JEE Advanced 2022 : ಜೆಇಇ ಅಡ್ವಾನ್ಸಡ್​​​ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ ಸಾಧ್ಯತೆ

JEE Advanced 2022 : 2022ನೇ ಸಾಲಿನ ಜೆಇಇ ಅಡ್ವಾನ್ಸ್​ ಪರೀಕ್ಷೆಯ ದಿನಾಂಕದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ಪರಿಷ್ಕೃತ ದಿನಾಂಕವನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುತ್ತದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಜೆಇಇ ಮೇನ್ 2ನೇ ಸೆಷನ್​​​ನ್ನು ಜುಲೈ ತಿಂಗಳಿಗೆ ಮುಂದೂಡಿಕೆ ಮಾಡಿರುವ ಬೆನ್ನಲ್ಲೇ ಜೆಇಇ ಅಡ್ವಾನ್ಸ್​ನ ದಿನಾಂಕವನ್ನೂ ಬದಲಾವಣೆ ಮಾಡುವ ಸಾಧ್ಯತೆಗಳು ದಟ್ಟವಾಗಿವೆ. ಪರಿಷ್ಕೃತ ದಿನಾಂಕಗಳು ಶೀಘ್ರದಲ್ಲಿಯೇ ಅಧಿಕೃತ ವೆಬ್​ಸೈಟ್​​ನಲ್ಲಿ ಲಭ್ಯವಿರಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.


ಐಐಟಿ ಜೆಇಇ ಅಡ್ವಾನ್ಸ್​ ಪರೀಕ್ಷೆಯನ್ನು ನಡೆಸುವ ಐಐಟಿ ಬಾಂಬೆಯು ಪರೀಕ್ಷೆಗಳ ಪರಿಷ್ಕೃತ ವೇಳಾಪಟ್ಟಿಗಳನ್ನು ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಒಮ್ಮೆ ಅಧಿಸೂಚನೆಗಳು ಬಿಡುಗಡೆಯಾದ ಬಳಿಕ ಜೆಇಇ ಅಡ್ವಾನ್ಸಡ್​​ ಪರಿಷ್ಕೃತ ವೇಳಾಪಟ್ಟಿಯು jeeadv.ac.in ನಲ್ಲಿ ಲಭ್ಯವಿರಲಿದೆ.

ಇತ್ತೀಚೆಗೆ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) JEE ಮೇನ್ಸ್ ಏಪ್ರಿಲ್ ಮತ್ತು ಮೇ ಅವಧಿಗಳನ್ನು ಕ್ರಮವಾಗಿ ಜೂನ್ ಮತ್ತು ಜುಲೈಗೆ ಮುಂದೂಡಲಾಗಿದೆ ಎಂದು ಘೋಷಿಸಿತು. ಈಗ, JEE ಮೇನ್ಸ್ ಮೇ ಸೆಷನ್ ಜುಲೈ 30, 2022 ರಂದು ಮುಕ್ತಾಯಗೊಳ್ಳುತ್ತದೆ.


ಆದರೆ ಜೆಇಇ ಅಡ್ವಾನ್ಸ್​​​ 2022ರ ದಿನಾಂಕವನ್ನು ಯಾವಾಗ ಘೋಷಣೆ ಮಾಡುಲಾಗುತ್ತದೆ ಎಂಬುದರ ಬಗ್ಗೆ ಇನ್ನೂ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ. ಜೆಇಇ ಮೇನ್​ ಪರೀಕ್ಷೆಯು ಜುಲೈನಲ್ಲಿ ನಡೆಯುವುದರಿಂದ ಜೆಇಇ ಮೇನ್ಸ್​ ಹಾಗೂ ಜೆಇಇ ಅಡ್ವಾನ್ಸ್​​ಗೆ ಸಾಮಾನ್ಯವಾಗಿ ಒಂದು ತಿಂಗಳ ಅಂತರವಿರುವುದರರಿಂದ ಜೆಇಇ ಅಡ್ವಾನ್ಸ್​​ಡ್​ ಆಗಸ್ಟ್​​ ಮೂರನೇ ವಾರ ಹಾಗೂ ನಾಲ್ಕನೇ ವಾರದಲ್ಲಿ ನಿಗದಿಯಾಗಬಹುದು ಎಂದು ತಜ್ಞರು ಹೇಳಿದ್ದಾರೆ.

ಇದನ್ನು ಓದಿ : CBSE Term 2 2022 ರ 10 ನೇ ತರಗತಿ ಪರಿಕ್ಷೆಯ ಹಾಲ್‌ ಟಿಕೇಟ್‌ ಡೌನ್‌ಲೋಡ್‌ ಮಾಡಿಕೊಳ್ಳುವುದು ಹೇಗೆ ಗೊತ್ತೇ?

ಇದನ್ನೂ ಓದಿ : Degree Exams Postpone : ಪದವಿ ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್ : ಪರೀಕ್ಷೆ ಒಂದು ತಿಂಗಳು ಮುಂದೂಡಿಕೆ

JEE Advanced 2022 Dates Likely to be Changed, New Schedule Soon on jeeadv.ac.in | Details Here

Comments are closed.