸೌತ್ ಬೆಡಗಿ, ಸಲಾರ ಸುಂದರಿ ಶ್ರುತಿ ಹಾಸನ್ ಮದುವೆಯಾಗಿದ್ದಾರಂತೆ. ಇಂತಹದೊಂದು ಸುದ್ದಿ ಕಳೆದ ಎರಡು ವರ್ಷಗಳಿಂದ ಹರಿದಾಡುತ್ತಲೇ ಇತ್ತು. ಆದರೆ ಇದಕ್ಕೆ ಶ್ರುತಿ ಯಾವ ರೀತಿಯಲ್ಲೂ ಪ್ರತಿಕ್ರಿಯೆ ನೀಡಿರಲಿಲ್ಲ. ಈ ಮೊದಲು ಶ್ರುತಿ (Shruti Haasan) ಮೈಕೆಲ್ ಕೊರ್ಸೆಲ್ ಎಂಬಾತನ ಜೊತೆ ಡೇಟಿಂಗ್ ನಡೆಸುತ್ತಿದ್ದರು. ಆದರೆ ಅದ್ಯಾಕೋ ಗೊತ್ತಿಲ್ಲ ಸಂಬಂಧ ಇದ್ದಕ್ಕಿದ್ದಂತೆ ಮುರಿದು ಬಿದ್ದಿತ್ತು. ಲಾಸ್ ಎಂಜಲೀಸ್ ಮೂಲದ ಮೈಕೆಲ್ ಕೋರ್ಸ್ ಗೂ ಶ್ರುತಿಗೂ ಬ್ರೇಕ್ ಅಪ್ ಆದ ಬಳಿಕ ಕೆಲಕಾಲ ಶ್ರುತಿ ಖಿನ್ನತೆಗೂ ಗುರಿಯಾಗಿದ್ದರು. ಇದಾದ ಬಳಿಕ ಚೇತರಿಸಿಕೊಂಡ ಶ್ರುತಿ ಶಂತನು ಹಜಾರಿಕಾ ಜೊತೆ ಬಹಿರಂಗವಾಗಿಯೇ ಓಡಾಡಿಕೊಂಡಿದ್ದಾರೆ

ಅಷ್ಟೇ ಅಲ್ಲ ಕಳೆದ ಕೆಲ ವರ್ಷಗಳಿಂದ ಈ ಜೋಡಿ ಡೇಟಿಂಗ್ ಮಾಡ್ತಿರೋದಾಗಿ ಹೇಳಿಕೊಂಡಿತ್ತು. ಈಗ ಇದೇ ಶ್ರುತಿ (Shruti Haasan) ಬಾಯ್ ಪ್ರೆಂಡ್ ಹಾಗೂ ಕಲಾವಿದ ಶಂತನು ಹಜಾರಿಕಾ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಾವು ಶ್ರುತಿಯೊಂದಿಗೆ ಮದುವೆಯಾಗಿರುವುದಾಗಿ ಹೇಳಿಕೊಂಡಿದ್ದಾರೆ. ಹಲವು ವರ್ಷಗಳಿಂದ ನಾವು ಒಟ್ಟಿಗೆ ಇದ್ದೇವೆ. ನಮ್ಮ ಬಾಂಡಿಂಗ್ ಸಹ ಉತ್ತಮವಾಗಿದೆ. ಮದುವೆ ಆದ ನಂತರ ನಮ್ಮ ಸಂಬಂಧ ಇನ್ನಷ್ಟು ಗಟ್ಟಿಯಾಗಿದೆ.ಪರಸ್ಪರ ಅರ್ಥ ಮಾಡಿಕೊಂಡು ಬದುಕಲು ನಮಗೆ ಈ ಮದುವೆ ಅವಕಾಶ ಮಾಡಿಕೊಟ್ಟಿದೆ. ಮುಂದೇಯೂ ಹೀಗೆ ಸಂತೋಷದಿಂದ ಕಳೆಯಲು ನಿರ್ಧರಿಸಿದ್ದೇವೆ ಎಂದಿದ್ದಾರೆ.

ಆದರೆ ಈ ಬಗ್ಗೆ ಶ್ರುತಿ ಹಾಸನ್ ಮಾತ್ರ ಯಾವುದೇ ಖಚಿತ ಮಾಹಿತಿ ನೀಡಿಲ್ಲ. ಚಿತ್ರರಂಗಕ್ಕೆ ಬಂದ ಮೇಲೆ ತಂದೆಯ ಹೆಸರನ್ನು ಬಳಸದೇ ಬೆಳೆಯಬೇಕೆಂಬ ಕನಸು ಹೊತ್ತು ಸಾಧಿಸಿದ ಶ್ರುತಿ ಹಾಸನ್ ಸೋಷಿಯಲ್ ಮೀಡಿಯಾದಲ್ಲೂ ಸಖತ್ ಫೇಮಸ್ ಆಗಿದ್ದಾರೆ. ಹೀಗಿದ್ದರೂ ಶ್ರುತಿ ತಮ್ಮ ಮದುವೆ ವಿಚಾರ ಮುಚ್ಚಿಟ್ಟಿರೋದು ಅಭಿಮಾನಿಗಳಿಗೆ ದುಃಖ ಹಾಗೂ ಬೇಸರ ತಂದಿದೆ.
ಇದನ್ನೂ ಓದಿ : misunderstood hero : ಬಾಲಿವುಡ್ ನಲ್ಲಿ ಬಯೋಪಿಕ್ ಪರ್ವ: ತೆರೆಗೆ ಬರಲಿದೆ ವೀರ ಸಾರ್ವಕರ್ ಲೈಫ್ ಸ್ಟೋರಿ
ಇದನ್ನೂ ಓದಿ : ಆರ್‌ಆರ್‌ಆರ್‌ಗಾಗಿ ಬಲಿಯಾಗುತ್ತಾ ಜೇಮ್ಸ್ ಚಿತ್ರ : ಖಡಕ್ ಎಚ್ಚರಿಕೆ ಕೊಟ್ಟ ಕರವೇ
( Kamal Haasan Daughter Shruti Haasan secret marriage)