Wet Hair Mistakes : ನೀವೂ ಈ ತಪ್ಪುಗಳನ್ನು ಮಾಡುತ್ತೀರಾ?ಇದರಿಂದ ಕೂದಲಿಗೆ ಸಮಸ್ಯೆಯಾಗಬಹುದು ಹುಷಾರ್‌!

ನೀವು ಯಾವಾಗಲೂ ನಿಮ್ಮ ಆರೊಗ್ಯದ ಬಗ್ಗೆ ಕೈಲಾದಷ್ಟು ಕಾಳಜಿವಹಿಸಲು ಪ್ರಯತ್ನ ಪಡುತ್ತೀರಿ. ಆದರೆ ಕೂದಲು ದಪ್ಪ, ನಯವಾಗಿ, ಪೋಷಣೆಯಿಂದ ಕೂಡಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಏಕೆ ನೋಡುವುದಿಲ್ಲ? (Wet Hair Mistakes) ನಾವು ಮಾರುಕಟ್ಟೆಯಲ್ಲಿ ಸಿಗುವ ಹಲವಾರು ಕೂದಲಿನ ಉತ್ಪನ್ನಗಳನ್ನು ಉಪಯೋಗಿಸಲು ಒಲವು ತೋರಿಸುತ್ತೇವೆ. ಸ್ಪಾ ಗಳಿಗೆ ಭೇಟಿ ಕೊಡುವುದು, ಆರ್ಗಾನಿಕ್‌ ಉತ್ಪನ್ನಗಳ ಬಳಕೆ, ಸಲ್ಫೇಟ್‌ ಇರದ ಶಾಂಪೂಗಳು ಉತ್ತಮ ಡೈ ಗಳು ಎಲ್ಲವನ್ನೂ ಮಾಡುತ್ತೇವೆ, ಆದರೆ ಕೆಲವೊಂದು ಸಣ್ಣ ಪುಟ್ಟ ತಪ್ಪುಗಳನ್ನು ಮಾಡುತ್ತೇವೆ. ಇದರಿಂದ ಕೂದಲಿನ ಬೇರುಗಳು ಹಾನಿಗೊಳಗಾಗುತ್ತವೆ. ಕೂದಲು ಹಸಿಯಾಗಿ ಇರುವಾಗಲೇ ಬಾಚುವುದು, ಸಿಕ್ಕು ಬಿಡಿಸುವುದು ಮುಂತಾದವುಗಳನ್ನು ಮಾಡುವುದರಿಂದ ಹಾನಿಗೊಳಗಾಗುತ್ತವೆ. ತಲೆ ಸ್ನಾನ ಮಾಡಿದಾಗ ಕೂದಲಿನಲ್ಲಿರುವ ಕೆರಟಿನ್‌ ಅನ್ನುವ ಪ್ರೋಟೀನ್‌ ನ ಹೈಡ್ರೋಜಿನ್‌ ಬಾಂಡ್‌ಗಳು ದುರ್ಬಲಗೊಂಡಿರುತ್ತವೆ. ಕೂದಲನ್ನು ಹಾಗೆ ಬಿಡುವುದರಿಂದ ಹಾನಿಗೊಳಗಾಗಿ, ಕೂದಲು, ಉದುರುವಿಕೆ ಮತ್ತು ರಫ್‌ ಆಗುತ್ತವೆ.

ಇದನ್ನೂ ಓದಿ : Summer Skincare : ಬೆವರಿನ ದುರ್ಗಂಧದಿಂದ ಅವಮಾನ ಎದುರಿಸುತ್ತಿದ್ದೀರಾ? ಅದರಿಂದ ಪಾರಾಗಲು ಹೀಗೆ ಮಾಡಿ

ಒದ್ದೆ ಕೂದಲಿನ ಜೊತೆ ಈ ತಪ್ಪುಗಳನ್ನು ಮಾಡಲೇಬೇಡಿ:

  • ಒದ್ದೆಯಾದ ಕೂದಲನ್ನು ಎಂದಿಗೂ ಕಟ್ಟಬೇಡಿ :
    ಅತಿಯಾದ ಬಿಸಿಲಿರುವ ಈ ದಿನಗಳಲ್ಲಿ ತಲೆಸ್ನಾನ ಮಾಡುವುದು ಒಂದು ರೀತಿ ಸಮಾಧಾನ ನೀಡುತ್ತದೆ.ಅತಿ ಹೆಚ್ಚಿನ ಬಿಸಿಲು ಮತ್ತು ಬೆವರನ್ನು ತಡೆಯುವ ಸಲುವಾಗು ನಾವು ಬನ್‌ ಹಾಕಿಕೊಳ್ಳತ್ತೇವೆ. ಆದರೆ ಅದು ಒಣಗುತ್ತಾ ಬಂದ ನಂತರ ಅದರ ಎಲಾಸ್ಟಿಸಿಟಿ ಗುಣವು ಬದಲಾಗುತ್ತದೆ ಮತ್ತು ಅದು ಸಂಕುಚಿತ ಗೊಳ್ಳುತ್ತದೆ. ಕೂದಲು ಒದ್ದೆಯಗಿದ್ದಾಗ ದುರ್ಬಲಗೊಂಡಿರುತ್ತದೆ, ಎಂದು ನಾವು ನೆನಪಿಡಬೇಕು. ಒದ್ದೆಯಾದ ಕೂದಲನ್ನು ರಬ್ಬರ್‌ ಬ್ಯಾಂಡ್‌ನಿಂದ ಕಟ್ಟಿ. ನಂತರ ಅದನ್ನು ತೆಗೆದರೆ ಬ್ಯಾಂಡ್‌ ತುಂಬಾ ಕೂದಲುಗಳೇ. ಇದಕ್ಕೆ ಪರಿಹಾರವೆಂದರೆ ಕ್ಲಿಪ್‌ ಅಥವಾ ಹೇರ್‌ಪಿನ್‌ ಹಾಕಿಕೊಳ್ಳುವುದು.
  • ಒದ್ದೆಯಾದ ಕೂದಲಿನಲ್ಲಿಯೇ ಮಲಗ ಬೇಡಿ :
    ನೀವು ರಾತ್ರಿ ತಲೆ ಸ್ನಾನ ಮಾಡಿದ್ದರೆ ತಕ್ಷಣ ಮಲಗುವುದರಿಂದ ಅದರಲ್ಲಿ ಬ್ಯಾಕ್ಟೀರಿಯಾ ಮತ್ತು ಫಂಗಸ್‌ಗಳು ಬೆಳೆಯುತ್ತವೆ. ಇದರಿಂದ ಎಕ್ನಿ ಮತ್ತು ಮೊಡವೆಗಳು, ಒರಟು ಕೂದಲು, ಡೆಂಡ್ರಾಫ್‌ ಮುಂತಾದ ಸಮಸ್ಯೆಗಳು ಎದುರಾಗುತ್ತವೆ. ಇವುಗಳಿಂದ ದೂರವಿರಲು ಕಾಟನ್‌ ಪಿಲ್ಲೋಗಿಂತ ಸಿಲ್ಕ್‌ನ ಪಿಲ್ಲೋ ಬಳಕೆ ಮಾಡಿ. ಇದು ಕೂದಲು ದುರ್ಬಲಗೊಳ್ಳುವುದು ತಪ್ಪುತ್ತದೆ.
  • ಒದ್ದೆ ಕೂದಲನ್ನು ಟೂಲ್‌ ಬಳಸಿ ಒಣಗಿಸಿಕೊಳ್ಳ ಬೇಡಿ :
    ಬಿಸಿ ಗಾಳಿ ಬರುವ ಟೂಲ್‌ಗಳಿಂದ ಕೂದಲಿಗೆ ಹಾನಿಯಾಗುತ್ತದೆ. ಬೇಗನೆ ಒಣಗಿಸಲು, ಏನಾದರೂ ಸ್ಟೈಲ್‌ ಮಾಡಲು, ಕೂದಲನ್ನು ಸ್ಟ್ರೈಟ್‌ ಮಾಡಲು, ಕರ್ಲ ಮಾಡಲು ನಾವು ಅನೇಕ ಟೂಲ್‌ಗಳನ್ನು ಉಪಯೋಗಿಸುತ್ತೇವೆ. ಅವೆಲ್ಲವೂ ಹೀಟ್‌ ಟೂಲ್‌ಗಳೇ. ಒಂದು ವೇಳೆ ನಿಮಗೆ ಸ್ಟೈಲ್‌ ಮಾಡಲೇ ಬೇಕು ಎಂದಿದ್ದರೆ ಅದರ ಉಷ್ಣತೆ ಕಡಿಮೆ ಇಟ್ಟು ಕೊಳ್ಳಿ. ಈ ಸರಳ ಟಿಪ್ಸ್‌ ನಿಮ್ಮ ಕೂದಲನ್ನು ಹಾಳಾಗದಂತೆ ತಡೆಯಬಲ್ಲದು.
  • ಬಿರುಸಾಗಿ ಕೂದಲನ್ನು ಬಾಚ ಬೇಡಿ :
    ಯಾವಾಗಲೂ ತಲೆ ಸ್ನಾನ ಮಾಡಿದಾಗ ಕೂದಲು ಗಂಟಾಗಿಬಿಡುತ್ತದೆ. ಅದಕ್ಕೆ ಬಿರುಸಾಗಿ ಅದನ್ನು ಬಾಚುತ್ತೇವೆ. ಒಂದು ವೇಳೆ ಬಾಚಬೇಕೆಂದಿದ್ದರೆ ಅದಕ್ಕೆ ಯಾವುದಾದರೂ ಸಿರಮ್‌ ಅಥವಾ ಕಂಡೀಷನರ್‌ ಉಪಯೋಗಿಸಿ. ಇಲ್ಲವೆಂದರೆ ಮೈದುವಾದ ಬಾಚಣಿಕೆಯಿಂದ ಬಾಚಿ.
  • ಕೂದಲನ್ನು ಒರಟಾಗಿ ಒಣಗಿಸುವುದನ್ನು ಮಾಡಲೇ ಬೇಡಿ:
    ತಲೆ ಸ್ನಾನವಾದ ಕೂಡಲೇ ಒರಟಾದ ಟಾವೇಲ್‌ನಿಂದ ಕೂದಲನ್ನು ಒಣಗಿಸುವುದು ಹಾನಿಕಾರ. ಕೂದಲು ಒದ್ದೆಯಾಗಿದ್ದಾಗ ಕೂದಲಿನ ಫೊಲಿಕಲ್‌ಗಳು ದುರ್ಬಲವಾಗಿರುತ್ತವೆ. ಅದಕ್ಕಾಗಿ ಒರಟು ಟಾವೆಲ್‌ಗಳಿಂದ ಒರೆಸುವುದನ್ನು ಬಿಟ್ಟು ಮೈದುವಾದ ಹತ್ತಿಯ ಬಟ್ಟೆಯಿಂದ ನಿಧಾನವಾಗಿ ಒರೆಸಿ. ಕೂದಲಿನಿಂದ ನೀರು ಬೀಳುವುದು ತಪ್ಪುತ್ತದೆ. ಸಂಪೂರ್ಣವಾಗಿ ಒಣಗಿದ ನಂತರ ಕೂದಲನ್ನು ಕಟ್ಟಿಕೊಳ್ಳಿ.

ಇದನ್ನೂ ಓದಿ : Dental Care : ನಿಮ್ಮ ಹಲ್ಲುಗಳ ಮೇಲೆ ಬಿಳಿ ಕಲೆಗಳು ಕಾಣಿಸುತ್ತಿದೆಯಾ? ಅದಕ್ಕಿದೆ ಇಲ್ಲಿ ಪರಿಹಾರ!

(Wet Hair Mistakes that are damaging your hair)

Comments are closed.