Acharya : ಮೆಗಾಸ್ಟಾರ್‌ ಚಿರಂಜೀವಿ ಅವರ ಆಚಾರ್ಯ್‌ ಏಪ್ರಿಲ್‌ 28ಕ್ಕೆ ತೆರೆಗೆ : ಪಾನ್‌ ಇಂಡಿಯಾ ಸಿನಿಮಾಗಳಿಗೆ ಸವಾಲು ಹಾಕಬಹುದೇ?

ಈಗ ಎಲ್ಲೆಡೆ ಪಾನ್ ಇಂಡಿಯಾ ಸಿನಿಮಾ ಜಪ ಶುರುವಾಗಿದೆ. ಆರ್ ಆರ್ ಆರ್ ನಂತರ ಕೆಜಿಎಫ್-2 ಬಿಡುಗಡೆಯಾದ ಮೇಲಂತೂ ಎಲ್ಲಾ ಪಾನ್ ಬಗ್ಗೆಯೇ ಮಾತನಾಡುತ್ತಿದ್ದಾರೆ. ಈ ದೊಡ್ಡ ಸಿನಿಮಾ ನೋಡಿದವರು ಈಗ ಸಣ್ಣ ಸಣ್ಣ ಸಿನಿಮಾಗಳನ್ನು ನೋಡಬೇಕಾಗಿದೆ. ಕೆಜಿಎಫ್-2 ಅಬ್ಬರದ ನಡುವೆ ಪಾನ್ ಇಂಡಿಯಾ ಅಲ್ಲದ ದೊಡ್ಡ ಸ್ಟಾರ್ ನಟರ ಸಿನಿಮಾ ಬಿಡುಗಡೆಯಾಗಿದ್ದು ದಳಪತಿ ವಿಜಯ್ ಅವರ ಬೀಸ್ಟ್. ಪಾನ್ ಅಬ್ಬರದಲ್ಲಿ ಇದು ಬಾಕ್ಸ್ ಆಫೀಸಲ್ಲಿ ಸದ್ದು ಮಾಡಲಿಲ್ಲ, ಹಾಗಂತ ನಿರ್ಮಾಪಕರಿಗೆ ಲಾಸ್ ಏನೂ ಆಗಲಿಲ್ಲ. ಬೀಸ್ಟ್ ನಂತರ ಈಗ ಬರುತ್ತಿದೆ ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಅವರ ಬಹುನಿರೀಕ್ಷಿತ ಸಿನಿಮಾ ಆಚಾರ್ಯ( Acharya). ಇದು ಕೂಡ ಪಾನ್ ಇಂಡಿಯಾ ಸಿನಿಮಾ ಅಲ್ಲ. ಹೀಗಂತ, ನಿರ್ದೇಶಕ ಕೊರಟಾಲ ಶಿವ ಈಗಾಗಲೇ ಹೇಳಿಕೊಂಡಿದ್ದಾರೆ. ‘ಇಡೀ ಸಿನಿಮಾದ ಕತೆ ಎಲ್ಲವೂ ದಕ್ಷಿಣಭಾರತ ಪ್ರದೇಶಕ್ಕೆ ಹೊಂದಿಕೆಯಾಗಿದೆ. ನಮ್ಮ ಫೋಕಸ್ ಕೂಡ ಅದೇ. ಅನಗತ್ಯವಾಗಿ ಇದನ್ನು ಪಾನ್ ಇಂಡಿಯಾಕ್ಕೆ ಒಗ್ಗಿಸುವುದು ಕಷ್ಟ. ಹೀಗಾಗಿ ನಮ್ಮದು ಪಾನ್ ಇಂಡಿಯಾ ಸಿನಿಮಾ ಅಲ್ಲ. ಆ ಕೊರಗೂ ಕೂಡ ನಮಗಿಲ್ಲ’ ಅಂತ ಹೇಳಿದ್ದಾರೆ.

ಏಪ್ರಿಲ್ 28ರಂದು ಚಿರಂಜೀವಿ ಅಭಿನಯದ ಆಚಾರ್ಯ ಸಿನಿಮಾ ತೆರೆಕಾಣಲಿದೆ. ಸಿನಿಮಾದ ಹಿಂದಿಗೆ ಡಬ್ ಕೂಡ ಮಾಡಿಲ್ಲ. ಈ ಬಗ್ಗೆ ಸ್ಪಷ್ಟನೆ ನೀಡಿರುವ ನಿರ್ಮಾಪಕ ರಾಮ್ ಚರಣ್ ತೇಜ, ‘ಆಚಾರ್ಯ ದಕ್ಷಿಣಭಾರತೀಯ ಪ್ರೇಕ್ಷಕರನ್ನು ಗುರಿಯಾಗಿಸಿಕೊಂಡು ಮಾಡಿರುವ ಸಿನಿಮಾ. ಈ ಕಾರಣದಿಂದ ಹಿಂದಿಗೆ ಡಬ್ ಮಾಡುವ ಯಾವ ಅಗತ್ಯವೂ ಇಲ್ಲ’ ಅಂದಿದ್ದಾರೆ.

ಆಚಾರ್ಯ ಸಿನಿಮಾದಲ್ಲಿ ಚಿರಂಜೀವಿ ಅವರ ಜೊತೆ ಮಗ ಮತ್ತು ನಿರ್ಮಾಪಕ ರಾಮ್ ಚರಣತೇಜ ಕೂಡ ನಟಿಸಿದ್ದಾರೆ. ರಾಮ್ ಚರಣ್ ಸಿನಿಮಾದ ದ್ವಿತೀಯಾರ್ಧದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಅಪ್ಪನ ಜೊತೆ ಅಭಿನಯಿಸುವ ಅವಕಾಶ ಕೊಟ್ಟ ಕೊರಟಾಲ ಶಿವ ಅವರನ್ನು ರಾಮ್ ಚರಣ್ ಹೊಗಳಿದ್ದಾರೆ.

‘ನಾನು ಆರ್ ಆರ್ ಆರ್ ಸಿನಿಮಾದ ಶೂಟಿಂಗ್ ನಲ್ಲಿ ಇದ್ದೆ. ಆಗ ಕರೆದು ಶಿವ ಅವರು ಆಚಾರ್ಯದಲ್ಲಿ ಒಂದು ಪಾತ್ರವಿದೆ. ನೀನು ಮಾಡಬೇಕು ಎಂದು, ಪಾತ್ರದ ಬಗ್ಗೆ ವಿವರಣೆ ಕೊಟ್ಟರು. ನನಗೆ ಥ್ರಿಲ್ ಆಯಿತು. ತಕ್ಷಣ ಒಪ್ಪಿಕೊಂಡೆ’ ಎಂದು ವಿವರಣೆ ನೀಡಿದ್ದಾರೆ.

ಇದನ್ನೂ ಓದಿ : Yash : ರಜನಿಕಾಂತ್ ಅವರ ಸಾಧನೆ ಗೌರವಿಸೋಣ ಹಾಗೇನೇ, ಈಗ ನಮ್ಮಕೈಲಿ ಏನು ಮಾಡೋಕೆ ಸಾಧ್ಯ ಅನ್ನೋದನ್ನು ನೋಡೋಣ : ಯಶ್

ಇದನ್ನೂ ಓದಿ :KGF 2 ಗಾಗಿ ಯಶ್‌, ಪ್ರಶಾಂತ್‌ ನೀಲ್‌, ಸಂಜಯ್‌ ದತ್‌ ಪಡೆದ ಸಂಭಾವನೆ ಎಷ್ಟು ಗೊತ್ತಾ ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

(Acharya Telugu Actor Chiranjeevi’s Acharya film is not pan India movie)

Comments are closed.