Italian Court : ಮಗುವಿನ ಹೆಸರಿನ ಜೊತೆಯಲ್ಲಿ ತಂದೆಯ ಹೆಸರು ಮಾತ್ರವೇಕೆ..? ಇಟಲಿ ಕೋರ್ಟ್ ಪ್ರಶ್ನೆ

Italian Court : ದಂಪತಿಗೆ ಜನಿಸಿದ ಶಿಶುವಿನ ಹೆಸರಿನ ಜೊತೆಯಲ್ಲಿ ತಂದೆಯ ಜಾತಿಯನ್ನೇ ಇಡುವ ಪದ್ಧತಿ ಸ್ವಯಂಚಾಲಿತವಾಗಿ ಎಲ್ಲೆಡೆ ಜಾರಿಯಲ್ಲಿದೆ. ಆದರೆ ಈ ರೀತಿ ಮಗುವಿಗೆ ಕೇವಲ ತಂದೆಯ ಉಪನಾಮವನ್ನು ಮಾತ್ರ ಇಡುವುದು ಅಸಂವಿಧಾನಿಕ ಎಂದು ಇಟಲಿಯ ಸರ್ವೋಚ್ಛ ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ. ಶಿಶುಗಳಿಗೆ ಹುಟ್ಟಿದ ಬಳಿಕ ಅವರ ಜನನ ಪ್ರಮಾಣ ಪತ್ರದಲ್ಲಿ ತಂದೆ – ತಾಯಿಗಳಿಬ್ಬರ ಉಪನಾಮವನ್ನು ಸೇರಿಸಬೇಕು ಎಂದು ಇಟಲಿ ಸರ್ವೋಚ್ಛ ನ್ಯಾಯಾಲಯವು ಹೇಳಿದೆ.


ಸನಾತನ ಕಾಲದಿಂದಲೂ ಜಾರಿಯಲ್ಲಿರುವ ಈ ಪದ್ಧತಿಯು ತಾರತಮ್ಯ ಹಾಗೂ ಹಾನಿಕಾರಕ ಎಂದು ಇಟಲಿ ಕೋರ್ಟ್ ಅಭಿಪ್ರಾಯ ಪಟ್ಟಿದೆ. ಮಗುವಿನ ಗುರುತಿನ ಜೊತೆಯಲ್ಲಿ ತಂದೆಯ ಉಪನಾಮವನ್ನು ಸ್ವಯಂಚಾಲಿತವಾಗಿ ಬಳುಸುವ ಹಳೆಯ ಅಭ್ಯಾಸವನ್ನು ಇಟಲಿಯ ಸಾಂವಿಧಾನಿಕ ನ್ಯಾಯಾಲಯವು ವಿರೋಧಿಸಿದೆ. ಸಮಾನತೆಯ ತತ್ವದ ಹಿನ್ನೆಲೆಯಲ್ಲಿ ಹಾಗೂ ಮಗುವಿನ ಹಿತದೃಷ್ಠಿಯಿಂದ ಇಬ್ಬರು ಪೋಷಕರ ಹೆಸರನ್ನೂ ಮಗುವಿನ ಹೆಸರಿನ ಜೊತೆಯಲ್ಲಿ ಇಡಬೇಕು. ಇದು ವೈಯಕ್ತಿಕ ಗುರುತು ಹಾಗೂ ಸಮಾನತೆಯ ಮೂಲಭೂತ ಅಂಶವಾಗಿದೆ ಎಂದು ನ್ಯಾಯಾಲಯವು ಹೇಳಿಕೆ ನೀಡಿದೆ

.
ಈ ತೀರ್ಪು ನೀಡುವುದಕ್ಕೂ ಮುನ್ನ ತಂದೆಯು ಮಗುವಿನ ಜೀವನದ ಭಾಗವಾಗಿಲ್ಲದಿದ್ದರೆ ಅಥವಾ ವಿಚ್ಛೇಧನವನ್ನು ಪಡೆದಿದ್ದರೆ ಮಾತ್ರ ತಾಯಿಯ ಉಪನಾಮವನ್ನು ಮಗುವಿಗೆ ನೀಡಲಾಗುತ್ತಿತ್ತು. ಆದರೆ ಇದೀಗ ಪೋಷಕರು ಯಾವ ಉಪಜಾತಿ ಇಡಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಅವರು ಬಯಸಿದಲ್ಲಿ ಇನ್ನೂ ಒಂದು ಹೆಸರನ್ನು ಆಯ್ಕೆ ಮಾಡಬಹುದು. ಅಂದರೆ ಸ್ವಯಂಚಾಲಿತವಾಗಿ ತಂದೆಯ ಉಪನಾಮವು ಮಗುವಿಗೆ ಬರುವುದಿಲ್ಲ.


ಸಂಸತ್ತಿನಲ್ಲಿ ಅನುಮೋದನೆ ಪಡೆಯಬೇಕಾಗಿರುವುದರಿಂದ ಈ ತೀರ್ಪು ಇನ್ನೂ ಅಂಗೀಕಾರವಾಗಿಲ್ಲ, ಆದರೆ ಕುಟುಂಬ ಕಲ್ಯಾಣ ಸಚಿವೆ ಎಲೆನಾ ಬೊನೆಟ್ಟಿ ಫೇಸ್‌ಬುಕ್ ಪೋಸ್ಟ್‌ನಲ್ಲಿ ಸರ್ಕಾರವು ನಿರ್ಧಾರವನ್ನು ಬೆಂಬಲಿಸಿದೆ ಎಂದು ತಿಳಿಸಿದ್ದಾರೆ . ಮಗುವಿಗೆ ತಂದೆಯ ಹೆಸರನ್ನೇ ಅಡ್ಡ ಹೆಸರಾಗಿ ಇಡುವುದು ಪುರುಷ ಪ್ರಾಬಲ್ಯವನ್ನು ತೋರಿಸುತ್ತದೆ. ಪೋಷಕರಿಗೆ ಸಮಾನ ಘನತೆ ಹಾಗೂ ಸಮಾನ ಜವಾಬ್ದಾರಿ ಮತ್ತು ಸಮಾನ ಗೌರವ ನೀಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನು ಓದಿ : Sanjana Galrani Baby Bump : ಸಖತ್‌ ವೈರಲ್ ಆದ ಸಂಜನಾ ಬೇಬಿ ಬಂಪ್ ಫೋಟೋ!!

ಇದನ್ನೂ ಓದಿ : ಕಾಲಿಗೆ ಬಿದ್ದು ಬೇಡಿಕೊಂಡರೂ ಬಿಡದ ಕಾಮುಕರು : ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

Italian Court Rules Only Using Dad’s Last Name On Birth Certificate Is “Discriminatory”

Comments are closed.