Siddaganga Swamiji : ಸಿದ್ಧಗಂಗಾಶ್ರೀಗಳಿಗೆ ಭಾರತ ರತ್ನ: ಶಾ ಭೇಟಿ ಯಿಂದ ಮತ್ತೆ ಗರಿಗೆದರಿದ ನೀರಿಕ್ಷೆ

ಬೆಂಗಳೂರು : ಏಪ್ರಿಲ್ 1 ರಂದು ರಾಜ್ಯಕ್ಕೆ ಬಿಜೆಪಿ ಹೈಕಮಾಂಡ್ ಹಾಗೂ ಕೇಂದ್ರ ಗೃಹ ಸಚಿವ‌ ಅಮಿತ್ ಶಾ ಭೇಟಿ ( Amith Sha) ನೀಡಲಿದ್ದಾರೆ. ತುಮಕೂರಿನ ಸಿದ್ಧಗಂಗಾ ಮಠದಲ್ಲಿ ನಡೆಯಲಿರುವತ್ರೀವಿಧ ದಾಸೋಹಿ ಸಿದ್ಧ ಗಂಗಾ ಶ್ರೀ ಶಿವಕುಮಾರ ಮಹಾ ಸ್ವಾಮಿಗಳ ಜಯಂತ್ಯುತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಮಿತ್ ಶಾ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಆಗಮಿಸುವ ಸುದ್ದಿ ಹೊರಬೀಳುತ್ತಿದ್ದಂತೆ ಸಿದ್ಧಗಂಗಾ ಶ್ರೀಗಳಿಗೆ (Siddaganga Swamiji ) ಭಾರತ ರತ್ನ ಗೌರವ ನೀಡಬೇಕೆಂಬ ಕೂಗು ಮತ್ತೊಮ್ಮೆ ಧ್ವನಿಸಿದೆ.

ಈ ಹಿಂದೆಯೂ ಕೇಂದ್ರ ಸರ್ಕಾರ ಸಿದ್ಧಗಂಗಾಶ್ರೀಗಳಿಗೆ ಭಾರತ ರತ್ನ ನೀಡಬೇಕೆಂಬ ಕೂಗು ತೀವ್ರಗೊಂಡಿತ್ತು.‌ಆದರೆ ಕೇಂದ್ರ ಸರ್ಕಾರ ಭಾರತ ರತ್ನ‌ ನೀಡುವ ಮನಸ್ಸು ಮಾಡಿರಲಿಲ್ಲ. ಈಗ ಅಮಿತ್ ಶಾ ಆಗಮನದಿಂದ ಈ ಪ್ರಸ್ತಾಪ ಹಾಗೂ ಬೇಡಿಕೆ ಮತ್ತೆ ಜೀವಪಡೆದುಕೊಂಡಿದೆ. ಇನ್ನೂ ಅಮಿತ್ ಶಾ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡೋ ಹಿನ್ನೆಲೆಯಲ್ಲಿ ಇಂದು ತುಮಕೂರಿಗೆ ಮಾಜಿ ಸಿಎಂ ಯಡಿಯೂರಪ್ಪ ಭೇಟಿ ನೀಡಿದ್ದು, ಸ್ಥಳೀಯ ಶಾಸಕರು ಸೇರಿದಂತೆ ಗಣ್ಯರ ಜೊತೆ ಸಭೆ ನಡೆಸಿ ಕಾರ್ಯಕ್ರಮದ ರೂಪುರೇಷೆ ಬಗ್ಗೆ ಚರ್ಚಿಸಿದ್ದಾರೆ.

ಈ ವೇಳೆ ಭಾರತ ರತ್ನ ಗೌರವ ಹಾಗೂ ಅಮಿತ್ ಶಾ ಕಾರ್ಯಕ್ರಮದ ಬಗ್ಗೆ ಪ್ರತಿಕ್ರಿಯಿಸಿದ ಬಿಎಸ್ವೈ, ಏಪ್ರಿಲ್ 1 ರಂದು ಅಮಿತ್ ಶಾ ತುಮಕೂರಿಗೆ ಬರ್ತಿದ್ದಾರೆ. ಗದ್ದುಗೆ ದರ್ಶನ ಪಡೆದ ಬಳಿಕ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ. ಎರಡು ಮೂರು ಲಕ್ಷ ಜನರು ಸಮಾರಂಭದಲ್ಲಿ ಭಾಗಿಯಾಗೋ ನೀರಿಕ್ಷೆ ಇದೆ. ಗೃಹ ಸಚಿವರಾಗಿ ಬಂದು ಇಷ್ಟು ದೊಡ್ಡ ಸಭೆ ಯನ್ನು ಉದ್ದೇಶಿಸಿ ಮಾತನಾಡೋದು ತುಂಬ ಪ್ರಮುಖವಾಗುತ್ತದೆ. ಹೀಗೆ ಬಂದಾಗಲೇ ಅಮಿತ್ ಶಾ ಅವರ ಬಳಿ ಭಾರತ ರತ್ನದ ವಿಚಾರ ಪ್ರಸ್ತಾಪಿಸುತ್ತೇನೆ ಅವರೇನು ಹೇಳುತ್ತಾರೆ ನೋಡುತ್ತೇನೆ ಎಂದು ಬಿಎಸ್ವೈ ಭಕ್ತರಿಗೆ ಭರವಸೆ ನೀಡಿದ್ದಾರೆ.

ಇನ್ನೊಂದೆಡೆ ಕಾರ್ಯಕ್ರಮದ ಬಗ್ಗೆ ಸಿದ್ಧಗಂಗಾ ಮಠದ ಸಿದ್ದಲಿಂಗಸ್ವಾಮೀಜಿ ಮಾಹಿತಿ ನೀಡಿದ್ದು, ಏಪ್ರಿಲ್ 1 ರಂದು ಸಂಜೆ ಹಂಸಲೇಖ ಹಾಗೂ ವಿಜಯ್ ಪ್ರಕಾಶ್ ರಿಂದ ಬಸವ ಭಾರತ ಸಂಗೀತ ಕಾರ್ಯಕ್ರಮ ನೆರವೇರಲಿದ್ದು, 100 ಜನ ಗಾಯಕರು ಹಾಗೂ 150 ಕಲಾವಿದರು ಭಾಗಿಯಾಗಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಅಲ್ಲದೇ ಯಾವತ್ತೂ ಪ್ರಶಸ್ತಿಯನ್ನು ಕೇಳಿಪಡೆದುಕೊಳ್ಳಬಾರದು. ಸಿದ್ಧಗಂಗಾಶ್ರೀಗಳಿಗೆ ಭಾರತ ರತ್ನ ನೀಡಿ ಎಂದು ಕೇಳಬಾರದು. ಕೇಳದೇ ಬಂದ್ರೇ ಅಮೃತಕ್ಕೆ ಸಮಾನ.‌ ಕೇಳಿ ಬಂದ್ರೇ ಅದು ವಿಷಕ್ಕೆ ಸಮ ಎಂದು ಸಿದ್ಧಲಿಂಗಸ್ವಾಮಿ ಸ್ವಾಮೀಜಿ ಭಕ್ತರಿಗೆ ಹೇಳಿದ್ದಾರೆ. ಆದರೆ ಮೂಲಗಳ ಮಾಹಿತಿ ಪ್ರಕಾರ 2023 ರ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ರಾಜ್ಯ ಸರ್ಕಾರ ಅಮಿತ್ ಶಾ ಮೂಲಕ ಭಾರತ‌ರತ್ನ ಪ್ರಶಸ್ತಿ ಘೋಷಣೆಗೆ ಕೇಂದ್ರದ ಮೇಲೆ ಒತ್ತಡ ಹೇರಲು ತಂತ್ರ ನಡೆಸಿದೆ ಎನ್ನಲಾಗಿದೆ. ಹೀಗಾಗಿ ಏಪ್ರಿಲ್ 1 ರಂದು ಸಿದ್ಧಗಂಗಾ ಹಿರಿಯ ಶ್ರೀ ಗಳಿಗೆ ಭಾರತ ರತ್ನ ಘೋಷಣೆಯಾಗೋ ಸಾಧ್ಯತೆ ಇದೆ.

ಇದನ್ನೂ ಓದಿ : ನಿಯಮ ಮೀರಿ ಭೂಮಿ ಮಂಜೂರು : ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿ.ಎಸ್.ಯಡಿಯೂರಪ್ಪ

ಇದನ್ನೂ ಓದಿ : ಅನುಕಂಪವೇ ಸುಮಲತಾ ಗೆ ಅಸ್ತ್ರ : ಮತ್ತೆ ಟಾಕ್ ಫೈಟ್ ಗೆ ನಾಂದಿಹಾಡಿದ ನಿಖಿಲ್ ಕುಮಾರಸ್ವಾಮಿ

Siddaganga Swamiji is Bharat Ratna, Amith Sha Visit Tumkur

Comments are closed.