ಭಾರತೀಯ ಚಿತ್ರರಂಗದಲ್ಲಿಯೇ ಹೊಸ ಇತಿಹಾಸವನ್ನು ಸೃಷ್ಟಿಸಿದ್ದ ಕೆಜಿಎಫ್ ಅನ್ನೋ ಸಿನಿಮಾ ಇದೀಗ ಮತ್ತೊಂದು ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಕನ್ನಡದ ನಟ ರಾಕಿಂಗ್ ಸ್ಟಾರ್ ಯಶ್ ನಟನೆಯ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಕೆಜಿಎಫ್ ಚಾಫ್ಟರ್ 2 ಸಿನಿಮಾ ( KGF Chapter 2 Release) ವಿಶ್ವದಾದ್ಯಂತ ಗ್ರ್ಯಾಂಡ್ ರಿಲೀಸ್ ಆಗಿದ್ದು, ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಇನ್ನೊಂದೆಡೆಯಲ್ಲಿ ಚಿತ್ರ ಮಂದಿರಗಳಲ್ಲಿ ಸಿನಿಮಾದ ಟಿಕೆಟ್ ಸೋಲ್ಡ್‌ಔಟ್ ಆಗಿದೆ.

ಕರ್ನಾಟಕದಲ್ಲಿ ಕೆಜಿಎಫ್ (KGF 2) ಸಿನಿಮಾ ಸುಮಾರು 550 ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿದ್ದು, 3000 ಶೋಗಳು ನಡೆಯುವ ಸಾಧ್ಯತೆಯಿದೆ. ಇನ್ನು ಬೆಂಗಳೂರಲ್ಲೇ ಬರೋಬ್ಬರಿ 1000 ಕ್ಕೂ ಹೆಚ್ಚು ಶೋಗಳು ನಡೆಯಲಿವೆ. ಇನ್ನು ಭಾರತದಲ್ಲಿ ಒಟ್ಟು 6000 ಸ್ಕ್ರೀನ್‌ಗಳಲ್ಲಿ ಕೆಜಿಎಫ್ ಸಿನಿಮಾ ತೆರೆ ಕಾಣಲಿದ್ದು, ಜಗತ್ತಿನಾದ್ಯಂತ ಬರೊಬ್ಬರಿ 10000ಕ್ಕೂ ಅಧಿಕ ಮಂದಿರಗಳಲ್ಲಿ ಸಿನಿಮಾ ತೆರೆ ಕಾಣಲಿದೆ. ಇನ್ನು ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ 1000, ಕೇರಳದಲ್ಲಿ 400 ಹಾಗೂ ತಮಿಳುನಾಡಿನಲ್ಲಿ350 ಸ್ಕ್ರೀನ್‌ಗಳಲ್ಲಿ ಸಿನಿಮಾ ತೆರೆ ಕಂಡಿದೆ.

KGF Chapter 2 : 70 ದೇಶ, 10000 ಸ್ಕ್ರೀನ್ : ಕೆಜಿಎಫ್ ಹೊಸ ಇತಿಹಾಸ
ಭಾರತೀಯ ಸಿನಿಮಾವೊಂದು ವಿಶ್ವದಾದ್ಯಂತ ಅತೀ ಹೆಚ್ಚು ಸ್ಕ್ರೀನ್‌ಗಳಲ್ಲಿ ತೆರೆ ಕಂಡಿರುವುದು ಇದೇ ಮೊದಲು. ವಿಶ್ವದಾದ್ಯಂತ ಬರೋಬ್ಬರಿ ಎಪ್ಪತ್ತಕ್ಕೂ ಅಧಿಕ ದೇಶಗಳಲ್ಲಿ ಕೆಜಿಎಫ್ ಸಿನಿಮಾ ತೆರೆ ಕಂಡಿದೆ. ಅಲ್ಲದೇ ಮಧ್ಯರಾತ್ರಿಯೇ ಹಲವು ಕಡೆಗಳಲ್ಲಿ ಸಿನಿಮಾ ರಿಲೀಸ್ ಆಗಿದೆ. ಅದ್ರಲ್ಲೂ ೫ ಭಾಷೆಗಳಲ್ಲಿ ೭೦ ದೇಶಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಎಲ್ಲೆಡೆಯಲ್ಲಿಯೂ ಸಿನಿ ಪ್ರಿಯರಿಂದ ಉತ್ತಮ ರೆಸ್ಪಾನ್ಸ್ ಲಭ್ಯವಾಗಿದೆ.

ಮುಂಬೈನಲ್ಲಿ ರಾಕಿ ಬಾಯ್ ಕಟೌಟ್
ಕನ್ನಡನ ಖ್ಯಾತ ನಟ ರಾಕಿಬಾಯ್ ಯಶ್ ನಟನೆಯ ಕೆಜಿಎಫ್ ಸಿನಿಮಾವನ್ನು ಬಾಲಿವುಡ್ ಮಂದಿ ಮೆಚ್ಚಿಕೊಂಡಿದ್ದಾರೆ. ಕೆಜಿಎಫ್ ಸಿನಿಮಾ ತೆರೆ ಕಾಣುತ್ತಿದ್ದಂತೆಯೇ ಮುಂಬೈನಲ್ಲಿ ಅಭಿಮಾನಿಗಳು ಯಶ್ ಕಟೌಟ್ ನಿರ್ಮಿಸಿದ್ದಾರೆ. ಕೆಜಿಎಫ್ ಸಿನಿಮಾದ ನಟಿ ಶ್ರೀನಿಧಿ ಶೆಟ್ಟಿ, ಹರೀಶ್ ರೈ, ಅವಿನಾಶ್ ಅಯ್ಯಪ್ಪ, ಅರ್ಚನಾ, ಗರುಡ, ಹರೀಶ್ ರೈ ಸೇರಿದಂತೆ ಹಲವರು ಮಧ್ಯರಾತ್ರಿಯೇ ಕೆಜಿಎಫ್ ಸಿನಿಮಾ ವೀಕ್ಷಣೆ ಮಾಡಿದ್ದಾರೆ.
ಯಶ್, ಪ್ರಶಾಂತ್ ನೀಲ್, ಬಸ್ರೂರು ಕಾಂಬಿನೇಷನ್ ಸಕ್ಸಸ್
ವಿಶ್ವದ ಚಿತ್ರರಸಿಕರನ್ನು ಕನ್ನಡ ನಾಡಿನತ್ತ ತಿರುಗಿ ನೋಡುವಂತೆ ಮಾಡಿದ್ದು ಕೆಜಿಎಫ್ ಅನ್ನೋ ಒಂದೇ ಒಂದೇ ಸಿನಿಮಾ. ವಿಶ್ವದಾದ್ಯಂತ ಕೆಜಿಎಫ್ ರಿಲೀಸ್‌ಗೆ ತುದಿಗಾಲಲ್ಲಿ ನಿಂತಿದ್ದಾರೆ. ಹಾಲಿವುಡ್, ಬಾಲಿವುಡ್, ಸ್ಯಾಂಡಲ್‌ವುಡ್, ಕಾಲಿವುಡ್, ಮಾಲಿವುಡ್ ಸೇರಿದಂತೆ ಭಾರತೀಯ ಚಿತ್ರರಂಗದಲ್ಲಿಯೇ ಕೆಜಿಎಫ್ ಸಖತ್ ಸೌಂಡ್ ಮಾಡ್ತಿದೆ. ಸಿನಿ ರಸಿಕರು ಕೆಜಿಎಫ್ ಸಿನಿಮಾ ನೋಡಿ ಸಂಭ್ರಮಿಸುತ್ತಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಮೊದಲ ಅವತರಣಿಕೆಯಲ್ಲಿಯೇ ರಾಕಿಬಾಯ್ ಆಗಿ ಮಿಂಚಿದ್ದಾರೆ. ಇದೀಗ ಚಾಫ್ಟರ್ ೨ ನಲ್ಲಿ ಪ್ರೇಕ್ಷಕರು ನಿರೀಕ್ಷಿಸಿರದಂತಹ ಎಂಟ್ರಿ ಕೊಟ್ಟಿದ್ದಾರೆ. ಪ್ರಶಾಂತ್ ನೀಲ್ ತಾನೊಬ್ಬ ಚಾಣಾಕ್ಯ ನಿರ್ದೇಶಕ ಅನ್ನೋದನ್ನು ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ. ಅದ್ರಲ್ಲೂ ರವಿ ಬಸ್ರೂರು ಅವರ ಮ್ಯೂಸಿಕ್ ಮ್ಯಾಜಿಕ್ ಮಾಡಿದೆ. ರಾಕಿಬಾಯ್ ಎಂಟ್ರಿಯಿಂದ ಹಿಡಿದು ಸಿನಿಮಾದಲ್ಲಿನ ಎಲ್ಲಾ ಹಾಡುಗಳು ಅದ್ಬುತವಾಗಿ ಮೂಡಿಬಂದಿವೆ. ಹಿನ್ನೆಲೆ ಸಂಗೀತ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದೆ.
ಇದನ್ನೂ ಓದಿ : ಕೆಜಿಎಫ್-2 ಫಸ್ಟ್ ಡೇ ಫಸ್ಟ್ ಶೋ : ಮಹಿಳೆಯರಿಗಾಗಿ ಸ್ಪೆಷಲ್ ಶೋ ಆಯೋಜನೆ
ಇದನ್ನೂ ಓದಿ : ಕೆಜಿಎಫ್ ಬಿಡುಗಡೆ ಸಮಯದಲ್ಲೇ ನಿರ್ದೇಶಕ ಪ್ರಶಾಂತ್ ನೀಲ್ ಗೆ ಭಯ ಏಕೆ ಗೊತ್ತೇ?
KGF Chapter 2 Release Yash Prashant Neel Ravi Basrur Srinidhi Shetty Sanjay Datt Raveen Tendon