ತುಮಕೂರು : 25 ವರ್ಷದ ಯುವತಿಯೋರ್ವಳನ್ನು ಮದುವೆಯಾಗಿ ರಾಜ್ಯದಾದ್ಯಂತ ಬಾರೀ ಸುದ್ದಿಯಾಗಿದ್ದ ತುಮಕೂರಿನ (tumkur) ಶಂಕರಣ್ಣ (Shankaranna) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗ ಹೋಬಳಿಯಲ್ಲಿನ ಜಮೀನಿನಲ್ಲಿ ಶಂಕರಣ್ಣ ಅವರ ಮೃತದೇಹ ಪತ್ತೆಯಾಗಿದೆ.
ಸಂತೆಮಾವತ್ತೂರು ಗ್ರಾಮದ ನಿವಾಸಿಯಾಗಿರುವ 25 ವರ್ಷ ಪ್ರಾಯದ ಮೇಘನಾಗೆ ಮದುವೆಯಾಗಿತ್ತು. ಆದರೆ ಗಂಡ ನಾಪ್ತೆಯಾಗಿದ್ದ ಕಾರಣದಿಂದಾಗಿ ಮೇಘನಾ 45 ವರ್ಷ ಪ್ರಾಯದ ರೈತ ಶಂಕರಣ್ಣನ ಬಳಿಯಲ್ಲಿ ತನ್ನನ್ನು ಮದುವೆಯಾಗುವಂತೆ ಮನವಿ ಮಾಡಿಕೊಂಡಿದ್ದರು.
ಕೊನೆಗೆ ಮೇಘನಾ ಅವರನ್ನು ಮದುವೆಯಾಗಲು ಒಪ್ಪಿದ್ದ ಶಂಕರಣ್ಣ ಗ್ರಾಮದಲ್ಲಿ ಸರಳವಾಗಿ ವಿವಾಹವಾಗಿದ್ದರು. ಇವರಿಬ್ಬರ ಮದುವೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಆದರೆ ಮದುವೆಯಾದ ಐದು ತಿಂಗಳಲ್ಲಿಯೇ ಶಂಕರಣ್ಣ ಬಾರದ ಲೋಕಕ್ಕೆ ಪಯಣಿಸಿದ್ದಾರೆ.
ಶಂಕರಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. ಪೊಲೀಸರು ಸ್ಥಳಕ್ಕೆ ಭೇಟಿಯನ್ನು ನೀಡಿದ್ದು, ಪರಿಶೀಲನೆಯನ್ನು ನಡೆಸುತ್ತಿದ್ದಾರೆ.
ಇದನ್ನೂ ಓದಿ : ಸಿದ್ಧಗಂಗಾಶ್ರೀಗಳಿಗೆ ಭಾರತ ರತ್ನ: ಶಾ ಭೇಟಿ ಯಿಂದ ಮತ್ತೆ ಗರಿಗೆದರಿದ ನೀರಿಕ್ಷೆ
ಇದನ್ನೂ ಓದಿ : ನಿಯಮ ಮೀರಿ ಭೂಮಿ ಮಂಜೂರು : ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿ.ಎಸ್.ಯಡಿಯೂರಪ್ಪ
(45 old man Shankaranna commits suicide who Marriage with 25 old lady Meghana in tumkur)