ಕೆಜಿಎಫ್ ಚಾಪ್ಟರ್-2 ಸಾವಿರ ಕೋಟಿ ಗಳಿಸಿದ ಮೇಲೆ, ಆರ್ ಆರ್ ಆರ್ ಸಿನಿಮಾ ಗಳಿಕೆ ಸಾವಿರ ಕೋಟಿ ದಾಟಿದ ಮೇಲೆ, ಪುಷ್ಪಾ ಸಿನಿಮಾ ಚಿತ್ರಜಗತ್ತಿನ ಎಲ್ಲ ಗಡಿಗಳನ್ನು ಮೀರಿದ ಮೇಲೆ ಒಂದು ವಿಚಾರದ ಬಗ್ಗೆ ಚರ್ಚೆ ನಡೆಯುತ್ತಿದೆ. ಅದುವೇ, ಬಾಲಿವುಡ್ ನಲ್ಲಿ ಏಕೆ ಗಟ್ಟಿಯಾದ ಕಥೆಗಳು, ಸಿನಿಮಾಗಳು ತಯಾರಾಗುತ್ತಿಲ್ಲ. ದಕ್ಷಿಣಭಾರತದ ಸಿನಿಮಾ ರಂಗದಿಂದ ಮಾತ್ರ ಇಂಥ ಅದ್ಬುತ ಸಿನಿಮಾಗಳು ನಿರ್ಮಾಣವಾಗಲು ಕಾರಣ ಏನು- ಈ ಚರ್ಚೆ ಶುರುವಾಗಿದ್ದು ಪುಷ್ಪಾ ಸಿನಿಮಾ ಬಿಡುಗಡೆಯಾದ ನಂತರ, ಆಮೇಲೆ, ಆರ್ ಆರ್ ಆರ್, ಕೆಜಿಎಫ್ ಇದರ ಕಾವನ್ನು ಹೆಚ್ಚಿಸಿತು.
ಬಾಲಿವುಡ್, ನಿಜವಾಗಿಯೂ ಗುಣಮಟ್ಟದ ಸಿನಿಮಾ ಮಾಡುವುದರಲ್ಲಿ ಸೊರಗಿಹೋಗಿದೆಯಾ, ಸೋತು ಹೋಗಿದೆಯಾ?
ಇದೇ ಪ್ರಶ್ನೆಯನ್ನು ಇತ್ತೀಚೆಗೆ ಅಭಿಷೇಕ್ ಬಚ್ಚನ್ ಅವರನ್ನು ಕೇಳಲಾಯಿತು. ಆದರೆ, ಅಭಿಷೇಕ್ ಸಾರಾಸಗಟಾಗಿ ಇದನ್ನು ತಳ್ಳಿಹಾಕಿದರು. ಹಿಂದೆ ಬಾಲಿವುಡ್ ನಲ್ಲೂ ಅದ್ಬುತ ಸಿನಿಮಾಗಳು ಬಂದಿವೆ, ಬರುತ್ತಿವೆ. ಅವೆಲ್ಲವೂ ಬೇರೆ ಭಾಷೆಗೂ ಡಬ್ ಆಗುತ್ತಿವೆ. ಜನರನ್ನು ಆದನ್ನು ಸ್ವೀಕರಿಸಿದ್ದಾರೆ. ಹೀಗಾಗಿ, ಪಾನ್ ಇಂಡಿಯಾ ಸಿನಿಮಾ ಟರ್ಮ್ ಅನ್ನೋ ನಾನು ನಂಬೋಲ್ಲ ಅಂದಿದ್ದಾರೆ. ‘ನನಗೇನೋ ಬಾಲಿವುಡ್ ನಲ್ಲಿ ಕಂಟೆಂಟ್ ಕೊರತೆ ಇದೆ ಎನ್ನುವುದರ ಬಗ್ಗೆ ನಂಬಿಕೆ ಇಲ್ಲ. ಪುಷ್ಪ,ಕೆಜಿಎಫ್ -2, ಆರ್ ಆರ್ ಆರ್ ಅದ್ಬುತವಾಗಿ ಪ್ರದರ್ಶನ ಕಂಡಿದೆ. ಅದರ ಬಗ್ಗೆ ಹೆಮ್ಮೆಇದೆ. ನಾವೆಲ್ಲರೂ ಭಾರತೀಯ ಚಿತ್ರರಂಗದ ಭಾಗವೇ. ನಮ್ಮಲ್ಲಿ ಭಾಷಾ ವೈವಿಧ್ಯತೆ ಇದೆ ಅನ್ನೋದು ಬಿಟ್ಟರೆ ನಾವೆಲ್ಲರೂ ಒಂದೇ ಕುಟುಂಬದವರೇ’ ಎಂದು ಸಂದರ್ಶನವೊಂದರಲ್ಲಿ ಉತ್ತರಿಸಿದ್ದಾರೆ.
ಹಾಗಾದರೆ, ಹಿಂದಿ ಸಿನಿಮಾನ ಬೇರೆ ಭಾಷೆಗಳಿಗಾಗಿ ರೀ ಮೇಡ್ ಏಕೆ ಮಾಡೋಲ್ಲ ಅನ್ನೋ ಪ್ರಶ್ನೆಗೆ ಉತ್ತರಿಸಿರುವ ಅಭಿಷೇಕ್, ‘ಇದು ಒಳ್ಳೆ ಪ್ರಶ್ನೆಯಲ್ಲ. ನಾವೆಲ್ಲರೂ ಭಾರತೀಯ ಚಿತ್ರೋದ್ಯಮಕ್ಕೆ ಸೇರಿದವರೇ. ನಾವೆಲ್ಲಾ ಬೇರೆ ಬೇರೆ ಭಾಷೆಗಳಲ್ಲಿ ಕೆಲಸ ಮಾಡಿದರೂ, ಅದೇ ಉದ್ಯಮಕ್ಕೆ ಸೇರಿದವರಷ್ಟೇ. ಅದೇ ಪ್ರೇಕ್ಷಕರಿಗಾಗಿ ಕೆಲಸ ಮಾಡುವವರು’ ಎಂದಿದ್ದಾರೆ.
‘ಹಿಂದಿ ಅಥವಾ ಯಾವುದೇ ಭಾಷೆಯ ಸಿನಿಮಾಗಳನ್ನು ಆಯಾ ಪ್ರಾದೇಶಿಕ ಭಾಷೆಗೆ ರೀ ಮೇಡ್ ಮಾಡುತ್ತಾರೆ. ಇದು ಹೊಸ ಟ್ರೆಂಡ್ ಏನೂ ಅಲ್ಲ. ನಮ್ಮನಮ್ಮಲ್ಲಿ ಕೊಡುಕೊಳ್ಳುವುದು ನಡೆಯುತ್ತಲೇ ಇರುತ್ತದೆ. ಇದೇನು ತಪ್ಪಲ್ಲ’ ಎಂದು ಉತ್ತರಿಸಿದ್ದಾರೆ. ‘ನಿಮ್ಮ ಪ್ರಶ್ನೆ ಎದ್ದಿರುವುದು ಕೆಜಿಎಫ್-2, ಆರ್ ಆರ್ ಆರ್ ಸಿನಿಮಾದಿಂದ ಅನ್ನೋದು ನನಗೆ ಅರ್ಥವಾಗುತ್ತದೆ. ಆ ಸಿನಿಮಾಗಳು ಬಾಕ್ಸ್ ಆಫೀಸಲ್ಲಿ ಸಖತ್ತಾಗಿ ಓಡುತ್ತಿದೆ. ಅವರು ಯಾವಾಗಲೂ ಚೆನ್ನಾಗಿಯ ಸಿನಿಮಾ ಮಾಡುತ್ತಾರೆ. ನಮ್ಮ ಹಿಂದಿ ಸಿನಿಮಾಗಳು ಕೂಡ ದಕ್ಷಿಣಭಾರತದಲ್ಲಿ ಚೆನ್ನಾಗಿ ಓಡಿದೆ. ಎಲ್ಲವೂ ಹೊಸದೇನು ಅಲ್ಲ. ನಾವೆಲ್ಲ ಸಿನಿಮಾ ಎನ್ನುವ ಕೂಡು ಕುಟುಂಬಕ್ಕೆ ಸೇರಿದವರು’ ಎಂದು ಅಭಿಷೇಕ್ ವಿಶ್ಲೇಷಣೆ ಮಾಡಿದ್ದಾರೆ.
ಇದನ್ನೂ ಓದಿ :KGF 2 ಗಾಗಿ ಯಶ್, ಪ್ರಶಾಂತ್ ನೀಲ್, ಸಂಜಯ್ ದತ್ ಪಡೆದ ಸಂಭಾವನೆ ಎಷ್ಟು ಗೊತ್ತಾ ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ಇದನ್ನೂ ಓದಿ : Acharya : ಮೆಗಾಸ್ಟಾರ್ ಚಿರಂಜೀವಿ ಅವರ ಆಚಾರ್ಯ್ ಏಪ್ರಿಲ್ 28ಕ್ಕೆ ತೆರೆಗೆ : ಪಾನ್ ಇಂಡಿಯಾ ಸಿನಿಮಾಗಳಿಗೆ ಸವಾಲು ಹಾಕಬಹುದೇ?
(Abhishek Bachchan said don’t think Bollywood doesn’t have good content)