Hublot watch case : ಬಿಜೆಪಿ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಹಾಗೂ ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮಗಳ ಬೆನ್ನಲ್ಲೇ ಇದೀಗ ವಿಪಕ್ಷ ನಾಯಕ ಸಿದ್ದರಾಮಯ್ಯರ ಹ್ಯುಬ್ಲೋಟ್ ವಾಚ್ ಕೂಡ ಬೆಳಕಿಗೆ ಬಂದಿದೆ. ಬಿಜೆಪಿ ಸರ್ಕಾರದ ವಿರುದ್ಧ ಬೆರಳು ಮಾಡಿ ತೋರಿಸುವ ಸಿದ್ದರಾಮಯ್ಯ ಹ್ಯುಬ್ಲೋಟ್ ವಾಚ್ ಧರಿಸಿಲ್ಲವಾ? ಎಂಬ ಬಿಜೆಪಿಗರ ಪ್ರಶ್ನೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದರು.
ಈ ವಿಚಾರವಾಗಿ ಮಾತನಾಡಿದ ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಹ್ಯುಬ್ಲೋಟ್ ವಾಚ್ ಬಗ್ಗೆ ಎಸಿಬಿ ಅಡಿಯಲ್ಲಿ ತನಿಖೆ ನಡೆದಿದೆ. ದುಬೈ ಮೂಲದ ಡಾ. ವರ್ಮಾ ಎಂಬವರು ನನಗೆ ಆವಾಚ್ನ್ನು ಉಡುಗೊರೆಯಾಗಿ ನೀಡಿದ್ದರು. ನಾನು ಆ ವಾಚ್ನ್ನು ಸರ್ಕಾರಕ್ಕೆ ನೀಡಿದ್ದೇನೆ. ದುಬೈ ಮೂಲದ ವೈದ್ಯ ಡಾ. ವರ್ಮಾ ಎಂಬವರು ನನಗೆ ಆ ವಾಚ್ನ್ನು ಉಡುಗೊರೆ ರೂಪದಲ್ಲಿ ನೀಡಿದ್ದರು. ಆದರೆ ಈ ಕುಮಾರಸ್ವಾಮಿ ನಾನು ವಾಚ್ನ್ನು ಎಲ್ಲೋ ಕದ್ದಿದ್ದೇನೆ ಎಂದು ಹೇಳಿಕೆ ನೀಡಿದರು. ಬಳಿಕ ನಾನು ಈ ಹ್ಯುಬ್ಲೋಟ್ ವಾಚ್ ಬಗ್ಗೆ ತನಿಖೆ ಮಾಡಲು ಎಸಿಬಿಗೆ ಹೇಳಿದೆ. ಇದಾದ ಬಳಿಕ ಡಾ. ವರ್ಮಾ ವಿಚಾರಣೆಗೆ ಹಾಜರಾಗಿ ದುಬೈನಲ್ಲಿ ಅವರು ವಾಚ್ ಖರೀದಿ ಮಾಡಿದ ಬಗ್ಗೆ ರಶೀದಿಯನ್ನೂ ತೋರಿಸಿದ್ದಾರೆ ಎಂದು ಹೇಳಿದರು.
ಇಷ್ಟಕ್ಕೂ ಆ ವಾಚ್ನ ಬೆಲೆ 30 ರಿಂದ 40 ಲಕ್ಷ ರೂಪಾಯಿ ಇರಬಹುದು. ಆದರೆ ಇವರು ಮಾಡಿರುವುದು 300 ಕೋಟಿ ರೂಪಾಯಿಗಳ ಅವ್ಯವಹಾರ ಅಲ್ಲವೇ..? ಅವರೆಡಕ್ಕೂ ಹೋಲಿಕೆ ಮಾಡಲು ಸಾಧ್ಯವೇ..? ನಾನು ಸಮರ್ಥನೆ ನೀಡುತ್ತಿಲ್ಲ. ಆದರೆ ಬಿಜೆಪಿ ನಾಯಕರು ಈ ಬಗ್ಗೆ ಒಮ್ಮೆ ಯೋಚಿಸಬೇಕು ಎಂದು ಹೇಳಿದರು. ಬಿಜೆಪಿ ಹಾಗೂ ಹೆಚ್.ಡಿ ಕುಮಾರಸ್ವಾಮಿ ನಡುವೆ ಅದೇನು ಸಂಬಂಧ ಇದೆ ಎಂಬುವುದು ನನಗೆ ತಿಳಿದಿಲ್ಲ. ಬೇಕಿದ್ದರೆ ನೀವೆ ಕೇಳಿ ನೋಡಿ ಎಂದು ಮಾಧ್ಯಮಗಳಿಗೆ ಹೇಳಿದರು.
ದುಬೈ ಮೂಲದ ವೈದ್ಯ ಡಾ.ಗಿರೀಶ್ ಚಂದ್ರವರ್ಮ ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಉಡುಗೊರೆ ರೂಪದಲ್ಲಿ ನೀಡಿದ್ದರು ಎನ್ನಲಾದ ಈ ವಾಚ್ ಸಿದ್ದರಾಮಯ್ಯ ಅಧಿಕಾರಾವಧಿಯಲ್ಲಿ ದೊಡ್ಡ ಮಟ್ಟಿಗೆ ಸದ್ದು ಮಾಡಿತ್ತು. ಹ್ಯುಬ್ಲೋಟ್ ಕಂಪನಿಯ ಈ ವಾಚ್ 40 ಲಕ್ಷ ರೂಪಾಯಿ ಮೌಲ್ಯವನ್ನು ಹೊಂದಿದೆ.
ಇದನ್ನೂ ಓದಿ : Shawarma death : ಕಾಸರಗೋಡಲ್ಲಿ ಶವರ್ಮ ತಿಂದು ವಿದ್ಯಾರ್ಥಿನಿ ಸಾವು, 18 ಮಂದಿ ಅಸ್ವಸ್ಥ
Siddaramaiah’s justification for the Hublot watch case