yash starrer kgf 2 : ರಾಕಿಂಗ್ ಸ್ಟಾರ್ ಯಶ್ ಜೀವನದಲ್ಲಿ ಕೆಜಿಎಫ್ 2 ಸಿನಿಮಾವು ಹೊಸ ಮೈಲಿಗಲ್ಲಾಗಿ ನಿಂತಿದೆ . ಯಾರೂ ಊಹಿಸದ ರೀತಿಯಲ್ಲಿ ಸ್ಯಾಂಡಲ್ವುಡ್ನ ಸಿನಿಮಾವೊಂದು ವಿಶ್ವಾದ್ಯಂತ ಸದ್ದು ಮಾಡುತ್ತಿದೆ. ಪ್ರಶಾಂತ್ ನೀಲ್ ನಿರ್ದೇಶನ, ರಾಕಿಂಗ್ ಸ್ಟಾರ್ ಯಶ್ ನಟನಾ ಚಾಕ ಚಕ್ಯತೆಗೆ ಸಂಪೂರ್ಣ ವಿಶ್ವವೇ ಸಲಾಂ ಎಂದಿದೆ. ಉತ್ತರ ಭಾರತದಲ್ಲಂತೂ ಬಾಲಿವುಡ್ ಸಿನಿಮಾಗಳನ್ನೇ ಬದಿಗೊತ್ತಿ ಜನರು ಕೆಜಿಎಫ್ 2 ಸಿನಿಮಾ ವೀಕ್ಷಣೆಗಯತ್ತ ಒಲವು ತೋರಿದ್ದಾರೆ. ಈ ನಡುವೆ ಸಿನಿಮಾ ತಂಡವು ಕೆಜಿಎಫ್ ಚಾಪ್ಟರ್ 3 ಸುಳಿವನ್ನೂ ಬಿಟ್ಟುಕೊಟ್ಟಿದೆ.
ಕೆಜಿಎಫ್ ಚಾಪ್ಟರ್ 2 ಸಿನಿಮಾ ತೆರೆಕಂಡು ಮೂರನೇ ವಾರಕ್ಕೆ ಕಾಲಿಟ್ಟರೂ ಸಹ ಸಿನಿಮಾ ಮಂದಿರಗಳಲ್ಲಿ ರಾಕಿ ಭಾಯ್ ಹವಾ ಕಿಂಚಿತ್ತೂ ಕಡಿಮೆಯಾದಂತೆ ತೋರುತ್ತಿಲ್ಲ. ಕನ್ನಡ ಮಾತ್ರವಲ್ಲದೇ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿಯೂ ಈ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಯಶ್ರ ಕೆಜಿಎಫ್ 2 ಸಿನಿಮಾದ ಎದುರು ಶಾಹೀದ್ ಕಪೂರ್ ನಟನೆಯ ಜೆರ್ಸಿ, ದಳಪತಿ ವಿಜಯ್ ನಟನೆಯ ಬೀಸ್ಟ್ ಸಿನಿಮಾಗಳು ಮಕಾಡೆ ಮಲಗಿವೆ.
ಇದು ಮಾತ್ರವಲ್ಲದೇ ಅಜಯ್ ದೇವಗನ್ ನಟನೆಯ ರನ್ ವೇ 34, ಟೈಗರ್ ಶ್ರಾಫ್ ಮುಖ್ಯ ಭೂಮಿಕೆಯ ಹೀರೋಪಂತಿ 2, ಚಿರಂಜೀವಿ ಮತ್ತು ರಾಮ್ಚರಣ್ ನಟನೆಯ ಆಚಾರ್ಯ ಸೇರಿದಂತೆ ಅನೇಕ ಸಿನಿಮಾಗಳು ಕೆಜಿಎಫ್ ಚಾಪ್ಟರ್ 2 ಎದುರು ಮಂಡಿಯೂರಿವೆ .ಮೂರು ವಾರಗಳ ವೇಳೆಗೆ ಕೆಜಿಎಫ್ 2 ಸಿನಿಮಾವು ಕೇವಲ ಹಿಂದಿ ಬಾಕ್ಸಾಫೀಸಿನಲ್ಲೇ 350 ಕೋಟಿ ರೂಪಾಯಿಗಳನ್ನು ಬಾಚಿಕೊಂಡಿದೆ. ವಿಶ್ವಾದ್ಯಂತ ಈ ಸಿನಿಮಾ ಸಾವಿರಾರು ಕೋಟಿ ಸಂಪಾದಿಸಿದ್ದು ವಿಜಯ್ ಕಿರಗಂದೂರು ಭರ್ಜರಿ ಲಾಭ ಗಳಿಸಿದ್ದಾರೆ.
ಇದನ್ನು ಓದಿ : Megastar Chiranjeevi : ಮಗನದ್ದು ಆಯಿತು, ಮಗಳ ಚಿತ್ರದಲ್ಲಿ ತೆಲುಗು ನಟ ಚಿರಂಜೀವಿ ನಟನೆ!!
ಇದನ್ನೂ ಓದಿ : Sanjana Galrani Baby Bump : ಸಖತ್ ವೈರಲ್ ಆದ ಸಂಜನಾ ಬೇಬಿ ಬಂಪ್ ಫೋಟೋ!!
yash starrer kgf 2 stays strong in 3rd week competing with acharya runway 34 heropanti- movies