ಹಿಂದೂಯೇತರರಿಗೆ ವ್ಯಾಪಾರ ಅವಕಾಶ ಬೇಡ : ಧಾರ್ಮಿಕ ದತ್ತಿ ಇಲಾಖೆ ಮೊರೆ ಹೋದ ಸಂಘಟನೆಗಳು

ಬೆಂಗಳೂರು : ಸದ್ಯ ಹಿಜಾಬ್ ಬಳಿಕ ರಾಜ್ಯದಲ್ಲಿ ಸದ್ದು ಮಾಡ್ತಿರೋ ಇನ್ನೊಂದು ವಿವಾದ ದೇವಾಲಯದ ಜಾತ್ರೆ ಉತ್ಸವಗಳಲ್ಲಿ ಹಿಂದೂಯೇತರರಿಗೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸಬಾರದು ಎಂಬುದು. ಉಡುಪಿಯಲ್ಲಿ ಆರಂಭವಾದ ಈ ವಿವಾದ ಈಗ ರಾಜ್ಯದ ಎಲ್ಲೆಡೆ ವ್ಯಾಪಿಸುತ್ತಿದೆ. ಈ ಮಧ್ಯೆ ಮುಜರಾಯಿ ಇಲಾಖೆಗಳಲ್ಲಿ ಹಿಂದೂಯೇತರರಿಗೆ ಅಂಗಡಿ ಮುಗ್ಗಟ್ಟು ನೀಡದಂತೆ ಹಿಂದೂ ಜನಜಾಗೃತಿ ಸಮಿತಿ ( Hindu jana jagruthi samiti) ಮುಜರಾಯಿ ಇಲಾಖೆಗೆ ಮನವಿ ಸಲ್ಲಿಸಿದೆ.

ಮುಜರಾಯಿ ಇಲಾಖೆ‌ ಆಯುಕ್ತೆ ರೋಹಿಣಿ ಸಿಂಧೂರಿಯವರನ್ನು ಭೇಟಿ ಮಾಡಿದ ಹಿಂದೂ ಜನಜಾಗೃತಿ ಸಮಿತಿ ಸದಸ್ಯರು ಹಿಂದೂ ದೇವಾಲಯಗಳು ಧಾರ್ಮಿಕ ಶ್ರದ್ಧಾ ಕೇಂದ್ರಗಳಾಗಿದೆ. ಹಿಂದೂಯೇತರರು ಅಂಗಡಿ ಮುಗ್ಗಟ್ಟುಗಳ ಮೂಲಕ ಕಾನೂನು ಬಾಹಿರ ವ್ಯವಹಾರ ಮಾಡುತ್ತಿದ್ದಾರೆ.ಧಾರ್ಮಿಕ ದತ್ತಿ ಇಲಾಖೆ‌ ಕಾಯಿದೆ- 1997 ಕ್ಕೆ ವಿರುದ್ಧವಾಗಿದೆ. ಕಾಯಿದೆಯ ಕಲಂ29(8) (12) ರ ಪ್ರಕಾರ ಹಿಂದೂಯೇತರರಿಗೆ ನೀಡಬಾರದೆಂಬ ಉಲ್ಲೇಖ ಇದೆ.

ಸರ್ಕಾರಿ ಆದೇಶ ಉಲ್ಲಂಘಿಸಿ ದಶಕಗಳಿಂದ ಹಿಂದೂಯೇತರರಿಗೆ ವ್ಯವಹಾರಕ್ಕೆ ಅವಕಾಶ ನೀಡಲಾಗಿದೆ. ಅಲ್ಲದೆ ಜಾತ್ರೆ ಸಂದರ್ಭಗಳಲ್ಲಿ ಅಂಗಡಿ ತೆರೆಯಲು ಅವಕಾಶ ನೀಡಲಾಗಿದೆ. ಹೀಗಾಗಿ ಇನ್ಮುಂದೆ ಯಾವುದೇ ಕಾರಣಕ್ಕೂ ಅನ್ಯಕೋಮಿನವರಿಗೆ ವ್ಯಾಪಾರಕ್ಕೆ ಅವಕಾಶ ಕೂಡಲೇ ಹಿಂದೂಯೇತರರ ಅಂಗಡಿ ತೆರೆವು ಗೊಳಿಸಬೇಕು ಎಂದು ಆಯುಕ್ತರಿಗೆ ಹಿಂದೂ ಜನಜಾಗೃತಿ ಸಮಿತಿ ( Hindu jana jagruthi samiti) ವಕ್ತಾರ ಮೋಹನಗೌಡ್ ಮನವಿ ಸಲ್ಲಿಸಿದ್ದಾರೆ.

ಈ ಮಧ್ಯೆ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಎಲ್ಲಾ ದೇವಸ್ಥಾನಗಳಲ್ಲೂ ಜಾತ್ರಾ ಮಹೋತ್ಸವದಲ್ಲಿ ಅಂಗಡಿ, ಮುಂಗಟ್ಟು ಹಾಗೂ ಟೆಂಡರ್ ಪ್ರಕ್ರಿಯೆಯಲ್ಲಿ ಹಿಂದೂಯೇತರರಿಗೆ ಅವಕಾಶ ನೀಡದಂತೆ ವಿಶ್ವ ಹಿಂದೂ ಪರಿಷತ್ ಪ್ರಾಂತ ಸಂಘಟನಾ ಕಾರ್ಯದರ್ಶಿ ಬಸವರಾಜ್ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಇನ್ನೊಂದೆಡೆ ಬೆಳಗಾವಿಯಲ್ಲಿ ಮಾತನಾಡಿದ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಸವದತ್ತಿ ಎಲ್ಲಮ್ಮ ದೇವಾಲಯದ ಬಳಿಯೂ ಅನ್ಯಕೋಮಿನವರು ಅಂಗಡಿ ಮುಂಗಟ್ಟುಗಳನ್ನು ಹೊಂದಿದ್ದಾರೆ. ಇದನ್ನು ತೆರವುಗೊಳಿಸಲು ಕಾಲಾವಕಾಶ ನೀಡುತ್ತೇವೆ. ಆದರೆ ಒಂದೊಮ್ಮೆ ಅವಧಿ ಮುಗಿಯುವವರೆಗೂ ಅಂಗಡಿ ತೆರವುಗೊಳಿಸದೇ ಹೋದಲ್ಲಿ ಮುಂದಿನ ದಿನದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಇನ್ನು ಉಡುಪಿಯ ನಂದಿಕೇಶ್ವರ, ನೆಲಮಂಗಲದ ವೀರಭದ್ರೇಶ್ವರ ಸ್ವಾಮೀ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಈ ನಿಷೇಧ ವಿಸ್ತರಣೆಯಾಗುತ್ತಿದ್ದು, ಮುಂದಿನ ದಿನದಲ್ಲಿ ಈ ನಿಷೇಧದ ವ್ಯಾಪ್ತಿ ಮತ್ತಷ್ಟು ವಿಸ್ತಾರಗೊಂಡು ಇತರ ಜಿಲ್ಲೆಗಳಿಗೂ ಹರಡಲಿದ್ದು, ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಹಿಜಾಬ್ ಬಳಿಕ ಈಗ ವ್ಯಾಪಾರದಲ್ಲಿ ಧರ್ಮದಂಗಲ್ ಜೋರಾಗಿದೆ.

ಇದನ್ನೂ ಓದಿ : ಆಟವಾಡುತ್ತಿದ್ದಾಗ ಘೋರ ದುರಂತ : ಇದ್ದೊಬ್ಬ ಮಗನನ್ನು ಕಳೆದುಕೊಂಡ ಮಲ್ಯಾಡಿಯ ದಂಪತಿ, ತೆಲಂಗಾಣ ಸರಕಾರದ ನಿರ್ಲಕ್ಷ್ಯಕ್ಕೆ ಹಿಡಿಶಾಪ

ಇದನ್ನೂ ಓದಿ : ಶಿವಮೊಗ್ಗದ ಹಿಂದೂ ಹರ್ಷ ಕೊಲೆ ಪ್ರಕರಣ : NIA ತನಿಖೆ

Hindu jana jagruthi samiti request rohini sindhuri to not give permission for non- hindus to open shops near temples

Comments are closed.